ಅರ್ಜುನ್ ಸರ್ಜಾ ಮಗಳ ಮದುವೆಯಲ್ಲಿ ಭರ್ಜರಿ ಸ್ಟೆಪ್ ಹಾಕಿದ ಧ್ರುವ ಸರ್ಜಾ

 | 
Us

ಬಹುಭಾಷಾ ನಟ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ತನ್ನ ಮೊದಲ ಪುತ್ರಿ ಐಶ್ವರ್ಯಾ ಸರ್ಜಾಗೆ ಜೂನ್ 10ರಂದು ಮದುವೆ ಮಾಡಿದ್ರು. ತಮಿಳು ಚಿತ್ರರಂಗದ ಹಾಸ್ಯ ನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ಅವರೊಂದಿಗೆ ಐಶ್ವರ್ಯ ಸರ್ಜಾ ದಾಂಪತ್ಯಶುರು ಮಾಡಿದ್ದಾರೆ. ಜೂನ್ 10ರಂದು ಐಶ್ವರ್ಯ ಸರ್ಜಾ ಉಮಾಪತಿ ರಾಮಯ್ಯ ಕಲ್ಯಾಣೋತ್ಸವ ನಡೆದಿದೆ.

ಚೆನ್ನೈನಲ್ಲಿ ಅರ್ಜುನ್ ಸರ್ಜಾ ಅವರೇ ಹನುಮಾನ್ ದೇಗುಲ ಕಟ್ಟಿಸಿದ್ದರು. ಈ ದೇಗುಲದಲ್ಲಿಯೇ ಕಳೆದ ಅಕ್ಟೋಬರ್ 27 ರಂದು ಐಶ್ವರ್ಯಾ ಸರ್ಜಾ, ಉಮಾಪತಿ ನಿಶ್ಚಿತಾರ್ಥ ನಡೆದಿತ್ತು. ಈಗ ಇಲ್ಲಿಯೇ ಮದುವೆ ಕೂಡ ನಡೆದಿದೆ. ಈ ಮದುವೆಯ ರಿಸೆಪ್ಷನ್‌ನಲ್ಲಿ ನಟ ಧ್ರುವ ಸರ್ಜಾ ಹಾಗು ಅರ್ಜುನ್ ಸರ್ಜಾ ದಂಪತಿ, ಐಶ್ವರ್ಯಾ ಸರ್ಜಾ ಉಮಾಪತಿ ರಾಮಯ್ಯ ಸೇರಿದಂತೆ ಸರ್ಜಾ ಕುಟುಂಬ ಮಸ್ತ್ ಡಾನ್ಸ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ.

ಐಶ್ವರ್ಯಾ ಸರ್ಜಾ ಉಮಾಪತಿ ರಾಮಯ್ಯರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್. ಪ್ರೀತಿಸುತ್ತಿದ್ದ ಈ ಜೋಡಿ ಮನೆಯವರನ್ನ ಒಪ್ಪಿಸಿ ಮದುವೆ ಆಗಿದ್ದಾರೆ. ಐಶ್ವರ್ಯಾ ಮತ್ತು ಉಮಾಪತಿ ಮದುವೆ ಆರತಕ್ಷತೆ, ವೆಡ್ಡಿಂಗ್ ಪಾರ್ಟಿ ಬಹಳ ಅದ್ದೂರಿಯಾಗಿ ಮಾಡಲಾಗಿದೆ. ಆ ವಿಡಿಯೋಗಳು ಈಗ ಒಂದೊಂದೇ ಹೊರ ಬರುತ್ತಿವೆ. ಈ ಆರತಕ್ಷತೆ ಕಾರ್ಯಕ್ರಮದಲ್ಲಿ ತೆಲುಗು, ತಮಿಳು, ಮಲಯಾಳಂ, ಕನ್ನಡ ಭಾಷೆಯ ಚಿತ್ರರಂಗದ ಗಣ್ಯರು ಆಗಮಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ. 

ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಮಗಳು ಧೃತಿ ಜೊತೆಗೆ ಈ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಖ್ಯಾತ ಕೊರಿಯೋಗ್ರಾಫರ್ ಪ್ರಭುದೇವ ಅವರು ಈ ಖುಷಿಯಲ್ಲಿ ಭಾಗಿಯಾಗಿದ್ದರು.ಐಶ್ವರ್ಯಾ ಮದುವೆಗೆ ಸಂಗೀತ್ ಸಮಾರಂಭಕ್ಕೆ ಹೆಸರಾಂತ ಕಲಾ ನಿರ್ದೇಶಕ ಮೋಹನ್ ಅವರು ಅದ್ಧೂರಿ ಸೆಟ್ ಹಾಕಿದ್ದರು. ಎರಡು ಕುಟುಂಬದ ಬಂಧು ಮಿತ್ರರು ಈ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.