ಮದುವೆಯಾಗಿದೆ ಎಂಬ ಒಂದೇ ಕಾರಣಕ್ಕೆ ದಿಯಾ ಸಿನಿಮಾ ನಟಿ ಖುಷಿಗೆ ಅವಕಾಶ ನೀಡದ ಡೈರೆಕ್ಟರ್
Jun 29, 2025, 20:38 IST
|

ಕನ್ನಡ ಚಿತ್ರರಂಗದಲ್ಲಿ ವಿಶಿಷ್ಠ ಸಿನಿಮಾಗಳ ಮೂಲಕ ಭರವಸೆಯನ್ನು ಮೂಡಿಸಿರುವ ನಟಿ ಖುಷಿ ರವಿ. ಇವರನ್ನು 'ದಿಯಾ' ಸಿನಿಮಾ ಮೂಲಕ ಹೆಚ್ಚಾಗಿ ಗುರುತಿಸುತ್ತಾರೆ. ಈ ಸಿನಿಮಾದಲ್ಲಿ ಇವರ ಅಭಿನಯಕ್ಕೆ ಮರುಳಾಗದವರೇ ಇಲ್ಲ. ಇಲ್ಲಿಂದ ಖುಷಿ ರವಿ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ಹೆಸರು. ಇತ್ತೀಚೆಗೆ ಜೀ 5ನ ಮೊದಲ ಕನ್ನಡ ವೆಬ್ ಸೀರಿಸ್ ಅಯ್ಯನ ಮನೆಯಲ್ಲಿ ನಟಿಸಿದ್ದಾರೆ.
ಅಯ್ಯನ ಮನೆ' ಕನ್ನಡದಲ್ಲೂ ವೆಬ್ ಸೀರಿಸ್ ನೋಡಬೇಕು ಎನ್ನುವವರಿಗೆ ಹೊಸ ಹುರುಷು ಕೊಟ್ಟಿದೆ. ಜೀ 5ಗೆ ಈ ವೆಬ್ ಸೀರಿಸ್‌ನಿಂದ ಸಬ್‌ಸ್ಕ್ರೈಬರ್‌ಗಳು ಗಣನೀಯವಾಗಿ ಹೆಚ್ಚಾಗಿದ್ದಾರೆ. ಇಂತಹ ಸೂಪರ್ ಸಕ್ಸಸ್ ಕನ್ನಡ ವೆಬ್ ಸೀರಿಸ್‌ನಲ್ಲಿ ಖುಷಿ ರವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಒಳ್ಳೊಳ್ಳೆ ಪ್ರಾಜೆಕ್ಟ್‌ಗಳಲ್ಲಿ ನಟಿಸುವ ಮೂಲಕ ಖುಷಿ ರವಿ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವ ಪ್ರಯತ್ನ ಮಾಡುತ್ತಿದ್ದಾರೆ.
ದಿಯಾ,ಅಯ್ಯನ ಮನೆ ಅಂತಹ ವಿಭಿನ್ನ ಪ್ರಾಜೆಕ್ಟ್‌ಗಳ ಮೂಲಕ ತಮ್ಮ ಪ್ರತಿಭೆಯನ್ನು ಸಾಬೀತು ಮಾಡಿದರೂ, ದೊಡ್ಡ ದೊಡ್ಡ ಪ್ರೊಡಕ್ಷನ್ ಹೌಸ್‌ನಿಂದ ಆಫರ್ ಬಂದಿಲ್ಲ. ಖುಷಿ ರವಿಯವರಿಗೆ ಈಗಾಗಲೇ ಮದುವೆ ಆಗಿದೆ. ಒಬ್ಬ ಮಗಳು ಕೂಡ ಇದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಅವಕಾಶ ನೀಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆಂದು ಗ್ಲೋಲ್ಡ್ ಕ್ಲಾಸ್ ವಿತ್ ಮಯೂರ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
ಖುಷಿ ರವಿ 'ದಿಯಾ' ಸಿನಿಮಾಗೂ ಮುನ್ನ ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ ಸಿನಿಮಾದಲ್ಲಿ ನಟಿಸಿದ್ದರು. ಅದಾದ ಬಳಿಕ ನಟಿಸಿದ 'ದಿಯಾ' ಖುಷಿ ರವಿಗೆ ಒಂದೊಳ್ಳೆ ಹೆಸರು ತಂದುಕೊಟ್ಟಿತ್ತು. ಬಳಿಕ ನಟಿಸಿದ 'ಕೇಸ್ ಆಫ್ ಕೊಂಡಾಣ', ತೆಲುಗು ಸಿನಿಮಾ 'ಪಿಂದಾಮ್', 'ನೀತಿ' ಅಂತಹ ಸಿನಿಮಾಗಳು ಮೆಚ್ಚಿಗೆ ಗಳಿಸಿದ್ದರು. ಖುಷಿ ರವಿ ಪಾತ್ರವನ್ನು ಸಿನಿಮಾ ಮಂದಿ ಹೊಗಳಿ ಕೊಂಡಾಡಿದ್ದರು. ಕನ್ನಡ ಚಿತ್ರರಂಗದ ಉತ್ತಮ ನಟಿ ಎನ್ನುವ ಮಾತು ಕೇಳಿ ಬಂದರೂ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಅವಕಾಶ ನೀಡುತ್ತಿಲ್ಲ. ಅದ್ಯಾಕೆ ಅನ್ನೋದನ್ನು ಖುಷಿ ರವಿ ಈ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.ನಾನು