ಬಿಗ್ ಬಾಸ್ ಮನೆಯಿಂದ ಬಂದ ಲಕ್ಷಾಂತರ ರೂಪಾಯಿ ಹಣ ದಾನ ಮಾಡಲು ಮುಂದಾದ ಧನರಾಜ್ ಆಚರ್
Jan 21, 2025, 16:14 IST
|

ಸೋಶಿಯಲ್ ಮೀಡಿಯಾ ಮೂಲಕ ಜನಪ್ರಿಯತೆ ಪಡೆದಿದ್ದ ಧನರಾಜ್ಗೆ ಬಿಗ್ ಬಾಸ್ ಬಾಗಿಲು ತೆರೆದ ಬಳಿಕ ನೇಮು-ಫ್ರೇಮು ಕೂಡ ಹೆಚ್ಚಿದೆ. ಯೂಟ್ಯೂಬರ್ ಆಗಿದ್ದ ಧನರಾಜ್ಗೆ ಅಪಾರ ಫ್ಯಾನ್ ಫಾಲೋವರ್ಸ್ ಕೂಡ ಇದ್ದಾರೆ. ತನ್ನ ಕಾಮಿಡಿಯಿಂದಲೇ ಪ್ರೇಕ್ಷಕರನ್ನ ರಂಜಿಸಿದ್ದ ಧನರಾಜ್ ಬಿಗ್ ಬಾಸ್ ಜರ್ನಿ ಮುಗಿಸಿದ್ರು.
ಇನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಧನರಾಜ್, ಮಾಧ್ಯಮಗಳಲ್ಲಿ ಸಂದರ್ಶನ್ ನೀಡ್ತಾ, ಬಿಗ್ ಬಾಸ್ ಮನೆಯಲ್ಲಿದ್ದ ಕ್ಷಣಗಳ ಬಗ್ಗೆ ಮಾತಾಡಿದ್ರು. ಇದೇ ವೇಳೆ ಸಂಭಾವನೆ ಬಗ್ಗೆ ಕೇಳಿದ ಪ್ರಶ್ನೆಗೂ ಧನರಾಜ್ ಉತ್ತರ ನೀಡಿದ್ದಾರೆ. ಧನರಾಜ್ ಪಡೆದ ಸಂಭಾವನೆ ಎಷ್ಟು ಅಂತ ತಿಳಿದುಕೊಳ್ಳುವ ಕುತೂಹಲ ಕೂಡ ಜನರಲ್ಲಿದೆ.
ಬಿಗ್ ಬಾಸ್ ಶೋನಿಂದ ಧನರಾಜ್ಗೆ ಸಿಕ್ಕ ಹಣ ಎಷ್ಟು ಎನ್ನುವ ಪ್ರಶ್ನೆಗೆ ಉತ್ತರಿಸದೆ ಚಮಕ್ ಕೊಟ್ಟ ಧನರಾಜ್, ಬಳಿಕ ನಾನು ಸಣ್ಣ ಮೊತ್ತವನ್ನ ಕೇಳಿದ್ದೆ. ಅದನ್ನೇ ಬಿಗ್ ಬಾಸ್ ನನಗೆ ಕೊಟ್ಟಿದೆ ಎಂದು ಹೇಳಿದ್ದಾರೆ.ಸಂಭಾವನೆಗಿಂತ ನನಗೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಕ್ಕ ಅವಕಾಶವೇ ದೊಡ್ಡದು. ನಾವು ಬಿಗ್ ಬಾಸ್ಗೆ ಯಾವಾಗಾಲೂ ಕೃತಜ್ಞರಾಗಿ ಇರುತ್ತೇವೆ ಎಂದು ಧನರಾಜ್ ಹೇಳಿಕೊಂಡಿದ್ದಾರೆ. ಕೆಲ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ನಟ ಧನರಾಜ್ ಹೇಳಿಕೊಂಡಿದ್ದಾರೆ.
ಇನ್ನು ಅವರೇ ಹೇಳಿರುವ ಹಾಗೆ ಬಿಗ್ಬಾಸ್ ಮನೆಯಲ್ಲಿ ಸಿಕ್ಕ ಹಣವನ್ನು ಪುತ್ತೂರಿನ ಆಶ್ರಮ ಒಂದಕ್ಕೆ ನೀಡುತ್ತೇನೆ ಎಂದು ಹೇಳಿದ್ದ ಅವರು ಅದರಂತೆ ಬಿಗ್ಬಾಸ್ ಮನೆಯಲ್ಲಿ ಬರುವ ನಾಲ್ಕು ಲಕ್ಷ ಇಪ್ಪತ್ತು ಸಾವಿರ ರೂಪಾಯಿ ಹಣ ನೀಡುವೆ ಎಂದಿದ್ದಾರೆ. ಕೊಟ್ಟ ಮಾತಿನಂತೆ ಮುಂದಿನ ದಿನಗಳಲ್ಲಿ ಹಣ ಬಂದ ಕೂಡಲೇ ನೀಡುವುದಾಗಿ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ. ತಮ್ಮ ಆಟದ ಹಾಗು ಮುಗ್ಧ ವ್ಯಕ್ತಿತ್ವದಿಂದ ಧನರಾಜ್ ಹಲವರ ಮನ ಗೆದ್ದಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.