ಯಜುವೇಂದ್ರ ಚಹಲ್ ಬ್ರೇಕಪ್ ಬಳಿಕ ಒಂದು ಕೋಟಿಗೂ ಅಧಿಕ ಬೆಲೆಯ ಕಾರು ಖರೀದಿ ಮಾಡಿದ ಧನುಶ್ರೀ ವರ್ಮಾ
Mar 3, 2025, 07:45 IST
|

ನಿಮಗೆಲ್ಲ ಗೊತ್ತಿರುವ ಹಾಗೆ ಟೀಂ ಇಂಡಿಯಾ ಕ್ರಿಕೆಟಿಗ ಯಜುವೇಂದ್ರ ಚಹಾಲ್ ಹಾಗೂ ಧನಶ್ರೀ ವರ್ಮಾ ಸಂಬಂಧ ಮುರಿದು ಬಿದ್ದಿದೆ. ಪ್ರಕರಣ ಕೌಟುಂಬಿಕ ಕೋರ್ಟ್ ಮೆಟ್ಟಿಲೇರಿದೆ. ಇದರ ಬೆನ್ನಲ್ಲೇ ಧನಶ್ರೀ ವರ್ಮಾ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಧನಶ್ರಿಗಿಂತ ಆಕೆಯ ಕಾರಿನ ಮೇಲೆ ಎಲ್ಲರ ಕಣ್ಮು ಬಿದ್ದಿದೆ.
ಸದ್ಯ ಇಬ್ಬರು ಬೇರೆ ಬೇರೆಯಾಗಿ ನೆಲೆಸಿದ್ದಾರೆ. ಇದರ ನಡುವೆ ವಿಚ್ಚೇದನದ ವೇಳೆ ಚಹಲ್ ತಮ್ಮ ಆಸ್ತಿಯಲ್ಲಿ 60 ಕೋಟಿ ರೂಪಾಯಿ ಮೊತ್ತವನ್ನು ಧನಶ್ರೀಗೆ ನೀಡಬೇಕು ಅನ್ನೋ ಸುದ್ದಿಗಳು ಹರಿದಾಡಿತ್ತು. ಇದೀಗ ಪ್ರಕರಣ ಕೋರ್ಟ್ ಮೆಟ್ಟಿಲೇರಿದ ಬಳಿಕ ಧನಶ್ರೀ ವರ್ಮಾ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ದುಬಾರಿ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಬಂದಿಳಿದ ಧನಶ್ರೀ ವರ್ಮಾ ಪಾಪರಾಜಿಗಳ ಕಣ್ಮಿಗೆ ಬಿದ್ದಿದೆ. ಆದರೆ ಎಲ್ಲರ ಕಣ್ಣು ಇದೀಗ ಧನಶ್ರೀ ಗಿಂತ ಆಕೆಯ ಕಾರಿನ ಮೇಲೆ ನೆಟ್ಟಿದೆ.
ಧನಶ್ರೀ ವರ್ಮಾ ಏರ್‌ಪೋರ್ಟ್‌ಗೆ ತಮ್ಮ ಮರ್ಸಿಡೀಸ್ ಬೆಂಜ್ ಸಿ ಕ್ಲಾಸ್ ಸೆಡಾನ್ ಕಾರಿನ ಮೂಲಕ ಆಗಮಿಸಿದ್ದರು. ನೀಲಿ ಬಣ್ಣದ ಈ ಸೆಡಾನ್ ಲಕ್ಷುರಿ ಕಾರಿನ ಮೂಲಕ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಧನಶ್ರೀ ವರ್ಮಾ ವಿಡಿಯೋ ವೈರಲ್ ಆಗಿದೆ. 2021ರಲ್ಲಿ ಧನಶ್ರೀ ವರ್ಮಾ ಈ ಮರ್ಸಿಡೀಸ್ ಬೆಂಜ್ ಸಿ ಕ್ಲಾಸ್ ಕಾರು ಖರೀದಿಸಿದ್ದಾರೆ. ಇದರ ಟಾಪ್ ಮಾಡೆಲ್ ಎಕ್ಸ್ ಶೋ ರೂಂ ಬೆಲೆ 66.25 ಲಕ್ಷ ರೂಪಾಯಿ. ತೆರಿಗೆ, ವಿಮೆ ಸೇರಿದಂತೆ ಇತರ ಎಲ್ಲಾ ವೆಚ್ಚ ಸೇರಿದರೆ ಆನ್ ರೋಡ್ ಬೆಲೆ 1 ಕೋಟಿ ರೂಪಾಯಿ.
ಇನ್‌ಸ್ಟಾಗ್ರಾಂ, ಯೂಟ್ಯೂಬ್, ಸ್ಮಾಲ್ ಸ್ಕ್ರೀನ್, ಆಲ್ಬಮ್ ಸೇರಿದಂತೆ ಕೆಲ ವೇದಿಕೆಗಳಲ್ಲಿ ಡ್ಯಾನ್ಸ್ ಮೂಲಕ ವೃತ್ತಿ ಬದುಕು ನಡೆಸುತ್ತಿದ್ದ ಧನಶ್ರೀ ವರ್ಮಾ, ಕ್ರಿಕೆಟಿಗ ಯಜುವೇಂದ್ರ ಚಹಾಲ್ ಮದುವೆಯಾದ ಬಳಿಕ ದೇಶಾದ್ಯಂತ ಸುದ್ದಿಯಾಗಿದ್ದರು. ಪತಿ ಚಹಲ್ ಜೊತೆ ರೀಲ್ಸ್, ಟೀಂ ಇಂಡಿಯಾ ಕ್ರಿಕೆಟಿಗರ ಜೊತೆ ರೀಲ್ಸ್ ಮಾಡುವ ಮೂಲಕ ಭಾರಿ ವೈರಲ್ ಆಗಿದ್ದಾರೆ. ಈ ಮೂಲಕ ಧನಶ್ರೀ ವರ್ಮಾ ತಮ್ಮ ಜನಪ್ರಿಯತೆ ಹಾಗೂ ಆದಾಯವನ್ನೂ ಹೆಚ್ಚಿಸಿಕೊಂಡಿದ್ದರು.
ಇತ್ತ ಯಜುವೇಂದ್ರ ಚಹಾಲ್ ಟೀಂ ಇಂಡಿಯಾದ ಖಾಯಂ ಸದಸ್ಯರಾಗಿದ್ದ ಕಾರಣ ಬಿಸಿಸಿಐನಿಂದ ಕೋಟಿ ಕೋಟಿ ರೂಪಾಯಿ ಒಪ್ಪಂದ ರೂಪದಲ್ಲಿ ಪಡೆದಿದ್ದರು. ಇದರ ನಡುವೆ ಧನಶ್ರೀ ವರ್ಮಾ ದುಬಾರಿ ಕಾರು ಖರೀದಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.