ಬಿಗ್ ಬಾಸ್ ಮನೆಯಲ್ಲಿ ಎಷ್ಟು ಲವ್ ಸ್ಟೋರಿ ನಡೀತಿದೆ ಗೊತ್ತಾ, ಸಿರಿ ಸ್ನೇಹಿತ್ ರಹಸ್ಯ ಬಯಲು ಮಾಡಿದ ಸ್ನೇಕ್ ಶ್ಯಾಮ್

 | 
ಕ್ಕ್

 ಬಿಗ್ ಬಾಸ್ ಮನೆಯಲ್ಲಿ ಆಟಕ್ಕಿಂತಲೂ ನೋಟವೇ ಜಾಸ್ತಿಯಾಗಿದೆ. ಆ ನೋಟ ಈಗ ಪ್ರೀತಿ ಪ್ರೇಮವಾಗಿ ಬದಲಾಗುತ್ತದೆ. ಈ ಪ್ರೀತಿ ಪ್ರೇಮ ಎಷ್ಟು ದಿನಗಳ ಕಾಲ ಇರತ್ತೋ ಗೊತ್ತಿಲ್ಲ. ಆದರೆ, ನೋಡುಗರಿಗೆ ಮನರಂಜನೆಯನ್ನಂತೂ ಪಕ್ಕಾ ನೀಡುತ್ತದೆ. ಬಿಗ್ ಬಾಸ್ ಮನೆಯಲ್ಲಿ ಜೋಡಿಯಾದ ಹಕ್ಕಿಗಳು ಮನೆಯಿಂದ ಆಚೆ ಬಂದಾಗ ಮತ್ತೆ ಒಟ್ಟಾಗಿ ರೆಕ್ಕೆ ಬಿಚ್ಚಿದ್ದು ಕಡಿಮೆ. ಮದುವೆ ಆಗಿದ್ದು ಇನ್ನೂ ಕಡಿಮೆ.

ಸದ್ಯ ಬಿಗ್ ಬಾಸ್ ಮನೆಯಲ್ಲಿ ಕೇಳಿ ಬರುತ್ತಿರುವ ಪ್ರಣಯ ಪಕ್ಷಿಗಳ ಹೆಸರು ಮೈಕಲ್ ಮತ್ತು ಇಶಾನಿ ಅವರದ್ದು. ಇಬ್ಬರೂ ಮೂಲತಃ ಕರ್ನಾಟಕದವರೇ ಆಗಿದ್ದರೂ, ಹುಟ್ಟಿ ಬೆಳದದ್ದು ಬೇರೆ ಬೇರೆ ಕಡೆ. ಮೈಕಲ್ ನೈಜಿರಿಯಾದಲ್ಲಿ ಬೆಳೆದಿದ್ದರೆ, ಇಶಾನಿ ದುಬೈ ಹಾಗೂ ಇತರ ದೇಶಗಳಲ್ಲಿ ಬೆಳೆದಿದ್ದಾರೆ. ಆದರೂ, ಇಬ್ಬರಿಗೂ ಚೆನ್ನಾಗಿ ಕನ್ನಡ ಬರುತ್ತೆ. ಹಾಗಾಗಿಯೇ ಇಬ್ಬರೂ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಸಂಗೀತಾ ಶೃಂಗೇರಿ ಹಾಗೂ ಕಾರ್ತಿಕ್ ಇಬ್ಬರೂ ದಿನ ಕಳೆದಂತೆ ಹತ್ತಿವಾಗುತ್ತಿದ್ದಾರೆ.ಇಬ್ಬರ ಮಧ್ಯೆ ದಿನ ಕಳೆದಂತೆ ಪ್ರೀತಿ ಅರಳುತ್ತಿದೆ ಎಂದು ಜನರು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದು, ಇವರ ನಡುವೆ ಪ್ರೀತಿ ಮೂಡುವ ಎಲ್ಲ ಲಕ್ಷಣಗಳು ಕಾಣುತ್ತಿವೆ.ನಾಮಿನೇಷನ್‌ನಿಂದ ಬಚಾವ್‌ ಮಾಡುವ ಟಾಸ್ಕ್‌ನಲ್ಲಿ ಕಾರ್ತಿಕ್‌ ಸಂಗೀತಾ ಪರವಾಗಿ ಆಟವಾಡಿದ್ದು, ಟಾಸ್ಕ್‌ನಲ್ಲಿ ಕೊನೆಯವರೆಗೂ ಸಂಗೀತಾಗೋಸ್ಕರ ಹೋರಾಡಿದರು. 

ಹೀಗೆ ತಮ್ಮದೇ ಸ್ಟೈಲ್ ನಲ್ಲಿ ಬಿಗ್ ಬಾಸ್ ಅನುಭವವನ್ನು ಹಂಚಿಕೊಂಡಿದ್ದಾರೆ ಸ್ನೇಕ್ ಶ್ಯಾಮ್. ಬಿಗ್ ಬಾಸ್ ಕನ್ನಡ ಹತ್ತನೇ ಸೀಸನ್ ನಲ್ಲಿ ಹೊರಬಿದ್ದ ಮೊದಲ ಸ್ಪರ್ಧಿ ಸ್ನೇಕ್ ಶ್ಯಾಮ್ ಆಗಿದ್ದದ್ದಾರೆ.ಹಾಗೆಯೇ ಬಿಗ್ ಬಾಸ್ ಮನೆಯೊಳಗೆ ಒಂದು ವಾರದಲ್ಲಿ ಸಿಕ್ಕ ಅನುಭವದ ಕುರಿತು ಖುಷಿಯೂ ಇದೆ. ಮನೆಯಿಂದ ಹೊರಬಂದ ಬೇಸರವೂ ಇದೆ ಎಂದು ಹೇಳಿದ್ದಾರೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.