ರೇಣುಕಾಸ್ವಾಮಿಯ ಗರ್ಭಿಣಿ ಪತ್ನಿಯನ್ನು ನೋಡಿ ಬಿಕ್ಕಿಬಿಕ್ಕಿ ಅತ್ತ ಧ್ರುವ ಸರ್ಜಾ;

 | 
Yy

ಕನ್ನಡದ ಉತ್ತಮ ನಟರಲ್ಲಿ ಧ್ರುವ ಸರ್ಜಾ ಕೂಡ ಒಬ್ಬರು. ಕರುಣೆ ಯಲ್ಲಿ ಎಲ್ಲರಿಗಿಂತ ಮುಂಚೂಣಿಯಲ್ಲಿರುವ ನಾಯಕ ಇವರು. ಹೌದು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಕರ್ನಾಟಕದಲ್ಲಿ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ನಟ ದರ್ಶನ್ ತೂಗುದೀಪ ಸೇರಿ 17 ಮಂದಿಯನ್ನು ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಈ ನಡುವೆ ತನಿಖೆಯ ಕೊನೇ ಹಂತಕ್ಕೆ ಬಂದಿದ್ದು, ಇನ್ನಷ್ಟು ಸಾಕ್ಷ್ಯಗಳ ಹುಡುಕಾಟದಲ್ಲಿದ್ದಾರೆ ಪೊಲೀಸರು.

 ದರ್ಶನ್‌ ಅವರ ಆಪ್ತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಮಾಡಿದ ಎಂಬ ಕಾರಣಕ್ಕೆ, ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಿ ಪಟ್ಟಣಗೆರೆ ಶೆಡ್‌ನಲ್ಲಿ ಮೃಗೀಯ ರೀತಿಯಲ್ಲಿ ಆತನ ಮೇಲೆ ಎರಗಿ ಹತ್ಯೆ ಮಾಡಲಾಗಿತ್ತು.ಈ ಪ್ರಕರಣದ ಬಳಿಕ ದರ್ಶನ್‌ ಪರವಾಗಿ ಕೆಲವರು ಮಾತನಾಡಿದರೆ, ಇನ್ನು ಕೆಲವರು ನ್ಯಾಯದ ಪರ ನಿಂತಿದ್ದರು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ ಎಂದೂ ಸಿನಿಮಾ ಸೆಲೆಬ್ರಿಟಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.

ಇದರಾಚೆಗೆ ಇದರ ಬಗ್ಗೆ ಮಾತನಾಡುವುದೇ ಬೇಡ ಎಂದು ಮಾಧ್ಯಮಗಳಿಂದಲೇ ಅಂತರ ಕಾಯ್ದುಕೊಂಡಿದ್ದರು ಇನ್ನು ಕೆಲವರು ದರ್ಶನ್‌ ಆಪ್ತರು. ಇದೀಗ ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ ಹತ್ಯೆಯಾದ ರೇಣುಕಾಸ್ವಾಮಿ ಕುಟುಂಬದ ಬೆನ್ನಿಗೆ ನಿಂತಿದ್ದಾರೆ. ಅವರ ತಂದೆಯ ಜತೆಗೆ ಫೋನ್‌ ಕರೆ ಮೂಲಕ ಮಾತನಾಡಿ ಸಾಂತ್ವನ ಹೇಳಿದ್ದಾರೆ.ಹತ್ಯೆಯಾದ ಚಿತ್ರದುರ್ಗದ ರೇಣುಕಾಸ್ವಾಮಿಯ ಪತ್ನಿಯೂ ಗರ್ಭಿಣಿ ಆಗಿರುವದರಿಂದ ಹಣ ಸಹಾಯ ಮಾಡಿದ್ದಾರೆ.

ಈ ಬಗ್ಗೆಯೂ ಸೋಷಿಯಲ್‌ ಮೀಡಿಯಾದಲ್ಲಿ ಕಳವಳ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೆ ರೇಣುಕಾಸ್ವಾಮಿ ಮನೆಗೆ ಧ್ರುವ ಸರ್ಜಾ ಫ್ಯಾನ್ಸ್‌ ಭೇಟಿ ನೀಡಿ, ಬೆಂಬಲ ಸೂಚಿಸುವುದರ ಜತೆಗೆ ನಾವು ಸದಾ ನಿಮ್ಮ ಜತೆಗಿದ್ದೇವೆ. ಧ್ರುವ ಅಣ್ಣನೂ ನಿಮ್ಮ ಜತೆಗಿರುತ್ತಾರೆ ಎಂದೂ ಹೇಳಿದ್ದಾರೆ. ಚಿರು ಅವ್ರು ಜೂನ್‌ 7ರಂದು ನಿಧನರಾದ್ರು. ಅತ್ತಿಗೆ ಮೇಘನಾ ಅವ್ರು ಆಗ ಗರ್ಭಿಣಿ. ಮೇಘನಾ ಅವ್ರ ಹೊಟ್ಟೆಯಲ್ಲಿ ಮಗು ಇದ್ದಾಗ ಚಿರು ಅಣ್ಣ ತೀರಿಹೋದ್ರು. 

ಆ ನೋವು ಸಂಕಟ ಧ್ರುವ ಅವರಿಗೆ ಗೊತ್ತು. ನಮಗೆ ಇಲ್ಲಿಗೆ ಕಳಿಸಿ, ಅವರಿಗೆ ಏನೆಲ್ಲ ಸಪೋರ್ಟ್‌ ಬೇಕೋ ಮಾಡಲು ಹೇಳಿ ಎಂದು ಕಳಿಸಿದ್ದಾರೆ ಎಂದು ಧ್ರುವ ಸರ್ಜಾ ಫ್ಯಾನ್ಸ್‌ ಅವರ ಮನೆಯಲ್ಲಿನ ಮಾತುಕತೆಯ ವಿಡಿಯೋ ಶೇರ್‌ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.