ಕರುನಾಡಿಗೆ ತಲೆಕೆಡಿಸು ವ ಸುದ್ದಿ; ನೆಚ್ಚಿನ ಸೀರಿಯಲ್ ವಿಲನ್ ಔಟ್

 | 
Hu

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಶ್ರೀರಸ್ತು ಶುಭಮಸ್ತುವಿನಲ್ಲಿ  ಶಾರ್ವರಿ ಪಾತ್ರದಲ್ಲಿ ಇಲ್ಲಿವರೆಗೆ ನೇತ್ರಾ ಜಾಧವ್ ಅವರು ಅದ್ಭುತವಾಗಿ ನಟಿಸುತ್ತಿದ್ದರು. ಅವರ ನಟನೆ, ಮಾತನಾಡುವ ಶೈಲಿ ಮತ್ತು ವಿಲನ್ ಪಾತ್ರಕ್ಕೆ ಸೂಟ್ ಆಗು ಆಂಗಿಕ ಭಾಷೆ ವೀಕ್ಷಕರಿಗೆ ತುಂಬಾ ಇಷ್ಟವಾಗಿತ್ತು. 

ಆದರೆ ಇದೀಗ ನೇತ್ರಾ  ಪಾತ್ರವನ್ನು ಇಷ್ಟಪಡುತ್ತಿದ್ದ ವೀಕ್ಷಕರಿಗೆ ಒಂದು ಸ್ಯಾಡ್ ನ್ಯೂಸ್ ಇದೆ. ಅದೇನೆಂದರೆ ನೇತ್ರಾ ಜಾಧವ್ ಶಾರ್ವರಿ ಪಾತ್ರಕ್ಕೆ ಗುಡ್ ಬೈ ಹೇಳಿದ್ದಾರೆ. ಕೆಲದಿನಗಳಿಂದ ನೇತ್ರಾ ಶ್ರೀರಸ್ತು ಶುಭಮಸ್ತು ಸೀರಿಯಲ್ ನಲ್ಲಿ ಕಾಣಿಸುತ್ತಿರಲಿಲ್ಲ, ಇದೀಗ ಆ ಪಾತ್ರಕ್ಕೆ ಬೇರೊಬ್ಬ ನಟಿಯ ಎಂಟ್ರಿಯಾಗಿದೆ.  

ಝೀ ವಾಹಿನಿಯಲ್ಲಿ ಇದೀಗ ಹೊಸ ಪ್ರೋಮೋ ರಿಲೀಸ್ ಮಾಡಿದ್ದು, ಸ್ವಪ್ನಾ ದೀಕ್ಷಿತ್ ಅವರು ಶಾರ್ವರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸ್ವಪ್ನಾ ಈ ಹಿಂದೆ ಕಮಲಿ ಸೀರಿಯಲ್‌ನಲ್ಲಿ ರಿಷಿ ಸರ್ ತಾಯಿಯ ಪಾತ್ರ ಮಾಡಿದ್ದರು. ಶಾರ್ವರಿ ಪಾತ್ರದಲ್ಲಿ ನೇತ್ರಾ ಅವರನ್ನು ಒಪ್ಪಿಕೊಂಡಿದ್ದ ವೀಕ್ಷಕರಿಗೆ ಇದರಿಂದ ಬೇಸರವಾಗಿದೆ. ಅವರೇ ಬೇಕು ಅನ್ನುತ್ತಿದ್ದಾರೆ ಇನ್ನು ಕೆಲವರು.

ತಮ್ಮ ಬೇಸರವನ್ನು ಕಾಮೆಂಟ್ ಮೂಲಕ ವ್ಯಕ್ತಪಡಿಸಿರುವ ವೀಕ್ಷಕರು  ಹೇ ಶಾರ್ವರಿ ಕ್ಯಾರೆಕ್ಟರ್ ಗೆ ಈ ಮುಖ ಖಂಡಿತಾ ಒಪ್ಪಲ್ಲ. ಆ ಗತ್ತು ಗಾಂಭೀರ್ಯ ಇಲ್ಲ. ಶಾರ್ವರಿ ಇವರಿಗೆ ಒಪ್ಪಿಗೆ ಆಗ್ತಿಲ್ಲ, ಅವರೇ ಚೆನ್ನಾಗಿದ್ರು, ಮಿಸ್ ಯೂ ಶಾರ್ವರಿ ಮೇಡಂ ಎಂದಿದ್ದಾರೆ. ಮತ್ತೊಬ್ರು ಹಳೆಯ ಶಾರ್ವರಿ ಅವರ ನಟನೆ ತುಂಬಾನೆ ಚೆನ್ನಾಗಿತ್ತು. ಅವರನ್ನು ಯಾಕೆ ಬದಲಾಯಿಸಿದ್ದೀರಿ, ಇವರು ಈ ಪಾತ್ರಕ್ಕೆ ಸೂಟ್ ಆಗೋದೇ ಇಲ್ಲ. 

ನೇತ್ರಾ ಅವರು ಫೇಶಿಯಲ್ ಎಕ್ಸ್ ಪ್ರೆಶನ್, ಮಾತುಗಳೇ ಚೆನ್ನಾಗಿತ್ತು, ಸ್ವಪ್ನಾ ಅವರು ತುಂಬಾನೆ ವಯಸ್ಸಾದಂತೆ ಕಾಣಿಸುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunsdu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.