ಬಿಗ್ ಬಾಸ್ ತನಿಷಾ ಅವರ ಮನೆ ಎಷ್ಟು ಕೋಟಿದ್ದು ಗೊತ್ತಾ, ಇಷ್ಟೊಂದು ಶ್ರೀಮಂತರ

 | 
ರ್

ವಾರದ ಮಧ್ಯದಲ್ಲೇ ತನಿಷಾ ಕುಪ್ಪಂಡ ಬಿಗ್‌ಬಾಸ್ ಜರ್ನಿ ಮುಗಿಸಿ ಹೊರ ಬಂದಿದ್ದು ಹಲವರಿಗೆ ಅಚ್ಚರಿ ಮೂಡಿಸಿದೆ. ಬಿಗ್‌ಬಾಸ್ ಟ್ರೋಫಿ ಗೆಲ್ಲದಿದ್ದರೂ ತನಿಷಾ ವೀಕ್ಷಕರ ಮನಗೆದ್ದಿದ್ದಾರೆ. ಆಕೆಯ ದಿಢೀರ್ ಎಲಿಮಿನೇಷನ್‌ ಹಲವರಿಗೆ ಅಚ್ಚರಿ ಮೂಡಿಸಿದೆ. ಕೆಲವರು ತನಿಷಾ ಇನ್ನು ಹೊರಬಂದಿಲ್ಲ. ಸೀಕ್ರೆಟ್‌ ರೂಮ್‌ಗೆ ಹೋಗಿದ್ದಾರೆ ಎಂದೇ ಭಾವಿಸಿದ್ದಾರೆ.

ತನಿಷಾ ಕುಪ್ಪಂಡ ಬಿಗ್‌ಬಾಸ್ ಮನೆಯಿಂದ ಹೊರಬಂದಿರುವುದು ಇದೀಗ ಖಚಿತವಾಗಿದೆ. ಸ್ವತಃ ವಿಡಿಯೋ ಮಾಡಿ ಈ ಬಗ್ಗೆ ಆಕೆ ಪ್ರತಿಕ್ರಿಯಿಸಿದ್ದಾರೆ. ಬೇಸರದಿಂದ ಹೊರ ಬಂದ ನನಗೆ ಅಚ್ಚರಿ ಕಾದಿತ್ತು ಎಂದಿದ್ದಾರೆ. ಸದ್ಯ ತನಿಷಾ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ. 3 ತಿಂಗಳ ಹಿಂದೆ ಬಿಗ್‌ಬಾಸ್ ಕನ್ನಡ ಸೀಸನ್ 10ರ ಮನೆಗೆ 19 ಜನ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಅವರಲ್ಲಿ ತನಿಷಾ ಕೂಡ ಒಬ್ಬರು. ಮಂಗಳ ಗೌರಿ ಧಾರವಾಹಿ ಅಲ್ಲಿ ನಟಿಸಿ ನಂತರ ದುಂಡುಪಾಳ್ಯ, ಪೆಂಟಗಾನ್ ಸಿನೆಮಾದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡ ಸುಂದರಿ ಇವರು.

ಟಾಸ್ಕ್‌ಗಳಲ್ಲಿ ಮಾತ್ರವಲ್ಲ, ಮನರಂಜನೆಯಲ್ಲೂ ತನಿಷಾ ಮುಂದಿದ್ದರು. ಬುಧವಾರ ರಾತ್ರಿ ದಿಢೀರನೇ ತನಿಷಾ ಎಲಿಮಿನೇಟ್ ಆಗಿದ್ದಾರೆ ಎಂದಾಗ ಕೆಲವರಿಗೆ ಶಾಕ್ ಆಗಿತ್ತು. ಆಕೆ ಕೂಡ ನಿರೀಕ್ಷೆ ಮಾಡಿರಲಿಲ್ಲ. ಕೊನೆ ಪಕ್ಷ ಫೈನಲಿಸ್ಟ್ ಆಗಿ ಗ್ರ್ಯಾಂಡ್ ಫಿನಾಲೆ ವೇದಿಕೆ ಏರುತ್ತಾರೆ ಎಂದುಕೊಂಡಿದ್ದರು. ಬಿಗ್‌ಬಾಸ್ ಮನೆಯಿಂದ ಹೊರ ಬರಬೇಕು ಎನ್ನುತ್ತಿದ್ದಂತೆ ಭಾವುಕರಾಗಿ ಅತ್ತಿದ್ದರು.

ಬಿಗ್‌ಬಾಸ್ ಮನೆಯಿಂದ ಹೊರ ಬಂದ ತನಿಷಾ ಪ್ರತಿಕ್ರಿಯಿಸಿದ್ದಾರೆ. ಆದರೆ ಬಿಗ್‌ಬಾಸ್ ಜರ್ನಿ ಬಗ್ಗೆ ಮಾತನಾಡಿಲ್ಲ. ಅಭಿಮಾನಿಗಳಿಂದ ಸಿಕ್ಕ ರೆಸ್ಪಾನ್ಸ್ ಬಗ್ಗೆ ಸ್ಪಂದಿಸಿದ್ದಾರೆ. ತನಿಷಾ ಬಿಗ್‌ಬಾಸ್ ಮನೆಯಲ್ಲಿದ್ದಾಗ ಆಕೆಯ ಆಟವನ್ನು ನೋಡಿ 'ಬೆಂಕಿ ಬಂತೋ' ಎನ್ನುವ ಆಲ್ಬಮ್ ಸಾಂಗ್ ರಿಲೀಸ್ ಆಗಿತ್ತು. ಶಶಾಂಕ್ ಶೇಷಗಿರಿ ಮ್ಯೂಸಿಕ್ ಮಾಡಿ ಹಾಡಿದ್ದರು. ಶಮಂತ್ ನಾಗರಾಜ್ ಸಾಹಿತ್ಯ ಬರೆದಿದ್ದರು. ಈ ಹಾಡು ಕೇಳಿ ತನಿಷಾ ಖುಷಿ ವ್ಯಕ್ತಪಡಿಸಿದ್ದಾರೆ. ತಮ್ಮದೇ ಒಡೆತನದ ಅಪ್ಪುಸ್ ಕಿಚನ್ ಹೋಗಿ ಸಮಯ ಕಳೆದಿದ್ದಾರೆ ಈ ಕೊಡಗಿನ ಕುವರಿ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.