ಗಟ್ಟಿಮೇಳ ಧಾರಾವಾಹಿ ನಿಶಾ ಮೇಕಪ್ ಇಲ್ಲದೆ ಹೇಗೆ ಕಾಣಿಸ್ತಾರೆ ಗೊತ್ತಾ, ಬೆಚ್ಚಿಬೀಳೋದು ಪಕ್ಕಾ

 | 
Hgg

 ಗಟ್ಟಿಮೇಳ ಧಾರಾವಾಹಿಯಲ್ಲಿ ಅಮೂಲ್ಯ ಹೆಸರಿನ ಪಾತ್ರ ಮಾಡುತ್ತಿರುವ ನಿಶಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಈಗ ಅವರು ನೋ ಮೇಕಪ್​ ಲುಕ್​ನ ಹಂಚಿಕೊಂಡಿದ್ದಾರೆ.ಅದರಲ್ಲೂ ಚಹಾ ಕುಡಿಯುತ್ತಿರುವ ಫೋಟೋನ ಅವರು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಅವರು ಚಹಾ/ಕಾಫಿ ಆಯ್ತಾ ಎಂದು ಕ್ಯಾಪ್ಶನ್ ಹಾಕಿದ್ದಾರೆ.ಈ ಫೋಟೋದಲ್ಲಿ ನಿಶಾ ಅವರು ಯಾವುದೇ ಮೇಕಪ್ ಹಾಕಿಕೊಂಡಿಲ್ಲ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಸಾವಿರಾರು ಲೈಕ್ಸ್ ಸಿಕ್ಕಿದೆ.

ಸಾಮಾನ್ಯವಾಗಿ ಹೀರೋಯಿನ್​ಗಳು ಮೇಕಪ್ ಇಲ್ಲದೆ ಫೋಟೋ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಆದರೂ ನಿಶಾ ಅವರು ಆ ಸಾಲಿಗೆ ಸೇರುವುದಿಲ್ಲ.ನಿಶಾ ಅವರು ಗಟ್ಟಿಮೇಳ ಧಾರಾವಾಹಿಯಲ್ಲಿ ರೌಡಿ ಬೇಬಿ ಎಂದೇ ಫೇಮಸ್. ಅವರನ್ನು ಅನೇಕರು ಇದೇ ಹೆಸರಿನಿಂದ ಕರೆಯುತ್ತಾರೆ.ನೋಡಲು ಕಂದು ಮಿಶ್ರಿತ ಬಣ್ಣದಲ್ಲಿದ್ದರೂ ಮುಖದಲ್ಲಿ ಮಂದಹಾಸ ಕಣ್ಣುಗಳಲ್ಲೇ ನಟನೆ ಮಾಡಲು ಬಲ್ಲ ನಿಶಾ ಫೋಟೋಕ್ಕೆ ನೆಟ್ಟಿಗರು ನಿಮ್ಮ ಫೋಟೋ ಮೇಕಪ್ ಇಲ್ಲದೆ ನೋಡಲು ಭಯವಾಗುತ್ತದೆ ಎಂದು ಕಾಲೆಳೆದಿದ್ದಾರೆ.

