ಸೀರಿಯಲ್ ನಟ ದಿಲೀಪ್ ರಾಜ್ ಕುಟುಂಬಕ್ಕೆ ಶಾ ಕ್ ಕೊಟ್ಟ ನ ಟ, ಬೆಚ್ಚಿಬಿ ದ್ದ ಕನ್ನಡಿಗರು
Jun 20, 2025, 15:57 IST
|

ದಿಲೀಪ್ ರಾಜ್ ಎಂದಕೂಡಲೇ ಕಟ್ಟುಮಸ್ತಾದ ದೇಹ, ಸುಂದರವಾದ ಮುಖ, ಗಮನಸೆಳೆಯುವ ಧ್ವನಿ, ಮಾಸ್ ಲುಕ್ ಎಲ್ಲವೂ ಒಂದೇ ಸಮನೆ ಕಣ್ಣುಮುಂದೆ ಬರುವುದು. ಕನ್ನಡದ ಕೆಲ ಸಿನಿಮಾಗಳಲ್ಲಿ ಪೋಷಕ ಪಾತ್ರ ಮಾಡಿ ಗಮನಸೆಳೆದ ದಿಲೀಪ್ ರಾಜ್, ಸಿನಿಮಾದಲ್ಲಿ ಹೀರೋ ಆಗಿ ಮಿಂಚಲಾಗಲೇ ಇಲ್ಲ. ಇದಕ್ಕೆ ಕಾರಣ ಏನು ಎಂದು ದಿಲೀಪ್ ರಾಜ್ ಅವರೇ ರಾಪಿಡ್ ರಶ್ಮಿ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ.
23 ಸಿನಿಮಾ, 13 ಧಾರಾವಾಹಿಗಳಲ್ಲಿ ನಟಿಸಿರುವ ದಿಲೀಪ್ ರಾಜ್‌ಗೆ ಸಿನಿಮಾದಲ್ಲಿ ಯಶಸ್ಸು ಸಿಗಲೇ ಇಲ್ಲ. ಈ ಬಗ್ಗೆ ನಟ ಅಂಬರೀಶ್ ಅವರು ʼಅಂಬಿ ನಿಂಗ್ ವಯಸ್ಸಾಯ್ತೋʼ ಸಿನಿಮಾ ಟೈಮ್‌ನಲ್ಲಿ ಕೂಡ ಪ್ರಶ್ನೆ ಮಾಡಿದ್ದರಂತೆ. ಗೋಲ್ಡನ್ ಸ್ಟಾರ್ ಗಣೇಶ್, ಶ್ರೀನಗರ್ ಕಿಟ್ಟಿ, ಸುನೀಲ್ ರಾವ್ ಅವರ ಸಮಕಾಲೀನ ನಟ ದಿಲೀಪ್ ರಾಜ್‌ಗೆ ಪ್ರತಿಭೆಯಿದ್ದಷ್ಟು ಯಶಸ್ಸು ಸಿಗಲೇ ಇಲ್ಲ.ನಟನಾಗಬೇಕು ಅಂತ ಅಂದುಕೊಳ್ಳದ ದಿಲೀಪ್ ರಾಜ್ ಅವರು ರಂಗಭೂಮಿಯಲ್ಲಿ ಸಕ್ರಿಯವಾಗಿದ್ದರು, ಅದೇ ಅವರನ್ನು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿತು. ಆರಂಭದಲ್ಲಿ ಪ್ರತಿಭೆ, ಪರಿಶ್ರಮ ಇದ್ದರೆ ಯಶಸ್ಸು ಸಿಗೋದು ಫಿಕ್ಸ್ ಅಂತ ನಂಬಿಕೊಂಡಿದ್ದ ದಿಲೀಪ್ ರಾಜ್ ಇಂದು ಅದೃಷ್ಟಕ್ಕೆ ಶರಣಾಗಿದ್ದಾರಂತೆ.
