ಶ್ರೀದೇವಿಗೆ ಮೂರನೇ ಮಗಳು ಇರುವ ವಿಚಾರ ನಿಮಗೆ ಗೊ ತ್ತಾ; ಎಷ್ಟು ಮುದ್ದಾಗಿದ್ದಾ ರೆ
ಭಾರತೀಯ ಚಿತ್ರರಂಗ ಕಂಡ ನಟಿ ಶ್ರೀದೇವಿ ಇಂದು ನಮ್ಮ ಜೊತೆಗಿಲ್ಲ. ಆದ್ರೆ ಅವರ ಮಗಳು ಜಾಹ್ನವಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ಶ್ರೀದೇವಿ ನಟಿಸಿದ್ದಾರೆ. ಆದ್ರೆ ಇದೀಗ ದಿವಂಗತ ನಟಿ ಶ್ರೀದೇವಿ ಅವರಿಗೆ ಜಾಹ್ನವಿ ಮತ್ತು ಖುಷಿ ಎಂಬ ಇಬ್ಬರು ಮಕ್ಕಳಿರುವ ವಿಚಾರ ಎಲ್ಲರಿಗೂ ಗೊತ್ತಿದೆ.
ಆದ್ರೆ ಮೂರನೇ ಮಗಳಿದ್ದಾಳೆ ಎಂಬ ವಿಷಯ ಹರಿದಾಡುತ್ತಿದೆ. ಹೌದು ನಿರ್ದೇಶಕ ಬೋನಿ ಕಪೂರ್ ಅವರನ್ನು ಪ್ರೀತಿಸಿ ಮದುವೆಯಾದ ನಂತರ ಸಿನಿಮಾಗಳಿಂದ ಶ್ರೀದೇವಿ ಕಪೂರ್ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ಮಗಳು ಜಾಹ್ನವಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಕಿರಿಯ ಪುತ್ರಿ ಖುಷಿ ಚಿತ್ರರಂಗದಲ್ಲಿ ಒಂದೊಂದು ಹೆಜ್ಜೆಯನ್ನು ಇರಿಸುತ್ತಿದ್ದಾರೆ.
ಕೆಲ ದಿನಗಳಿಂದ ಶ್ರೀದೇವಿ ಅವರಿಗೆ ಮೂರನೇ ಮಗಳು ಸಹ ಇದ್ದಾಳೆ ಎಂಬ ಮಾತು ಕೇಳಿ ಬಂದಿದೆ. ಶ್ರೀದೇವಿ ನಿಧನದ ಬಳಿಕ ಜಾಹ್ನವಿ ನಟನೆಯ ಮೊದಲ ಚಿತ್ರ ಧಡಕ್ ರಿಲೀಸ್ ಆಗಿತ್ತು. ಶ್ರೀದೇವಿಗೆ ಇಬ್ಬರು ಹೆಣ್ಣು ಮಕ್ಕಳ ಹೊರತಾಗಿ ಮತ್ತೊಬ್ಬ ಮಗಳಿದ್ದಾಳೆ ಗೊತ್ತಾ?ಶ್ರೀದೇವಿ ಅಭಿನಯದ ಕೊನೆಯ ಸಿನಿಮಾ ಮಾಮ್ . ಈ ಚಿತ್ರದಲ್ಲಿ ಶ್ರೀದೇವಿಯರ ಮಗಳ ಪಾತ್ರದಲ್ಲಿ ಸಜಲ್ ನಟಿಸಿದ್ದರು.
ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಶ್ರೀದೇವಿ ಮತ್ತು ಸಜಲ್ ನಡುವೆ ಉತ್ತಮ ಬಾಂಧವ್ಯ ಏರ್ಪಟ್ಟಿತ್ತು.ಚಿತ್ರದ ಶೂಟಿಂಗ್‌ನಲ್ಲಿ ಸಜಲ್ ಮತ್ತು ಶ್ರೀದೇವಿ ನಡುವೆ ತಾಯಿ-ಮಗಳ ಬಾಂಧವ್ಯ ಏರ್ಪಟ್ಟಿತ್ತು. ಜಾಹ್ನವಿ, ಖುಷಿ ಬಳಿಕ ಸಜಲ್ ಕೂಡ ನನ್ನ ಮೂರನೇ ಮಗಳು ಎಂದು ಶ್ರೀದೇವಿ ಹೇಳಿಕೊಂಡಿದ್ದರು. ಹಾಗಾಗಿ ಸಜಲ್ ಅವರನ್ನು ಶ್ರೀದೇವಿಯವರ ಮಗಳು ಎಂದು ಬಾಲಿವುಡ್ ಅಂಗಳದಲ್ಲಿ ಗುರುತಿಸಲು ಆರಂಭಿಸಲಾಯ್ತು.
ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಸಜಲ್, ನಾನು ಶ್ರೀದೇವಿಯವರಲ್ಲಿ ನನ್ನ ಮೃತ ತಾಯಿಯನ್ನು ನೋಡಿದ್ದೆ. ಸಿನಿಮಾ ಹೊರತಾಗಿಯೂ ನಮ್ಮಿಬ್ಬರ ಮಧ್ಯೆ ತಾಯಿ ಮತ್ತು ಮಗಳ ಸಂಬಂಧವಿತ್ತು. ಆದ್ರೆ ಆ ದೇವರು ಆ ತಾಯಿಯನ್ನು ಸಹ ನನ್ನಿಂದ ಕಿತ್ತುಕೊಂಡ ಎಂದು ಸಜಲ್ ಭಾವುಕರಾಗಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.