ನಿಶಾ ಅವರು ಪರಭಾಷೆಯವರಿಗೂ ಪರಿಚಿತರು. ಅಲ್ಲಿಯೂ ಅವರು ಧಾರಾವಾಹಿಗಳನ್ನು ಮಾಡುತ್ತಿದ್ದಾರೆ. ಅಲ್ಲಿಯವರೂ ನಿಶಾನ ಇಷ್ಟಪಟ್ಟಿದ್ದಾರೆ. ಗಟ್ಟಿಮೇಳ ಧಾರಾವಾಹಿಗೆ ಒಳ್ಳೆಯ ಟಿಆರ್​ಪಿ ಇದೆ. ಕಳೆದ ವಾರ ಈ ಧಾರಾವಾಹಿ ಟಾಪ್​ ಹತ್ತರಲ್ಲಿ ಎರಡನೇ ಸ್ಥಾನದಲ್ಲಿ ಇತ್ತು.
ಈಕೆ ನಟನೆಯನ್ನು ಬಹಳ ಮಂದಿ ಹೊಗಳ್ತಾರೆ. ಕನ್ನಡ ಮಾತ್ರ ಅಲ್ಲ, ತೆಲುಗು ಸೀರಿಯಲ್‌ನಲ್ಲೂ ಈಕೆ ಫೇಮಸ್. ಅಲ್ಲೂ ದೊಡ್ಡ ಅಭಿಮಾನಿ ಬಳಗ ಈಕೆಗಿದೆ. ಕಿರುತೆರೆಯಲ್ಲಿ ಖ್ಯಾತಿ ಗಳಿಸಿರುವ ನಿಶಾ ರವಿಕೃಷ್ಣನ್, ನಟನೆ ಮಾತ್ರ ಅಲ್ಲ, ಸಿಂಗರ್ ಹಾಗೂ ಡ್ಯಾನ್ಸರ್ ಕೂಡ ಆಗಿದ್ದಾರೆ. ಟಿವಿಯಲ್ಲಿ ತನ್ನ 12ನೇ ವಯಸ್ಸಿಗೇ ನಿರೂಪಕಿ ಆಗಿದ್ದವರು ನಿಶಾ ರವಿಕೃಷ್ಣನ್. ಸುಮಾರು ನಾಲ್ಕು ವರ್ಷಗಳ ಕಾಲ ಈಕೆ ನಿರೂಪಕಿಯಾಗಿದ್ದರು. ಸದ್ಯ ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ನಟಿಸುತ್ತಿರುವ ನಿಶಾ ಅವರಿಗೆ ಎರಡೂ ರಾಜ್ಯಗಳಲ್ಲೂ ಅಭಿಮಾನಿಗಳಿದ್ದಾರೆ.

ಬಹುಮುಖ ಪ್ರತಿಭೆ ನಿಶಾ ಬಾಲ್ಯದಲ್ಲೇ ಕ್ಯಾಮರಾ ಫೇಸ್ ಮಾಡುವುದನ್ನು ಕಲಿತಿದ್ದರು. 'ಸರ್ವ ಮಂಗಳ ಮಾಂಗಲ್ಯೇ' ಎಂಬ ಸೀರಿಯಲ್‌ನಲ್ಲಿ ತಂಗಿಯ ಪಾತ್ರದಲ್ಲಿ ನಟಿಸುತ್ತಿದ್ದರು. ತದನಂತರ ನಿಶಾ 'ಗಟ್ಟಿಮೇಳ' ಸೀರಿಯಲ್ ಮೂಲಕ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಮೂಲ್ಯ ಪಾತ್ರದಲ್ಲಿ ಮಿಂಚುತ್ತಿರುವ ನಿಶಾ ಅವರ ಲುಕ್, ಚುರುಕುತನ, ರೌಡಿ ಬೇಬಿ ಥರದ ಮಾತುಗಳನ್ನು ಹಲವು ಪ್ರೇಕ್ಷಕರು ಮೆಚ್ಚಿದ್ದಾರೆ. ಈಕೆ ಧಾರಾವಾಹಿ ಮಾತ್ರವಲ್ಲದೇ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ.ಅದೊಂದಿತ್ತು ಕಾಲ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. 'ಇಷ್ಟಕಾಮ್ಯ' ಸಿನಿಮಾದ ಹಾಡೊಂದಕ್ಕೆ ಬ್ಯಾಕ್ ಡ್ಯಾನ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. ನಿಶಾ ರವಿಕೃಷ್ಣನ್ ತೆಲುಗಿನಲ್ಲಿ 'ಮುತ್ಯಮಂತ ಮುದ್ದು'

 ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದರ ಜೊತೆಗೆ ತೆಲುಗಿನ 'ಅಮ್ಮಾಯಿಗಾರು' ಎಂಬ ಧಾರಾವಾಹಿಯಲ್ಲೂ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ನಿಶಾ ಅವರು ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿ ಇರುತ್ತಾರೆ. ಫೋಟೋಶೂಟ್ ಮಾಡಿಸಿ ವಿವಿಧ ಉಡುಗೆಯಲ್ಲಿನ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ. ಇನ್ ಸ್ಟಾಗ್ರಾಂನಲ್ಲಿ ಲಕ್ಷಕ್ಕು ಹೆಚ್ಚು ಫಾಲೋವರ್ಸ್ ಕೂಡ ಇದ್ದಾರೆ.

ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.