ಅದೃಷ್ಟ ಎನ್ನೋದು ತುಂಬ ಮುಖ್ಯ. ಅದೃಷ್ಟ ಇಲ್ಲ ಅಂದ್ರೆ ನೂರು ಕೋಟಿ ನಿನ್ನ ಮೇಲೆ ಹಾಕಿದ್ರೂ ಅದು ಮಣ್ಣೇ. ಚೆನ್ನಾಗಿ ನಟಿಸ್ತೀಯಾ, ಡ್ಯಾನ್ಸ್ ಮಾಡ್ತೀಯಾ ಆದರೂ ಯಾಕೆ ಸಿನಿಮಾ ಮಾಡಲ್ಲ ಅಂತ ಕೆಲವರು ಕೇಳ್ತಾರೆ. ಆದರೆ ನಾನು ಸಿನಿಮಾ ಮಾಡೋದಿಲ್ಲ ಅಂತ ಎಲ್ಲಿಯೂ ಹೇಳಲ್ಲ. ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಟೈಮ್‌ನಲ್ಲಿ ಅಂಬರೀಶ್ ಅವರು ನನ್ನ ನಟನೆ ನೋಡಿ ಯಾಕೆ ನಿಂಗೆ ಹೀರೋ ಚಾನ್ಸ್ ಕೊಡ್ತಿಲ್ಲ ಅಂತ ಪ್ರಶ್ನೆ ಮಾಡಿದ್ದರು. ನನಗೂ ಕೂಡ ಇದೇ ಯಾವಾಗಲೂ ಪ್ರಶ್ನೆ ಕಾಡುತ್ತಿರುತ್ತದೆ. ಬಾಯ್‌ಫ್ರೆಂಡ್, ಮಿಲನ, ಗಾನ ಬಜಾನಾ ಹೀಗೆ ಸಿನಿಮಾದಲ್ಲಿ ನಟಿಸುವಾಗ ನನ್ನ ಲಕ್ ಬದಲಾಗುತ್ತದೆ, ಯಶಸ್ಸು ಸಿಗುತ್ತದೆ ಅಂತ ಎಲ್ರೂ ಹೇಳಿದರು. ಆಗಲೇ ಇಲ್ಲ ಎಂದು ದಿಲೀಪ್ ರಾಜ್ ಅವರು ಮುಕ್ತವಾಗಿ ಮಾತನಾಡಿದ್ದಾರೆ.
ಸೀರಿಯಲ್ ವಿಚಾರಗಳು ಅಡುಗೆ ಮನೆಗೆ, ಮನೆ ಹಾಲ್‌ಗೆ ಮಾತ್ರ ಸೀಮಿತವಾಗಿರುತ್ತದೆ, ಆದರೆ ಆಟೋ ಸ್ಟ್ಯಾಂಡ್‌ವರೆಗೆ ಬರೋದಿಲ್ಲ,' ಎಂದು ದಿಲೀಪ್ ರಾಜ್ ಅವರು ಹೇಳಿದ್ದಾರೆ. ಈ ಹಿಂದೆ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ದಿಲೀಪ್ ರಾಜ್ ಅವರು ಈಗಾಗಲೇ ʼಹಿಟ್ಲರ್ ಕಲ್ಯಾಣʼ, ʼಪಾರುʼ ಮುಂತಾದ ಧಾರಾವಾಹಿಗಳ ನಿರ್ಮಾಣ ಮಾಡಿದ್ದಾರೆ. ಸದ್ಯ ʼವಧುʼ ಎನ್ನುವ ಧಾರಾವಾಹಿಗೆ ದಿಲೀಪ್ ರಾಜ್ ಅವರು ಹಣ ಹೂಡುತ್ತಿದ್ದಾರೆ. ಅವರ ಪಾಲಿಗೆ ಅವರ ಪತ್ನಿಯೇ ಅದೃಷ್ಟ ದೇವತೆ. ಹೌದು ಶ್ರೀವಿದ್ಯಾರನ್ನು ವಿವಾಹವಾಗಿರೋ ದಿಲೀಪ್ ರಾಜ್ಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿದ್ದಾರೆ. ಇವರಿಬ್ಬರದು ತುಂಬಿದ ಸುಖ ಸಂಸಾರ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.