ಮೇಘನಾ ರಾಜ್ ಮನೆಯಲ್ಲಿ ಧ್ರುವ ಸರ್ಜಾ ಮನೆಕೆಲಸ, ಮೈದುನನ ಬಗ್ಗೆ ಅತ್ತಿಗೆ ಮೆಚ್ಚುಗೆಯ ಮಾತು

 | 
Bs

ನಟ ಧ್ರುವ ಸರ್ಜಾ ತುಂಬಾ ಸಿಂಪಲ್ ಆಗಿಯೇ ಇರ್ತಾರೆ. ಹೀರೋಯಿಸಂ ತೋರಿಸೋದು ತೆರೆ ಮೇಲೆ ಮಾತ್ರ. ಅದನ್ನ ಹತ್ತಿರದಿಂದ ನೋಡಿದವ್ರು ಒಪ್ಪಿಕೊಳ್ತಾರೆ. ಅಷ್ಟು ಸರಳವಾಗಿರೋ ಧ್ರುವ ಸರ್ಜಾ ಸಂಕ್ರಾಂತಿ ಹಬ್ಬವನ್ನ ಅಷ್ಟೇ ಸಿಂಪಲ್ ಆಗಿಯೇ ಮಾಡಿದ್ದಾರೆ.

ಹೌದು ಸಂಕ್ರಾಂತಿ ಸಂಭ್ರಮದ ಆಚರಣೆಗಳು ಏನಿವೆಯೋ ಅವುಗಳನ್ನ ಫಾಲೋ ಮಾಡಿದ್ದಾರೆ. ಎತ್ತುಗಳನ್ನ ಮೈ ತೊಳೆದಿದ್ದಾರೆ. ಎತ್ತುಗಳು ಹಾಕಿದ್ದ ಸಗಣಿಯನ್ನೂ ಎತ್ತಿದ್ದಾರೆ. ಎಲ್ಲವನ್ನೂ ಪರ್ಫೆಕ್ಟ್ ಆಗಿಯೇ ಮಾಡಿದ್ದಾರೆ. ಇದರಿಂದ ಹಬ್ಬದ ಖುಷಿ ಇನ್ನಷ್ಟು ಮತ್ತಷ್ಟು ಅನ್ನುವ ಹಾಗೆ ಡಬಲ್ ಟ್ರಿಪಲ್ ಆಗಿದೆ.

ಬೆಳಗ್ಗೆಯಿಂದ ರೆಡಿ ಮಾಡಿದ್ದ ಎತ್ತುಗಳು ಸಂಜೆ ಹೊತ್ತಿಗೆ ಹೂವಿನಿಂದ ಅಲಂಕೃತಗೊಂಡಿದ್ದವು. ಕತ್ತಲಾಗುತ್ತಲೇ ಕಿಚ್ಚು ಹಾಯಿಸೋ ಸಂಭ್ರಮ ಶುರು ಆಯಿತು. ಸ್ವತಃ ಧ್ರುವ ಸರ್ಜಾ ಎತ್ತುಗಳನ್ನ ಕಿಚ್ಚು ಹಾಯಿಸಿದ್ದಾರೆ. ಒಂದು ರೀತಿ ಇದು ಥ್ರಿಲ್ಲಿಂಗ್ ಕ್ಷಣ ಅಂತಲೂ ಹೇಳಬಹುದೇನೋ. ಧ್ರುವ ಸರ್ಜಾ ತಮ್ಮ ಈ ಒಂದು ಸಂಭ್ರಮದ ಕ್ಷಣದ ವಿಡಿಯೋವನ್ನ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. 

ಇದನ್ನ ನೋಡಿದ ಪ್ರಿನ್ಸ್ ಫ್ಯಾನ್ಸ್ ತುಂಬಾನೆ ಖುಷಿಪಟ್ಟಿದ್ದಾರೆ. ಸರಳತೆಯ ಸಾಮ್ರಾಟ ಅಂತಲೂ ಹೊಗಳಿದ್ದಾರೆ. ಈ. ಹಿಂದೆ ಕೂಡ ಅಣ್ಣನ ಸಮಾಧಿ ಬಳಿ ಮಲಗಿ ಜನರ ಮನ ಗೆದ್ದಿದ್ದರು. ಈಗ ಅವರ ಹಬ್ಬದ ತಯಾರಿ ನೋಡಿ ಮೇಘನಾ ರಾಜ್ ನಿಬ್ಬೆರಗಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.