ಕೇಸರಿ ಶಾಲು ಹಾಕಿದ್ದಕ್ಕೆ ರೊಚ್ಚಿಗೆದ್ದ ದೇವೇಗೌಡರು, ಕುಮಾರಸ್ವಾಮಿಯ ಹಿಂದೂ ಭಕ್ತಿಗೆ ಮತ್ತೊಂದು ಸಂಕಷ್ಟ

 | 
Hd

ಜಾತ್ಯಾತೀತ ಜನತಾದಳ ಎಂದು ಹೆಸರಿಟ್ಟು ಕೊಂಡು ಜೆಡಿಎಸ್ ಪಕ್ಷದವರು ಕೋಮುವಾದಿ ಬಿಜೆಪಿ ಜೊತೆ ಶಾಮೀಲಾಗಿದ್ದಾರೆ. ಕೇಸರಿ ಶಾಲನ್ನು ಹಾಕಿಕೊಂಡು ಬಿಜೆಪಿಯವರ ಜೊತೆಗೆ ಪ್ರತಿಭಟನೆಗೆ ಹೋಗಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಕೆರಗೋಡಿನಲ್ಲಿ ಅಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಗೆ ಕೇಸರಿ ಶಾಲು ಹಾಕಿದ್ದು ಯಾರು ಎನ್ನುವುದನ್ನು ಶಾಸಕ ಜಿ.ಟಿ.ದೇವೇಗೌಡ ವಿವರಿಸಿದ್ದಾರೆ.

ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ಹನುಮಧ್ವಜ ಇಳಿಸಿದ ಸಂಬಂಧ ವ್ಯಾಪಕ ಪ್ರತಿಭಟನೆ ನಡೆಯುತ್ತಿತ್ತು. ಬಿಜೆಪಿ ನಡೆಸುತ್ತಿದ್ದ ಪ್ರತಿಭಟನೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆದಿಯಾಗಿ ಜಾತ್ಯಾತೀತ ಜನತಾದಳ ಮುಖಂಡರೂ ಪಾಲ್ಗೊಂಡಿದ್ದರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕುಮಾರಸ್ವಾಮಿ ಕೇಸರಿ ಶಾಲನ್ನು ಹಾಕಿ ಕಾಂಗ್ರೆಸ್ ಮತ್ತು ಜಿಲ್ಲಾಡಳಿತದ ವಿರುದ್ದ ವಾಗ್ದಾಳಿ ನಡೆಸಿದ್ದರು. ಕುಮಾರಸ್ವಾಮಿ ಕೇಸರಿ ಶಾಲು ಹಾಕಿಕೊಂಡಿದ್ದನ್ನು ಕರ್ನಾಟಕ ಕಾಂಗ್ರೆಸ್ ದೊಡ್ದ ಮಟ್ಟದಲ್ಲಿ ಸುದ್ದಿ ಮಾಡಿತ್ತು.

ಸಾಮಾನ್ಯವಾಗಿ ಹಸಿರು ಶಾಲು ಹಾಕುವ ಕುಮಾರಸ್ವಾಮಿಗೆ ಅಂದು ಕೇಸರಿ ಶಾಲು ಹಾಕಿದ್ದು ಯಾರು ಎನ್ನುವ ವಿಚಾರವನ್ನು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಬಹಿರಂಗ ಪಡಿಸಿದ್ದಾರೆ. ಅದು ಬಿಜೆಪಿಯವರಾಗಲಿ ಅಥವಾ ಸಂಘ ಪರಿವಾರದವರಾಗಲಿ ಹಾಕಿದ ಶಾಲು ಅಲ್ಲ ಎಂದು ಜಿಟಿಡಿ ಹೇಳಿದ್ದಾರೆ. ನಗರದಲ್ಲಿ ಮಾತನಾಡುತ್ತಿದ್ದ ದೇವೇಗೌಡ, ಅಂದು ಕುಮಾರಸ್ವಾಮಿಗೆ ಕೇಸರಿ ಶಾಲು ಹಾಕಿದ್ದು ಬಿಜೆಪಿಯವರಲ್ಲ. 

ಪ್ರತಿಭಟನಾ ಸ್ಥಳಕ್ಕೆ ಆಗಮಿಸುವ ಮುನ್ನ ಕುಮಾರಸ್ವಾಮಿ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹೋಗಿದ್ದರು. ಅಲ್ಲೊಬ್ಬ ಹುಡುಗ, ಕೇಸರಿ ಶಾಲನ್ನು ಹಾಕಿದ್ದ ಎಂದು ಜಿಟಿಡಿ ಹೇಳಿದ್ದಾರೆ. ಹುಡುಗ ಹಾಕಿದ್ದ ಶಾಲು ಕುಮಾರಸ್ವಾಮಿಯವರ ಹೆಗಲ ಮೇಲಿತ್ತು. ಅಲ್ಲಿಂದ ಅವರು ನೇರವಾಗಿ ಪ್ರತಿಭಟನಾ ಸ್ಥಳಕ್ಕೆ ಬಂದರು. ಆದರೆ, ಕಾಂಗ್ರೆಸ್ಸಿನವರು ಅದನ್ನೇ ದೊಡ್ಡ ಸುದ್ದಿ ಮಾಡಿದರು. ನಾವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರಬಹುದು, ಆದರೆ ನಮ್ಮ ತತ್ವ ಸಿದ್ದಾಂತಕ್ಕೆ ಎಂದೂ ರಾಜಿ ಆಗುವುದಿಲ್ಲ ಎಂದು ಜಿ.ಟಿ.ದೇವೇಗೌಡ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.