ಚಹಾ ಕಾಫಿಯ ಜೊತೆ ರಸ್ಕ್ ತಿನ್ನುತ್ತೀರಾ, ಆ ರಸ್ಕನ್ನು ಹೇಗೆ ಮಾಡುತ್ತಾರೆ ವಿಡಿಯೋ ಇಲ್ಲಿದೆ

 | 
ರರ

ಕೆಲವರಿಗೆ ಬೆಳಿಗ್ಗೆ ಎದ್ದು ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸ ಇರುತ್ತದೆ. ಹೀಗೆ ಚಹಾ ಅಥವಾ ಕಾಫಿ ಕುಡಿಯುವಾಗ ರಸ್ಕ್ ತಿನ್ನುವ ಹವ್ಯಾಸ ಬಹುತೇಕರಿಗೆ ಇರುತ್ತದೆ. ರಸ್ಕ್ ತಿನ್ನಲು ಬಹಳ ರುಚಿಯಾಗಿಯೂ ಇರುತ್ತದೆ. ಇನ್ನು ಕೆಲವರು ಮಕ್ಕಳಿಗೆ ಕೂಡಾ ರಸ್ಕ್ ಅನ್ನು ಹಾಲಿನಲ್ಲಿ ಹಾಕಿ ನೀಡುತ್ತಾರೆ. ಎಷ್ಟೋ ಮಕ್ಕಳಿಗೆ ಸಂಜೆಯ ವೇಳೆ ಹಾಲಿನಲ್ಲಿ ಹಾಕಿ ರಸ್ಕ್ ನೀಡುವ ತಾಯಂದಿರು ಬಹಳಷ್ಟು ಮಂದಿ ಇದ್ದಾರೆ.


 ಮಕ್ಕಳು ಕೂಡಾ ಇಷ್ಟ ಪಟ್ಟು ರಸ್ಕ್ ತಿನ್ನುತ್ತಾರೆ. ಇದೀಗ ರಸ್ಕ್ ಅನ್ನು ತಯಾರಿಸುವ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ರಸ್ಕ್ ಅನ್ನು ತಯಾರಿಸುವ ಪೂರ್ತಿ ಪ್ರಕ್ರಿಯೆಯನ್ನು ಸೆರೆ ಹಿಡಿಯಲಾಗಿದೆ. ಆದರೆ ಇಲ್ಲಿ ರಸ್ಕ್ ತಯಾರಿಸುತ್ತಿರುವ ರೀತಿ ನೋಡಿದರೆ ಇನ್ನು ಮುಂದೆ ರಸ್ಕ್ ತಿನ್ನುವುದೇ ಸಂದೇಹ ಅನ್ನಿಸುತ್ತದೆ.


ನಾಲ್ಕೈದು ಮಂದಿ ಇಲ್ಲಿ ರಸ್ಕ್ ತಯಾರಿಕೆಯ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಮೈದಾ ಹಿಟ್ಟನ್ನು ಇಲ್ಲಿ ಇಷ್ಟೂ ಜನ ಸೇರಿ ನಾದುವುದನ್ನು ಕಾಣಬಹುದು. ಅಲ್ಲದೆ, ಒಬ್ಬ ವ್ಯಕ್ತಿ ಈ ಹಿಟ್ಟನ್ನು ಹದ ಮಾಡುತ್ತಿರುವಾಗ ಒಂದು ಕೈಯ್ಯಲ್ಲಿ ಹಿಟ್ಟು ಹದ ಮಾಡಿದರೆ, ಮತ್ತೊಂದು ಕೈಯ್ಯಲ್ಲಿ ಬೀಡಿ ಹಿಡಿದು  ಸೇದುತ್ತಿರುವುದನ್ನು ಕಾಣಬಹುದು. ಈ ರಸ್ಕ್ ತಯಾರಿಸುತ್ತಿರುವ ಜಾಗ, ತಯಾರಿಸಲು ಬಳಸಿರುವ ವಸ್ತುಗಳು ಯಾವುದೂ ಹೈಜೀನ್ ಆಗಿ ಇಲ್ಲ. ಅಲ್ಲ ರಸ್ಕ್ ಅನ್ನು ಬೇಯಿಸಲು ಇದುವ ಜಾಗ ಕೂಡಾ ಬಹಳ ಗಲೀಜಾಗಿದೆ. 

ಈ ರೀತಿ ತಯಾರಿಸಿದ ರಸ್ಕ್ ಒಳ್ಳೆಯದಲ್ಲ ಅದರ ಹೊರತಾಗಿ ಹೇಳಬೇಕೆಂದರೆ ಆದರೆ ರಸ್ಕ್ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇಲ್ಲಿ, ರಸ್ಕ್ ತಿನ್ನುವುದರಿಂದ ಆರೋಗ್ಯಕ್ಕೆ ಯಾವ ರೀತಿ ಸಮಸ್ಯೆ ಅಥವಾ ಹಾನಿಯಾಗುವುದು ಎನ್ನುವ ಪ್ರಶ್ನೆ ಕೂಡಾ ಏಳುತ್ತದೆ. ಆದರೆ ಅದಕ್ಕೆ ಉತ್ತರವೂ ಇದೆ. ರಸ್ಕ್ ಅನ್ನು ರಿಫೈನ್ಡ್ ಹಿಟ್ಟಿನಲ್ಲಿ ತಯಾರಿಸಲಾಗುತ್ತದೆ. ಈ ಹಿಟ್ಟಿನಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗಿರುತ್ತದೆ. ಮಾತ್ರವಲ್ಲ ಇದನ್ನು ತಯಾರಿಸಲು ರಿಫೈನ್ಡ್ ಎಣ್ಣೆಯನ್ನೇ ಬಳಸಲಾಗುತ್ತದೆ. ಇದ್ಯಾವುದೂ ಕೂಡಾ ಆರೋಗ್ಯಕ್ಕೆ ಒಳ್ಳೆಯದಲ್ಲ. 

ಸಂಸ್ಕರಿಸಿದ ಗೋಧಿ ಹಿಟ್ಟು ಅಥವಾ ಮೈದಾ ಹಿಟ್ಟನ್ನು ರಸ್ಕ್‌ನಲ್ಲಿ ಬಳಸಲಾಗುತ್ತದೆ. ಇದರೊಂದಿಗೆ ರಿಫೈನ್ಡ್ ಎಣ್ಣೆ, ಆರ್ಟಿಫಿಶಿಯಲ್ ಫ್ಲೇವರ್, ಪ್ರಿಸರ್ವೆಟಿವ್ಸ್ ಇತ್ಯಾದಿಗಳನ್ನು ಸೇರಿಸಲಾಗುತ್ತದೆ. ಇವೆಲ್ಲವೂ ಆರೋಗ್ಯವನ್ನು ಕೆಡಿಸುತ್ತವೆ. ಕೇವಲ ಎರಡು ರಸ್ಕ್ ತಿನ್ನುವುದರಿಂದ ಕೂಡಾ ನೀವು ಸ್ಥೂಲಕಾಯತೆಯ ಸಮಸ್ಯೆಯನ್ನು  ಕೂಡ ಎದುರಿಸಬೇಕಾಗುತ್ತದೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.