ಎಲ್ಲವನ್ನೂ ಮರೆತು ಕಾಟೇರ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಭೇಟಿ ಕೊಟ್ಟ ಧ್ರುವ ಸರ್ಜಾ

 | 
ಪ

ಯಾವುದೇ ಚಿತ್ರರಂಗದಲ್ಲಿ ಎರಡು ಕುಟುಂಬಗಳ ನಡುವೆ, ಇಬ್ಬರು ತಾರೆಯರ ನಡುವೆ ವೈಮಸ್ಸು ಇದ್ದೇ ಇರುತ್ತೆ. ಅದು ಜಗತ್ತಿಗೂ ಗೊತ್ತಿರುತ್ತೆ. ಆದರೆ, ಇಬ್ಬರೂ ಅದನ್ನು ಗೊತ್ತಿದ್ದೋ, ಗೊತ್ತಿಲ್ಲದೆಯೋ ಮುಚ್ಚಿಡುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಹಾಗಂತ ಈ ವೈಮನಸ್ಸು ಕೂಡ ಶಾಶ್ವತವೇನೂ ಅಲ್ಲ. ಯಾವಾಗ ಬೇಕಾದರೂ ಮತ್ತೆ ಒಂದಾಗುತ್ತಾರೆ.

ಕಾವೇರಿ ಬಂದ್ ಸಮಯದಲ್ಲಿ ಶಿವಣ್ಣನೊಂದಿಗೆ ಧ್ರುವ ಸರ್ಜಾ ಕೂತಿದ್ದರು. ಇತ್ತ ದರ್ಶನ್ ವೇದಿಕೆ ಮೇಲೆ ಬರುತ್ತಿದ್ದಂತೆ ಧ್ರುವ ಸರ್ಜಾ ಅಲ್ಲಿಂದ ಹೊರಟು ಹೋಗಿದ್ದರು. ವೇದಿಕೆ ಮೇಲೆ ಒಟ್ಟಿಗೆ ಕಂಡರೂ ಮಾತಾಡುಕೊಂಡಿರಲಿಲ್ಲ. ಅದೇ ಹುಟ್ಟುಹಬ್ಬದ ಸಮಯದಲ್ಲಿ ದರ್ಶನ್ ಸರ್‌ಗೆ ಮೂರು ಪ್ರಶ್ನೆಗಳನ್ನು ಕೇಳಬೇಕು. ಅದು ಉತ್ತರ ಸಿಕ್ಕ ಮೇಲೆ ನನಗೊಂದು ಕ್ಲಾರಿಟಿ ಸಿಗುತ್ತೆ. ನಮಗೂ ಒಂದು ಸೆಲ್ಫ್‌ ರೆಸ್ಪೆಕ್ಟ್ ಅಂತ ಇರುತ್ತೆ ಎಂದು ಹೇಳಿದ್ದರು. 

ಅಲ್ಲಿಂದ ಇಬ್ಬರು ನಡುವೆ ಏನೋ ನಡೆದಿದೆ ಅನ್ನೋ ಖಾತರಿಯಾಗಿತ್ತು. ಅಸಲಿಗೆ ಇಬ್ಬರ ನಡುವೆ ಅಂತಹದ್ದೇನಾಗಿತ್ತು. ಅರ್ಜುನ್ ಸರ್ಜಾ ನಿರ್ದೇಶಿಸಿದ ಪ್ರೇಮ ಬರಹ ಸಿನಿಮಾದಲ್ಲಿ ದರ್ಶನ್ ವಿಶೇಷವಾದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು. ಈ ಸಿನಿಮಾದಿಂದಲೇ ಇವರಿಬ್ಬರ ನಡುವಿನ ವೈಮನಸ್ಸು ಶುರುವಾಗಿತ್ತು. ಆಗ ದರ್ಶನ್‌ಗೆ ಮ್ಯಾನೇಜರ್ ಆಗಿದ್ದ ಮಲ್ಲಿಕಾರ್ಜುನ್ ಈ ಸಿನಿಮಾ ವಿತರಣೆಗೆ ಮುಂದಾಗಿದ್ದರು. 

ಆದರೆ, ಸಿನಿಮಾದಿಂದ ಅಷ್ಟಾಗಿ ಲಾಭ ಬಂದಿರಲಿಲ್ಲ. ಈ ವೇಳೆ ಮಲ್ಲಿಕಾರ್ಜುನ್ ಸಾಲದ ಸುಳಿಗೆ ಸಿಲುಕಿ ಚಿತ್ರರಂಗದಿಂದ ದೂರವಾಗಿದ್ದರು. ಇಲ್ಲಿಂದ ಅರ್ಜುನ್ ಸರ್ಜಾ, ದರ್ಶನ್ ಹಾಗೂ ಧ್ರುವ ಸರ್ಜಾ ನಡುವೆ ಬಿರುಕು ಬಿಡುವುದಕ್ಕೆ ಆರಂಭ ಆಗಿತ್ತು. ಕೋಟಿ ಕೋಟಿ ಹಣದ ವ್ಯವಹಾರ ಎರಡೂ ಕುಟುಂಬಕ್ಕೆ ಕಂಟಕವಾಗಿತ್ತು ಎಂದು ಚಿತ್ರರಂಗದ ಬಲ್ಲ ಮೂಲಗಳು ಹೇಳುತ್ತಿವೆ. ಈಗ ಅದೆಲ್ಲವನ್ನೂ ಮರೆತು ಧ್ರುವ ಸರ್ಜಾ ಅವರು ದರ್ಶನ್ ನಟಿಸಿರುವ ಕಾಟೇರಾ ಸಿನಿಮಾ ವೀಕ್ಷಿಸಿ ಸೂಪರ್ ಅಂದಿದ್ದಾರೆ. 

ಇದೆಲ್ಲ ನೋಡುತ್ತಿದ್ದರೆ ಇನ್ನು ಕೆಲವೇ ದಿನಗಳಲ್ಲಿ ವೈಮನಸ್ಸು ದೂರವಾಗಿ ಒಂದಾಗುವುದರಲ್ಲಿ ಎರಡು ಮಾತಿಲ್ಲ. ಅಭಿಮಾನಿಗಳೂ ಕೂಡ ಆ ದಿನಕ್ಕಾಗಿ ಕಾದು ಕುಳಿತಿದ್ದಾರೆ. ಏನಾಗುತ್ತದೆ ನೋಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.