7 ಅಡಿ ಆಳ ವಿರುವ ಕೊಳದಲ್ಲಿ ಧ್ರುವ ಸರ್ಜಾ ಮಗಳ ಈಜಾಟ; ಮೇಘನಾ ರಾಜ್ ಗರಂ

 | 
Uu

ಬೇಸಿಗೆಯ ಬಿರು ಬಿಸಿಲಿಗೆ ತಣ್ಣನೆಯ ನೀರು ಕಂಡರೆ ಸಾಕು ಸ್ವಿಮ್ ಮಾಡುವ ಮನಸು ಬೇಡವೆಂದರೂ ಬಂದು ಬಿಡುತ್ತದೆ. ಹಾಗಾಗಿ ಬಿರು ಬೇಸಿಗೆಯ ದಿನಗಳಲ್ಲಿ ಸ್ವಿಮ್ ಕಲಿಯಲು ಬಯಸುವವರು ಕೂಡಾ ಬಹಳ ಜನ. ಇದೀಗ ಅಂತಹವರ ಸಾಲಿಗೆ ನಟ ಧ್ರುವ ಸರ್ಜಾ ಮಗಳು ಸಹ ಸೇರಿದ್ದಾಳೆ.

ಸ್ಯಾಂಡಲ್‌ವುಡ್‌ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಮಗಳು ರುದ್ರಾಕ್ಷಿ ನೀರಿನಲ್ಲಿ ಪುಟ್ಟ ಬಾತುಕೋಳಿಯಂತೆ ಸ್ವಿಮ್ ಮಾಡಿ ಸಂತಸ ಪಟ್ಟಿದ್ದಾರೆ. ಧ್ರುವ ಸರ್ಜಾ ಮಾಡಿರೋ ವಿಡಿಯೋದಲ್ಲಿ ರುದ್ರಾಕ್ಷಿ ಕೂಡ ಕ್ಯೂಟ್‌ ನಗು ಬೀರಿದ್ದು ಅಭಿಮಾನಿಗಳು ಫಿದಾ ಆಗಿದ್ದಾರೆ.

ಧ್ರುವ ಸರ್ಜಾ ಅವರು ಮಗಳನ್ನು ತುಂಬಾ ಪ್ರೀತಿಸುತ್ತಾರೆ. ಇತ್ತೀಚೆಗಷ್ಟೇ ನಾಮಕರಣ ಮಾಡಿದ್ದ ಆ್ಯಕ್ಷನ್ ಪ್ರಿನ್ಸ್ ತಮ್ಮ ಮಗಳಿಗೆ ರುದ್ರಾಕ್ಷಿ ಹಾಗೂ ಮಗನಿಗೆ ಹಯಗ್ರೀವ ಎಂದು ಹೆಸರಿಟ್ಟಿದ್ದರು. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳ ಜೊತೆ ಸಾಕಷ್ಟು ಖುಷಿಯನ್ನು ಹಂಚಿಕೊಳ್ಳುವ ಧ್ರುವ ಸರ್ಜಾ ಅವರು ರುದ್ರಾಕ್ಷಿಯ ಸ್ಪೆಷಲ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ  ಅವರ ಪತ್ನಿ ಪ್ರೇರಣಾ ಸರ್ಜಾ  ಮಗಳ  ಇನ್ನೊಂದು ವಿಡಿಯೋ ಶೇರ್ ಮಾಡಿದ್ದಾರೆ. ಇದು ತುಂಬಾನೆ ಇಂಟ್ರಸ್ಟಿಂಗ್ ಆಗಿದೆ. ಕೇರಿಂಗ್ ಅನ್ನೋದು ಹೆಣ್ಣುಮಕ್ಕಳಿಗೆ ಚಿಕ್ಕಂದಿನಲ್ಲಿಯೇ ಬಂದಿರುತ್ತದೆ. ಹಾಗಾಗಿ ತಮ್ಮನಿಗೆ ನೀರೆಡೆಗೆ ಬರಬೇಡ ಎಂದು ಹೇಳಿದ್ದಾಳೆ ಅದಕ್ಕೆ ಸಾಕ್ಷಿ ಎಂಬಂತೆ ಈ ವಿಡಿಯೋ ಇದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.