ಕಾಟೇರ ಬೆಡಗಿ ಮಾಲಾಶ್ರೀ ಮಗಳು ಎಷ್ಟು ಓದಿದ್ದಾರೆ ಗೊತ್ತಾ, ಇವರ ಜ್ಞಾನದ ಮುಂದೆ ನಾವೆಲ್ಲ ಏನೂ ಇಲ್ಲ

 | 
B

ನಟ ದರ್ಶನ್ ತಮ್ಮ ಚಿತ್ರಗಳಲ್ಲಿ ಕನ್ನಡದ ನಟಿಯರನ್ನು ಹಾಕಿಕೊಳ್ಳುವುದು ಹೆಚ್ಚು. ಹೌದು ಅನೇಕ ಕನ್ನಡ ಮೂಲದ ನಟಿಯರನ್ನು ಬೆಳಕಿಗೆ ತಂದ ಕೀರ್ತಿ ದರ್ಶನ್ ಚಿತ್ರಗಳಿಗೆ ಸಲ್ಲಬೇಕು. ಇದೀಗ ನಟಿ ಆರಾಧನಾ ರಾಮ್ ಅಂದರೆ ಮಾಲಾಶ್ರೀ ಅವರ ಮಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾದ ಮೂಲಕ ಹಿರಿತೆರೆ ಮೇಲೆ ಮಿಂಚಿದ್ದಾರೆ.

ಅಂದಹಾಗೆ ಆರಾಧನಾ ಅವರ ಮೂಲ ಹೆಸರು ರಾಧನಾ ರಾಮ್. ಈ ಹಿಂದೆ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಸಖತ್ ಹೆಸರು ಮಾಡಿದ್ದ ಮಾಲಾಶ್ರೀ ಅವರ ಪುತ್ರಿ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾಟೇರ ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. 2002 ರಲ್ಲಿ ಜನಿಸಿದ ಆರಾಧನಾ ವಯಸ್ಸು 22 ವರ್ಷ. ಆರಾಧನಾ ಅವರ ತಂದೆಯ ಹೆಸರು ರಾಮ್. ಇವರು ಕನ್ನಡದ ಪ್ರಖ್ಯಾತ ಸಿನಿ ನಿರ್ಮಾಪಕರಾಗಿದ್ದರು. 

ಆದರೆ ಆರೋಗ್ಯ ಸಮಸ್ಯೆಯಿಂದ ಇತ್ತೀಚೆಗೆಯಷ್ಟೇ ರಾಮ್ ನಿಧನರಾಗಿದ್ದರು.ಆರಾಧನಾ ಬಿಬಿಎ ಪದವಿ ಪಡೆದಿದ್ದು, ಎರಡು ವರ್ಷ ನಟನೆ ಮತ್ತು ಡ್ಯಾನ್ಸ್ ಕೋರ್ಸ್ ಪೂರ್ಣಗೊಳಿಸಿದ್ದಾರೆ. ಸ್ಯಾಂಡಲ್‌ವುಡ್‌ನ ಕನಸಿನ ರಾಣಿ ಎಂದೇ ಖ್ಯಾತಿ ಪಡೆದಿದ್ದ ಮಾಲಾಶ್ರಿ ಮತ್ತು ಕೋಟಿ ನಿರ್ಮಾಪಕರೆಂದೇ ಖ್ಯಾತಿ ಪಡೆದ ರಾಮು ಅವರ ಮುದ್ದಿನ ಮಗಳು ಈ ಆರಾಧನಾ ರಾಮ್‌. ಇವರ ಮೊದಲ ಹೆಸರು ಅನನ್ಯ ರಾಮು ಎಂದಿತ್ತು. 

ಬಳಿಕ ರಾಧನಾ ರಾಮ್‌ ಎಂದು ಬದಲಾಯಿಸಿಕೊಂಡಿದ್ದರು. ಯಾಕೋ ರಾಧನಾ ಹೆಸರೂ ಇಷ್ಟವಾಗದೆ ಆರಾಧನಾ ರಾಮ್‌ ಹೆಸರಿನಲ್ಲಿ ಕಾಟೇರ ಸಿನೆಮಾಕ್ಕೆ ಎಂಟ್ರಿ ನೀಡಿದ್ದರು. ಇನ್ನು ಕಾಟೇರ ಆರಾಧನಾ ಅವರ ಮೊದಲ ಚಿತ್ರವಾಗಿದ್ದು, ಮೂಲಗಳ ಪ್ರಕಾರ ಸಂಭಾವನೆಯಾಗಿ ಬರೋಬ್ಬರಿ 10 ಲಕ್ಷ ರೂಪಾಯಿ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.