ದರ್ಶನ್ ಗೆ ಮದುವೆ ಆಮಂತ್ರಣ ನೀಡದ ಧನಂಜಯ್, ದಾಸನ ಸ್ನೇಹ ಬೆಳೆಸಲು ಹಿಂದೇಟು ಹಾಕಿದ ಡಾಲಿ
Jan 17, 2025, 16:55 IST
|

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ನಟ ಡಾಲಿ ಧನಂಜಯ, ತಮ್ಮ ವಿವಾಹದ ಲಗ್ನಪತ್ರಿಕೆ ಹಂಚುವುದರಲ್ಲಿ ಬಿಜಿಯಾಗಿದ್ದಾರೆ. ಈಗಾಗಲೇ ಹಲವು ರಾಜಕಾರಣಿಗಳು ಹಾಗೂ ಮಠಾಧೀಶರುಗಳಿಗೆ ಮದುವೆಯ ಆಹ್ವಾನ ಪತ್ರಿಕೆ ನೀಡಿರುವ ನಟ ಧನಂಜಯ್, ಇದೀಗ ಕನ್ನಡ ಚಿತ್ರರಂಗದ ಹಲವು ನಟ-ನಟಿಯರಿಗೆ ಲಗ್ನಪತ್ರಿಕೆ ನೀಡುವ ಮೂಲಕ ಮದುವೆಗೆ ಆಹ್ವಾನಿಸಿದ್ದಾರೆ.
ಒಂದೆಡೆ ಮದುವೆಯ ಸಿದ್ಧತೆ ನಡೆಸಿದ್ದಾರೆ .ಮದುವೆ ದಿನ ಹತ್ತಿರವಾಗುತ್ತಿದ್ದಂತೆ ಲಗ್ನ ಪತ್ರಿಕೆಯನ್ನು ಹಂಚುತ್ತಿದ್ದು ಪ್ರಮುಖ ಗಣ್ಯರನ್ನು ಮದುವೆಗೆ ಆಹ್ವಾನಿಸುತ್ತಿದ್ದಾರೆ. ಸಿದ್ದಗಂಗಾಶ್ರೀಗಳಿಗೆ ಲಗ್ನಪತ್ರಿಕೆ ನೀಡಿ ಆಶೀರ್ವಾದ ಪಡೆಯುವ ಮೂಲಕ ಆಮಂತ್ರಣ ಪತ್ರಿಕೆ ಹಂಚಲು ಆರಂಭಿಸಿದ್ದು, ಈಗಾಗಲೇ ಪ್ರಮುಖ ರಾಜಕೀಯ ನಾಯಕರು, ಸಿನಿ ಪ್ರಮುಖರಿಗೆ ಆಹ್ವಾನ ನೀಡಿದ್ದಾರೆ.
ಹಲವು ಗಣ್ಯರನ್ನು ಭೇಟಿಯಾಗಿರುವ ಅವರು ಮದುವೆಗೆ ಆಹ್ವಾನಿಸಿದ್ದಾರೆ. ಹಿರಿಯ ನಟ ವಿ ರವಿಚಂದ್ರನ್, ಮನೋರಂಜನ್ ರವಿಚಂದ್ರನ್, ಯಶ್ , ಸುದೀಪ್, ನಟಿ ಅದಿತಿ ಪ್ರಭುದೇವ, ರಮ್ಯಾ, ರಚಿತಾ ರಾಮ್,ಶಾಸಕ ಪ್ರದೀಪ್ ಈಶ್ವರ್, ಸಚಿವ ರಾಮಲಿಂಗಾರೆಡ್ಡಿ, ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ, ಹಿರಿಯ ನಟ ಜಗ್ಗೇಶ್, ಶಾಮನೂರು ಶಿವಶಂಕರಪ್ಪ ಸೇರಿ ಹಲವರನ್ನು ಭೇಟಿಯಾಗಿ ಮದುವೆಗೆ ಆಹ್ವಾನ ನೀಡಿದರು. ಇನ್ನು ಜೈಲಿನಿಂದ ಈಗತಾನೇ ಬಿಡುಗಡೆಯಾಗಿರುವ ದರ್ಶನ ಅವರಿಗೆ ಮುಂದಿನ ದಿನಗಳಲ್ಲಿ ಕೊಡಲಿದ್ದೇನೆ ಎಂದಿದ್ದಾರೆ.
ನಟ ಧನಂಜಯ್ ಯಾವ ಗಾಡ್‌ಫಾದರ್ ಇಲ್ಲದೆ ಚಿತ್ರರಂಗಕ್ಕೆ ಬಂದು ಹೀರೋ ಆದವರು. ಆರಂಭದಲ್ಲಿ ನಾಯಕನಾಗಿ ಹಲವು ಚಿತ್ರ ಮಾಡಿದರೂ ಸಿಗದ ಯಶಸ್ಸು ಟಗರು ಸಿನಿಮಾದಲ್ಲಿ ಖಳನಟನಾಗಿ ಅಬ್ಬರಿಸಿದ ಬಳಿಕ ಸಿಕ್ಕಿತು. ಧನಂಜಯನಾಗಿದ್ದ ಅವರು ರಾತ್ರೋ ರಾತ್ರಿ ಡಾಲಿ ಧನಂಜಯ್ ಆಗಿ ಜನಪ್ರಿಯತೆ ಗಳಿಸಿದರು. ನಟ ದರ್ಶನ್ ಹಾಗೂ ಸುದೀಪ್ ಇವರಿಗೆ ಹಲವಾರು ಸಿನಿಮಾಗಳಲ್ಲಿ ಬೆಂಬಲ ನೀಡಿದ್ದರು. ಇದೀಗ ಡಾಲಿ ಧನಂಜಯ ತಮಿಳು, ತೆಲುಗು, ಮಲಯಾಳಂ ಚಿತ್ರರಂಗದಲ್ಲಿ ಕೂಡ ಮಿಂಚುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.