80kg ಇದ್ದ ಧನುಶ್ರೀ ಮತ್ತೆ 30Kg ಇಳಿಸಿಕೊಂಡು ಮೊದಲಿನಂತಾಗಿದ್ದಾರೆ, ಇದಲ್ಲವೇ ಸಾಧನೆ ಅಂದರೆ
Nov 14, 2024, 10:16 IST
|
ಗುಂಡು ಗುಂಡಾಗಿ ಗಮನ ಸೆಳೆದಿದ್ದ ಬಿಗ್ಬಾಸ್ ಸೀಸನ್ 8ರ ಸ್ಪರ್ಧಿ ಟಿಕ್ ಟಾಕ್ ಸ್ಟಾರ್ ಆಗಿ ಖ್ಯಾತಿ ಪಡೆದುಕೊಂಡವರು ಧನುಶ್ರೀ. ಜ್ಯೂನಿಯರ್ ನಿತ್ಯಾ ಮೆನನ್ ಅಂತಲೇ ಧನುಶ್ರೀ ಅವರನ್ನ ಕರೆಯುತ್ತಾರೆ. ಟಿಕ್ ಟಾಕ್, ಇನ್ಸ್ಟಾಗ್ರಾಮ್ ರೀಲ್ಸ್ ಮೂಲಕ ಫೇಮಸ್ ಆಗಿದ್ದ ಧನುಶ್ರೀ ದೇಹದ ತೂಕವನ್ನು ಇಳಿಸಿಕೊಂಡಿದ್ದಾರೆ.
ಹಾಸನದ ಮೂಲದ ಧನುಶ್ರೀ ಅವರು ಸದ್ಯ ಯ್ಯೂಟೂಬ್ ಚಾನೆಲ್ನಲ್ಲಿ ಮಿಂಚುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮೂಲಕ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದ್ದಾರೆ. ಇದೀಗ ಧನುಶ್ರೀ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಆ ವಿಡಿಯೋದಲ್ಲಿ ನಟಿ ತಮ್ಮ ದೇಹದ ತೂಕವನ್ನು ಹಂತ ಹಂತವಾಗಿ ಇಳಿಸಿಕೊಂಡಿದ್ದು ಹೇಗೆ ಅಂತ ತಿಳಿಸಿದ್ದಾರೆ. ಅಲ್ಲದೇ ಫಿಟ್‌ನೆಸ್ ಕಡೆಗೆ ಧನುಶ್ರೀ ಸಿಕ್ಕಾಪಟ್ಟೆ ಗಮನ ನೀಡುತ್ತಾರೆ. ಈ ಹಿಂದೆ ಜಿಮ್ನಲ್ಲಿ ವರ್ಕ್ ಔಟ್ ಮಾಡುತ್ತಿರೋ ವಿಡಿಯೋಗಳು ಹಾಗೂ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ, ಚರ್ಮ, ಕೂದಲು, ಸೌಂದರ್ಯದ ಬಗ್ಗೆ ಟಿಪ್ಸ್‌ಗಳನ್ನು ನೀಡುತ್ತಿರುತ್ತಾರೆ. ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇನ್ನು ಈ ಹಿಂದೆ ಕೂಡ ಧನುಶ್ರೀ ಸಣ್ಣಗಾಗುವ ಪ್ರಯತ್ನದಲ್ಲಿದ್ದರಂತೆ. ತೂಕ ಇಳಿಸಿಕೊಳ್ಳಲು ಒಂದು ಚೂರು ರೆಸ್ಟ್ ಮಾಡದೆ ಡಯಟ್ ಮತ್ತು ವರ್ಕೌಟ್ ಮಾಡಿದ್ದಾರೆ. ಇದೇ ಕಾರಣ ಈಗ ವಿಪರೀತ ಚಳಿ ಜ್ವರದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು.
ಸಿಕ್ಕಾಪಟ್ಟೆ ವೈರಲ್ ರೀಲ್ಸ್‌ಗಳನ್ನು ಮಾಡುವ ಧನುಶ್ರೀ ಆಸ್ಪತ್ರೆ ಸೇರಿರುವ ಬೆಡ್ ಮೇಲೆ ಮಲಗಿರುವ ಫೋಟೋ ಶೇರ್ ಕೂಡ ಮಾಡಿದ್ರು. ಆದರೆ ಈಗ ಫಿಟ್ ಅಂಡ್ ಫೈನ್ ಆಗಿ ಮಿಂಚುತ್ತಿದ್ದಾರೆ (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.