ಧನರಾಜ್ ಹಾಗೂ ಗೌತಮಿ ನಡುವಿನ ಸಂಬಂಧ ಬಿಚ್ಚಿಟ್ಟ ಖ್ಯಾತ ಲಾಯರ್ ಶೈಲಜಾ
Jan 19, 2025, 22:38 IST
|

ಕನ್ನಡಿಗರ ಮೆಚ್ಚಿನ ಶೋ ಬಿಗ್ ಬಾಸ್ ಕನ್ನಡ ಸೀಸನ್ 11 ಅಂತಿಮ ದಿನಗಳತ್ತ ಸಾಗಿ ಬರುತ್ತಿದ್ದು, ಇನ್ನು ಕೇವಲ ಹತ್ತು ದಿನಗಳಷ್ಟೇ ಪ್ರಸಾರಗೊಳ್ಳಲಿ. ಕಳೆದ ಎಲ್ಲಾ ಸೀಸನ್‌ಗಳಿಗಿಂತ ಈ ಬಾರಿ ವಿನ್ನರ್ ಯಾರಾಗಬಹುದು ಎಂದು ಊಹಿಸುವುದು ಕೂಡ ಕಷ್ಟವಾಗಿದೆ. ಕಾರ್ಯಕ್ರಮದ ಆರಂಭದಲ್ಲಿ ಇಂತವರೇ ಗೆಲ್ಲಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದವರಿಗೆ ವಲ್ಡ್ ಕಾರ್ಡ್ ಎಂಟ್ರಿಯ ಸ್ಪರ್ಧಿಗಳು ಶಾಕ್ ಕೊಟ್ಟಿದ್ದು, ಹೀಗಾಗಿ ಈ ಬಾರಿ ಗೆಲುವು ಯಾರ ಪಾಲಾಗಲಿದೆ ಎನ್ನುವ ಸುಳಿವು ಇಲ್ಲದಂತಾಗಿದೆ.
ಸದ್ಯ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳು ಮಾಡುಇಲ್ಲವೇ ಮಡಿ ಪರಿಸ್ಥಿತಿಯಲ್ಲಿದ್ದಾರೆ. ಸದ್ಯ ಎಂಟು ಜನರ ಪೈಕಿ ಹನುಮಂತ ಟಿಕೆಟ್ ಟು ಫಿನಾಲೆ ಗೆದ್ದು ಫಿನಾಲೆಗೆ ಪ್ರವೇಶ ಪಡೆದಿದ್ದಲ್ಲದೇ ಬಿಗ್ ಬಾಸ್ ಕನ್ನಡ ಸೀಸನ್ 11ರ ಅಲ್ಟಿಮೇಟ್ ಕ್ಯಾಪ್ಟನ್ ಆಗಿ ನಾಮಿನೇಷನ್‌ನಿಂದ ಪಾರಾಗಿದ್ದಾರೆ. ಆದರೆ ಉಳಿದ ಸ್ಪರ್ಧಿಗಳ ಎದೆಯಲ್ಲಿ ಢವಢವ ಹೆಚ್ಚಾಗಿದೆ.
ಧನರಾಜ್, ಗೌತಮಿ ಜಾದವ್, ಉಗ್ರಂ ಮಂಜು, ತ್ರಿವಿಕ್ರಮ್, ಮೋಕ್ಷಿತಾ, ಭವ್ಯ ಗೌಡ ಹಾಗೂ ರಜತ್ ಈ ವಾರ ನಾಮಿನೇಟ್ ಆಗಿದ್ದು, ಈ ವಾರಾಂತ್ಯದಲ್ಲಿ ಇಬ್ಬರು ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ತಮ್ಮ ಮನೆಗೆ ಹೋಗುವುದು ಖಚಿತವಾಗಿತ್ತು. ಅದರಲ್ಲಿ ಈಗ ಗೌತಮಿ ಜಾದವ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಮುಂದಿನ ಸರದಿ ಧನರಾಜ್ ದು ಎನ್ನುವ ಮಾತು ಕೇಳಿ ಬರ್ತಿದೆ.
ಧನರಾಜ್ ಆಟದಲ್ಲಿ ಗ್ರೇ ಏರಿಯಾ ಬಳಕೆ ಮಾಡಿಕೊಂಡಿದ್ದಾರೆಯೇ ಹೊರತು ಮೋಸ ಮಾಡಿಲ್ಲ ಆದರೂ ಅವರಿಂದ ಇಮ್ಯೂನಿಟಿಯನ್ನು ಹಿಂಪಡೆಯಲಾಗಿದೆ. ಇದು ಬಿಗ್ ಬಾಸ್ ತಂಡ ಮಾಡುತ್ತಿರುವ ಮೋಸ ಎನ್ನುವ ಅಭಿಪ್ರಾಯ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ. ಈ ಹಿಂದೆ ಭವ್ಯ ಗೌಡ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಮಾಡಿದ ಮೋಸ ಬಟಾಬಯಲಾದರೂ ಕೂಡ ಆಕೆಯನ್ನೇ ಆ ವಾರದ ಕ್ಯಾಪ್ಟನ್ ಆಗಿ ಮುಂದುವರಿಸಲಾಗಿತ್ತು.
ಆದರೆ ಈಗ ಧನರಾಜ್ ವಿಚಾರದಲ್ಲಿ ಬಿಗ್ ಬಾಸ್ ತಂಡ ಯಾಕೆ ಹೀಗೆ ಮಾಡಿದ್ದಾರೆ. ಇನ್ನು ಫಿನಾಲೆಯಂತಹ ಮಹತ್ವದ ಸಮಯದಲ್ಲಿ ಟಾಸ್ಕ್ ರಚಿಸಲು ಬಂದವರಿಗೆ ಮುಂದೆ ಕನ್ನಡಿ ಇರುವುದು ಗೊತ್ತಿರಲಿಲ್ಲವೇ ಎನ್ನುವ ಪ್ರಶ್ನೆಗಳು ಪ್ರೇಕ್ಷಕರನ್ನು ಕಾಡುತ್ತಿದೆ. ಭವ್ಯಾ ಈ ಹಿಂದೆ ಕೂಡ ಮೋಸ ಮಾಡಿದ್ದಾರೆ ಅವರಿಗಾದರೆ ಒಂದು ನ್ಯಾಯ ಧನರಾಜ್ ಆದ್ರೆ ಇನ್ನೊಂದು ನ್ಯಾಯವೇ ಎಂದು ಪ್ರಶ್ನೆ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.