ನಟಿ ಹರಿಪ್ರಿಯಾ ಅವರಿಗೆ ಚಿತ್ರರಂಗದಲ್ಲಿ ಚಾನ್ಸ್ ಸಿಕ್ಕಿದ್ದು ಹೇಗೆ ಗೊತ್ತಾ, ನಟಿಯ ಅಂದಿನ ರ.ಹಸ್ಯ

 | 
B de

ಉಗ್ರಂ, ನೀರ್ ದೋಸೆ, ರಿಕ್ಕಿ, ಸೂಜಿ ದಾರ ಸಿನೆಮಾ ನೋಡಿದವರಿಗೆಲ್ಲ ಹರಿಪ್ರಿಯಾ ಅದ್ಭುತ ಕಲಾವಿದೆ ಎಂದು ಈಗಾಗಲೆ ಮನದಟ್ಟಾಗಿರುತ್ತದೆ. ಹೌದು ವಸಿಷ್ಠ ಸಿಂಹನ ಮಡದಿ ಕನ್ನಡ ಚಿತ್ರರಂಗದ ಬೆಡಗಿ ಹರಿಪ್ರಿಯ ಅವರು ತಮ್ಮ 16ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿತ್ತಿದ್ದಾರೆ. 

ಹರಿಪ್ರಿಯಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟಿ. ಇವರು ಅಕ್ಟೋಬರ್ 29ರಂದು ಚಿಕ್ಕಬಳ್ಳಾಪುರದಲ್ಲಿ ಜನಿಸಿದರು. ಇವರ ಬಾಲ್ಯದ ಹೆಸರು ಶೃತಿ. ವಿದ್ಯಾಮಂದಿರ ಶಾಲೆಯಲ್ಲಿ ತಮ್ಮ  ಪಿಯುಸಿಯನ್ನು ಪೂರ್ಣಗೊಳಿಸಿದ ಹರಿಪ್ರಿಯಾ, ನೃತ್ಯದಲ್ಲಿ ತುಂಬಾ ಆಸಕ್ತಿ ಇದ್ದಿದ್ದರಿಂದ ಭರತ ನಾಟ್ಯ ತರಬೇತಿಗೆ ಸೇರಿಕೊಂಡರು. ಭರತ ನಾಟ್ಯ ಕಲಿತ ನಂತರ ಹಲವಾರು ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿ, ಮೆಚ್ಚುಗೆ ಪಡೆದರು.

ಒಮ್ಮೆ ಇವರ ಭರತನಾಟ್ಯದ ಚಿತ್ರಗಳನ್ನು ಗಮನಿಸಿದ ನಿರ್ದೇಶಕ ರಿಚರ್ಡ್ ಇವರಿಗೆ 2008ರಲ್ಲಿ ತುಳು ಚಿತ್ರದಲ್ಲಿ ಅಭಿನಯಿಸಲು ಅವಕಾಶ ಕೊಟ್ಟರು. ಹಾಗಾಗಿ 2008ರಲ್ಲಿ ತೆರೆಕಂಡ ಮನಸುಗಳ ಮಾತು ಮಧುರ ಎಂಬ ಕನ್ನಡ ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು. ಇದಾದ ನಂತರ ಕಳ್ಳರ ಸಂತೆ, ಚೆಲುವೆಯೇ ನಿನ್ನ ನೋಡಲು ಮುಂತಾದ ಕನ್ನಡ ಚಿತ್ರಗಳಲ್ಲಿ ನಟಿಸಿದರು. 

ಆದರೆ, 2014ರಲ್ಲಿ ತೆರೆಕಂಡ ಉಗ್ರಂ ಸಿನಿಮಾ ಅವರ ವೃತ್ತಿಜೀವನಕ್ಕೆ ತಿರುವು ನೀಡಿತು. ಈ ಚಿತ್ರದ ಬಳಿಕ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದು, ಕೆಲವು ತೆಲುಗು, ಮಲಯಾಳಂ, ತುಳು ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ಹರಿಪ್ರಿಯಾ ಕಳೆದವರ್ಷ ಡಿಸೆಂಬರ್ 3ರಂದು ನಟ ವಸಿಷ್ಠ ಸಿಂಹ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 

2023ರ ಜನವರಿ 26ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ  ಇವರಿಬ್ಬರು ಮದುವೆಯಾಗಿದ್ದಾರೆ. ಈಗ ತಮ್ಮದೇ ಸ್ವಂತ ಯೂ ಟ್ಯೂಬ್ ಚಾನಲ್ ಮಾಡಿ ಅದರಿಂದ ಜನರ ಮನಕ್ಕೆ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.