ಸದ್ಯದಲ್ಲೇ ‌ಡಿಕೆಶಿ ಇಡೀ‌ ಕರ್ನಾಟಕಕ್ಕೆ ಸಿಎಮ್, ಭೈರವಿ ಅಮ್ಮನ ಮಹತ್ವದ ಭವಿಷ್ಯ

 | 
Hui
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ದಿನೇ ದಿನೇ ಜೋರಾಗ್ತಾನೆ ಇದೆ. ಈ ನಡುವೆ ಅನೇಕ ಸ್ವಾಮೀಜಿಗಳು, ಮಠಾಧೀಶರು ಕೂಡ ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಡಿಕೆ ಶಿವಕುಮಾರ್ ಕೂಡ ದಿನೇ ದಿನೇ ಒಂದೊಂದು ದೇವಸ್ಥಾನಗಳಿಗೆ ಭೇಟಿ ನೀಡುತ್ತಾ ದೇವರ ಮೊರೆ ಹೋಗಿದ್ದಾರೆ. ಇದೀಗ ಭೈರವಿ ಅಮ್ಮನವರು ಕೂಡ ಸಿಎಂ ಭದಲಾವಣೆಯ ಕುರಿತು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಕುಂಭಮೇಳಕ್ಕೆ ಹೋಗಿ ಹಿಂತಿರುಗಿ ಬಂದ ಭೈರವಿ ಅಮ್ಮ ಹುಬ್ಬಳ್ಳಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಭೈರವಿ ಅಮ್ಮನವರು ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ. ಆ ಕಾಲ ನಾಳೆನೇ ಬರಬಹುದು. ಇದೇ ಅವಧಿಯಲ್ಲಿ ಡಿಕೆ ಶಿವಕುಮಾರ್ ಸಿಎಂ ಆಗೋದು ಗ್ಯಾರಂಟಿ ಎಂದು ಹುಬ್ಬಳ್ಳಿಯಲ್ಲಿ ಭೈರವಿ ಅಮ್ಮನವರು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ನನ್ನ‌ ಮಾತು ಯಾವತ್ತೂ ಸುಳ್ಳಾಗಲ್ಲ. ಇಲ್ಲಿಯತನಕ ಸುಳ್ಳು ಆಗಿಲ್ಲ, ಸುಳ್ಳು ಆಗೋದೂ ಇಲ್ಲ. ನಾನು ಮೂರು ವರ್ಷದ ಹಿಂದೆ ಡಿಕೆ ಶಿವಕುಮಾರ್ ಮನೆಗೆ ಹೋಗಿದ್ದೆ. ಡಿಕೆ ಶಿವಕುಮಾರ್ ನನ್ನ ಕರೆದಿದ್ರು. ಮುಂದೆ ಏನಾಗುತ್ತೆ ಅಂತಾ ಕೇಳಿದ್ರು, ಏನು ಆಗಬೇಕು ಅಂತಾ ಕೇಳಿದೆ.ಮುಂದಿನ ಕಥೆ ಏನು ಅಂತಾ ಕೇಳಿದರು. ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಅಂತಾ ಹೇಳಿದ್ದೆ. ನೀನು ದುಡಿದ ದುಡ್ಡು, ಇನ್ಯಾವನೋ ತಿಂದು ಗುಂಡಾಗ್ತಾನೆ ಅನ್ನೋದು ಅದರ ಅರ್ಥ. ಸತ್ಯ ಆಯ್ತೋ ಇಲ್ವೋ ಎಂದರು.
ನಾನು ಈ ಹಿಂದೆ ಒಂದು ವಾರದಲ್ಲಿ ಮಂತ್ರಾಲಯ ಮುಳುಗುತ್ತೆ ಅಂದಿದ್ದೆ ಆಯ್ತೋ ಇಲ್ವೋ. ನಾನು ವಿನಯ್ ಕುಲಕರ್ಣಿ ಮನೆಗೆ ಹೋಗಿ ಶಾಸಕ ಆಗ್ತಾನೆ ಅಂದಿದ್ದೆ, ಅವ ಧಾರವಾಡಕ್ಕೆ ಬರುವ ಹಾಗಿಲ್ಲ ಎಂಬ ಕೋರ್ಟ್ ಆದೇಶ ಇದೆ. ಆದ್ರೂ ಹೇಗೆ ಶಾಸಕ ಆಗ್ತಾರೆ ಎಂದು ಕೇಳಿದ್ದರು. ಆದ್ರೂ ಅವ ಶಾಸಕ ಆದ್ನೋ ಇಲ್ವೋ, ನನ್ನ ಮಾತು ಎಂದಿಗೂ ಸುಳ್ಳಾಗಲ್ಲ ಎಂದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.