ರಶ್ಮಿಕಾ ಮಂದಣ್ಣ ಗೆ ಕೈಕೊಟ್ಟ ದೇವರಕೊಂಡ, ಇನ್ಮುಂದೆ ಶೆಟ್ರೆ ಗತಿ ಎಂದ ಜನ
Nov 24, 2024, 11:44 IST
|
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ. ಜೋಡಿ ಆಗಾಗ ಒಟಗಟಿಗೆ ಕಾಣಿಸಿಕೊಂಡಿದ್ದರೂ ಸಹ, ಈ ವದಂತಿಗಳನ್ನು ತಳ್ಳಿಹಾಕುತ್ತಲೇ ಇದ್ದಾರೆ.ಇದರ ಬೆನ್ನಲ್ಲೇ ವಿಜಯ್ ದೇವರಕೊಂಡ ಇತ್ತೀಚೆಗೆ ಪ್ರೀತಿ, ಸಂಬಂಧಗಳು ಮತ್ತು ಮದುವೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಜತೆಗೆ ತಾನು ರಿಲೇಶನ್‌ಶಿಪ್‌ನಲ್ಲಿ ಇದ್ದೇನೆ ಎಂದು ಹೇಳಿದ್ದಾರೆ.
ಇನ್ನು ಸಂದರ್ಶನವೊಂದರಲ್ಲಿ ವಿಜಯ್‌ಪ್ರೀತಿಸುವುದು ಹೇಗೆ ಎಂದು ನನಗೆ ತಿಳಿದಿದೆ. ಮತ್ತು ಪ್ರೀತಿಸುವುದು ಏನು ಎಂದು ನನಗೆ ತಿಳಿದಿದೆ. ನನಗೆ ಅನ್‌ಕಂಡಿಷನಲ್ ಪ್ರೀತಿ ತಿಳಿದಿಲ್ಲ. ಏಕೆಂದರೆ ನನ್ನ ಪ್ರೀತಿಯು ನಿರೀಕ್ಷೆಗಳೊಂದಿಗೆ ಬರುತ್ತದೆ. ಮತ್ತು ಷರತ್ತುಗಳಿಲ್ಲದೆ ಬರುವ ಯಾವುದೇ ಪ್ರೀತಿಯ ಬಗ್ಗೆ ನನಗೆ ತಿಳಿದಿಲ್ಲ ಉಳಿದಂತೆ, ನಾನು ತುಂಬಾ ರೋಮ್ಯಾಂಟಿಸೈಸ್ಡ್ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಮದುವೆಯ ಬಗ್ಗೆ ನಟನಿಗೆ ಇರುವ ಅವರ ದೃಷ್ಟಿಕೋನ ಮತ್ತು ಒಬ್ಬರ ವೃತ್ತಿಜೀವನಕ್ಕೆ ಅಡ್ಡಿಯಾಗುತ್ತದೆಯೇ ಎಂಬ ಪ್ರಶ್ನೆ ಎದುರಾದಾಗ ನಟ ಹೇಳಿದ್ದು ಹೀಗೆ. ಇದು ಮಹಿಳೆಯರಿಗೆ ಹೆಚ್ಚು ಸವಾಲಾಗಿದೆ ಎಂದು ವಿಜಯ್ ದೇವರಕೊಂಡ ಹೇಳಿದರು. ಮದುವೆಯು ಯಾರೊಬ್ಬರ ವೃತ್ತಿಜೀವನದ ನಡುವೆ ಬರಬೇಕಾಗಿಲ್ಲ. ಹೆಣ್ಣಿಗೆ ಮದುವೆ ಸ್ವಲ್ಪ ಕಷ್ಟ ಖಂಡಿತ. ಇದು ನೀವು ಮಾಡುತ್ತಿರುವ ವೃತ್ತಿಯ ಮೇಲೆ ಅವಲಂಬಿತವಾಗಿರುತ್ತದೆ, ಎಂದು ಅವರು ಹೇಳಿದರು. ಬಳಿಕ ತಾನು ರಿಲೇಶನ್‌ಶಿಪ್‌ನಲ್ಲಿ ಇದ್ದೇನೆ ಎಂದು ಪರೋಕ್ಷವಾಗಿ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಗೊತ್ತಾಗಲಿ ಎಂದು ಹೇಳಿದರು.
ನನಗೆ 35 ವರ್ಷ; ನಾನು ಒಬ್ಬಂಟಿಯಾಗಿದ್ದೇನೆ ಎಂದು ನೀವು ಭಾವಿಸುತ್ತೀರಾ? ಎಂದು ಅವರೇ ಪ್ರಶ್ನೆ ಇಟ್ಟಿದ್ದಾರೆ. ಈ ಮೂಲಕ ರಿಲೇಶನ್‌ಶಿಪ್‌ನಲ್ಲಿ ಇದ್ದೇನೆ ಎಂದು ಒಪ್ಪಿಕೊಂಡಿದ್ದಾರೆ. ನೀವು ಎಂದಾದರೂ ಸಹ-ನಟಿಯ ಜೊತೆ ಡೇಟ್ ಮಾಡಿದ್ದೀರಾ ಎಂದು ಕೇಳಿದಾಗ, ನಟ ಖಂಡಿತ ಡೇಟಿಂಗ್ ಮಾಡುತ್ತಿರುವೆ ಎಂದು ಹೇಳಿದ್ದಾರೆ, ನಾನು ಡೇಟ್‌ಗಳಿಗೆ ಹೆಚ್ಚಾಗಿ ಹೋಗುವುದಿಲ್ಲ.
ನಾನು ಬಹಳ ಸಮಯದ ನಂತರ ಮಾತ್ರ ಕೆಲವೊಮ್ಮೆ ಹೊರಗೆ ಹೋಗುತ್ತೇನೆ ಎಂದು ಹೇಳಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ 2018 ರ ಚಲನಚಿತ್ರ ಗೀತ ಗೋವಿಂದಂ ಮತ್ತು 2019 ರ ಚಲನಚಿತ್ರ ಡಿಯರ್ ಕಾಮ್ರೇಡ್‌ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.