ಹಳೆ ವಿಡಿಯೋ ಲೀ ಕ್ ಆಯ್ತು ಅಂತ ಮೊಸಳೆ ಕಣ್ಣೀರು ಹಾಕಿದ ದಿವ್ಯಾ ವಸಂತ
Oct 10, 2024, 12:49 IST
|
ಇತ್ತೀಚೆಗೆಯಷ್ಟೇ ಬೆದರಿಕೆ ಹಾಗೂ ಸುಲಿಗೆ ಯತ್ನ ಪ್ರಕರಣದಲ್ಲಿ ಭಾರೀ ಸುದ್ದಿ ಮಾಡಿದ್ದ ಕನ್ನಡ ಸುದ್ದಿವಾಹಿನಿ ಮಾಜಿ ನಿರೂಪಕಿ, ಗಿಚ್ಚಿ ಗಿಲಿಗಿಲಿ ಶೋ ಸ್ಪರ್ಧಿಯಾಗಿದ್ದ ದಿವ್ಯಾ ವಸಂತ ಇದೀಗ ಮದುವೆ ವಿಚಾರದಲ್ಲಿ ಮತ್ತೆ ಸುದ್ದಿಯಾಗಿದ್ದಾರೆ. ಈ ಹಿಂದೆ ದರ್ಶನ್ ವಿಷಯವಾಗಿ ಸುದ್ದಿ ಬಿತ್ತರಿಸಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿರುವ ದಿವ್ಯಾ ವಸಂತ, ರಾಯರ ಆಶಿರ್ವಾದದ ಜೊತೆ ಹೊಸ ಜೀವನ ಎಂದು ಬರೆದುಕೊಂಡಿದ್ದಾರೆ.ಇನ್ನು ವಿಡಿಯೋ ಕೂಡ ಶೇರ್ ಮಾಡಿರುವ ದಿವ್ಯಾ ತಮ್ಮ ಜೀವನ ಸಂಗಾತಿಯನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಇವರೇ ನನ್ನ ಲೈಫ್ ಪಾಟ್ನರ್. ಸಚಿನ್ ಅಂತಾ.. ಇವರನ್ನು ಪ್ರೀತಿಯಿಂದ ಚಿನ್ನಿಮಾ ಅಂತ ಕರೆಯುತ್ತೇನೆ ಎಂದಿದ್ದಾರೆ.
ಇನ್ನು ಮುಂದೆ ನ್ಯೂಸ್ ಮಾಡೋಕೆ ಹೋಗಲ್ಲ. ಬದುಕಲು ಅವಕಾಶ ಬೇಕಿತ್ತು. ಹಾಗಾಗಿ ನ್ಯೂಸ್ ಚಾನಲ್ ಸೇರಿಕೊಂಡಿದ್ದೆ. ಬೆಳಗ್ಗಿನಿಂದ ಸಂಜೆಯವರೆಗೆ ದುಡಿಸಿಕೊಂಡು 10 ರಿಂದ 15 ಸಾವಿರ ಸಂಬಳನೀಡುತ್ತಿದ್ದರು. ಅವರು ಹೇಳಿದ ಸುದ್ದಿ ಮಾಡಬೇಕಿತ್ತು. ರೇಣುಕಾ ಸ್ವಾಮಿ ಕೊಲೆ ಪ್ರಕರಣ ಬಿತ್ತರಿಸಬೇಕಿತ್ತು. ಅವರುಗಳ ಟಿಆರ್ಪಿಯ ಆಸೆಗೆ ನಾವು ಬಲಿಯಾಗುತ್ತೇವೆ ಎಂದು ದಿವ್ಯಾ ಹೇಳಿ ಕೊಂಡಿದ್ದಾರೆ.
ಇನ್ನು ಕೆಲ ದಿನಗಳ ಹಿಂದಷ್ಟೇ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮಗಳನ್ನು ಟ್ರೋಲ್ ಮಾಡುತ್ತಿರುವ ಬಗ್ಗೆ ವಸಂತಮ್ಮ ಬೇಸರಗೊಂಡಿದ್ದಾರೆ. ವೀಡಿಯೋ ಮಾಡಿ ಈ ಬಗ್ಗೆ ಮಾತನಾಡಿದ್ದಾರೆ. ಭಾವುಕರಾಗಿ ಕಣ್ಣೀರಾಕಿದ್ದಾರೆ. "ನಾನು ದಿವ್ಯಾಳ ತಾಯಿ ವಸಂತ. ನಗೆ ಅಳು ಬರುತ್ತಿದೆ. ನನ್ನ ಮಗಳ ಬಗ್ಗೆ ಎಷ್ಟು ಕೆಟ್ಟದಾಗಿ ಮಾತನಾಡಿದ್ದೀರಾ. ಮಾತನಾಡಿರುವರೆಲ್ಲಾ ದರ್ಶನ್ ಫ್ಯಾನ್ಸ್ ಅಂತ ನಮಗೆ ಗೊತ್ತು. ಅವಳ ಪಾಡಿಗೆ ಅವಳಿಗೆ ಬಿಡಿ ಎಂದು ಕಣ್ಣೀರು ಹಾಕಿದ್ದರು.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.