ಮೇಘನಾ ರಾಜ್ ಮನೆಗೆ ಭೇಟಿ ಕೊಟ್ಟ ಧ್ರುವ ಸರ್ಜಾ ಮಗಳು; ಒಮ್ಮೆಲೇ ಸಿಡಿದೆದ್ದ ಮೇಘನಾ
ಇತ್ತೀಚಿಗಷ್ಟೇ ಸ್ಯಾಂಡಲ್‌ವುಡ್‌ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಮಗಳು ರುದ್ರಾಕ್ಷಿ ಜೊತೆ ರೀಲ್ಸ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಧ್ರುವ ಸರ್ಜಾ ಮಾಡಿರೋ ವಿಡಿಯೋದಲ್ಲಿ ರುದ್ರಾಕ್ಷಿ ಕೂಡ ಕ್ಯೂಟ್ ನಗು ಬೀರಿದ್ದು ಅಭಿಮಾನಿಗಳು ಫಿದಾ ಆಗಿದ್ದಾರೆ.
ರುದ್ರಾಕ್ಷಿ ಜೊತೆ ಧ್ರುವ ಸರ್ಜಾ ಮಾಡಿರೋ ರೀಲ್ಸ್‌ನಲ್ಲಿ ಒಂದು ಸಿನಿಮಾದ ಡೈಲಾಗ್ ಹೇಳಲಾಗಿದೆ. ಒಂದು ಹುಡುಗಿ ನನ್ನ ಈ ಪ್ರಪಂಚದಲ್ಲಿ ಬೇರೆ ಹುಡುಗಿಯರು ಇದ್ದಾರೆ ಅನ್ನೋದನ್ನೇ ಮರೆಸಿ ಬಿಟ್ಟಿದ್ದಾಳೆ ಅನ್ನೋ ಡೈಲಾಗ್ ಅನ್ನ ಧ್ರುವ ಸರ್ಜಾ ಮಗಳಿಗೆ ಅರ್ಪಿಸಿದ್ದು ಮುದ್ದಾದ ವಿಡಿಯೋ ಬಹಳಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ನು ಪುಟಾಣಿ ರುದ್ರಾಕ್ಷಿ ಇದೀಗ ಪುಟಾಣಿ ತಮ್ಮನಿಗೆ ರುದ್ರಾಕ್ಷಿ ಲಾಲಿ ಹಾಡುತ್ತಾ ತೊಟ್ಟಿಲಲ್ಲಿ ಮಲಗಿಸುತ್ತಿದ್ದು ಅದರ ವಿಡಿಯೋ ವೈರಲ್ ಆಗಿದೆ. ತಮ್ಮ ಪುಟ್ಟು ತಮ್ಮನನ್ನು ಮುದ್ದುಮಾಡುವ ಈ ಪುಟಾಣಿ ಅಕ್ಕನ ಲಾಲಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹಾರ್ಟ್ ಇಮೋಜಿಗಳಿಂದ ಕಮೆಂಟ್ ಬಾಕ್ಸ್ ತುಂಬಿ ಹೋಗಿದೆ.
ಕೆಲ ದಿನಗಳ ಹಿಂದಷ್ಟೇ ನಟ ಧ್ರುವ ಸರ್ಜಾ ಜೊತೆ ರುದ್ರಾಕ್ಷಿ ದೊಡ್ಡಮ್ಮ ಮೇಘನಾ ರಾಜ್ ಮನೆಗೆ ಹೋದಾಗ ಅವರಿಬ್ಬರನ್ನು ಬಾಗಿಲ ಹೊರಗೆ ನಿಲ್ಲಿಸಿ ಮೇಘನಾ ರಾಜ್ ದೃಷ್ಟಿ ತೆಗೆದು ಒಳಗೆ ಬರಮಾಡಿಕೊಂಡು ಮುದ್ದಿಸಿದ್ದಾರೆ. ಇನ್ನು ಪುಟ್ಟ ತಂಗಿಯ ಜೊತೆ ರಾಯನ ರಾಜ್ ಆಟವಾಡಿ ಸಂತೋಷ ವ್ಯಕ್ತಪಡಿಸಿದ್ದಾನೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.