ಶಿವ ಭಕ್ತ ಅಘೋರಿಗಳು ಕಾಮ ಗೆದ್ದು ಬರುವುದು ಹೇ ಗೆ ಗೊತ್ತಾ
Jan 31, 2025, 18:25 IST
|

ಅವರು ಮೈತುಂಬಾ ಭಸ್ಮವನ್ನು ಬಳಿದುಕೊಂಡವ್ರು , ಕೊರಳಲ್ಲಿ ರುದ್ರಾಕ್ಷಿ ಮಾಲೆ , ಕೈಯಲ್ಲಿ ತ್ರಿಶೂಲ , ಗದೆಯಂಥಹ ಆಯುಧಗಳನ್ನು ಹಿಡಿದುಕೊಂಡು ಭಂ ಭಂ ಭೋಲೇನಾಥ್ ಅಂತ ಕೂಗುತ್ತಾ ಬರುತ್ತಿದ್ದರೆ ನೋಡುವರ ಕಣ್ಣಿನಲ್ಲಿ ಭಯದ ಜೊತೆಗೆ ಭಕ್ತಿಭಾವವು ಉಂಟಾಗುತ್ತೆ . ನೂರಾರು ಸಿದ್ಧಿಗಳನ್ನು ತಮ್ಮದಾಗಿಸಿಕೊಂಡಿರುವ ಅಸಾಧ್ಯ ಹಠ ಪುರುಷರಾದ ಅವರನ್ನಾ ಅಘೋರಿಗಳು ಅಂತ ಕರೆಯಲಾಗುತ್ತೆ. ಬನ್ನಿ ಇಂದು ಅಘೋರಿಗಳ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದ್ಕೊಂಡು ಬರೋಣ.
ಶಿವನನ್ನಾ ಮುಖ್ಯ ದೇವರಾಗಿ ಪೂಜಿಸೊ ಅಘೋರಗಳು ಶಕ್ತಿ ದೇವತೆಯನ್ನು ಕೂಡಾ ಆರಾಧನೆ ಮಾಡ್ತಾರೆ . ಇವರ ಜೀವನದ ಮೂಲ ಗುರಿ ದೇಹವನ್ನು ಶಿವನಲ್ಲಿ ಐಕ್ಯಮಾಡಿ ಮುಕ್ತರಾಗುವುದಾಗಿದೆ. ಇವರ ಪ್ರಕಾರ ದೇಹ ಅನ್ನೋದು ನಶ್ವರ . ಕೊನೆಯಲ್ಲಿ ಸತ್ತು ಬೂದಿಯಾಗೋ ದೇಹಕ್ಕೆಗೆ ಬೆಚ್ಚಗಿನ ಉಡುಪು ತೊಡಿಸಬೇಕು ಅನ್ನೋ ಧೋರಣೆ ಇವರದು . ಪಂಚೇಂದ್ರಿಯಗಳನ್ನಾ ಗೆದ್ದಾಗ ಮಾತ್ರ ಪರಮೇಶ್ವರನನ್ನಾ ಸೇರೊಕೆ ಸಾಧ್ಯ ಅನ್ನೋ ಮನಸ್ಥಿತಿ ಇವರದ್ದಾಗಿರುತ್ತೆ . ಹುಟ್ಟುವಾಗ ಯಾವ ರೂಪದಲ್ಲಿ ಬಂದೆವೋ ಅದೇ ರೂಪದಲ್ಲಿ ಭಗವಂತನನ್ನಾ ಸೇರಬೇಕು ಎನ್ನುವ ಭಾವ ಇವರದು . ಹೀಗಾಗಿಯೆ ಇವರು ನಗ್ನರಾಗಿ ಇರೋದಕ್ಕೆ ಮುಜುಗರ ಪಡೋದಿಲ್ಲ . ಇಡೀ ದೇಹಕ್ಕೆ ಭಸ್ಮವನ್ನಾ ಲೇಪಿಸಿಕೊಳ್ತಾರೆ. ಸತ್ತ ಮನುಷ್ಯನ ತಲೆ ಬುರುಡೆಯನ್ನಾ ಹಾರವನ್ನಾಗಿ ಮಾಡಿಕೊಳ್ತಾರೆ . ಸತ್ತ ಹೆಣವನ್ನಾ ತಿನ್ನುತ್ತಾರೆ ಇವರ ಪ್ರಕಾರ ಅತ್ಯಂತ ಕೊಳಕು ಹಾಗು ಅಸಹ್ಯಕರ ವಸ್ತುವಿನಲ್ಲಿಯೂ ದೇವರು ನೆಲೆಸಿರುತ್ತಾನಂತೆ . ಹೀಗಾಗಿ ಇವರ ಅನೇಕ ವಿಚಿತ್ರ ಆಚರಣೆಗಳು ನಮ್ಮಲ್ಲಿ ಭಯಹುಟ್ಟುವಂತೆ ಮಾಡುತ್ವೆ .
ಇನ್ನೂ ಅಘೋರಿಗಳಲ್ಲಿ ಅನೇಕ ಪಂಗಡಗಳಿದ್ದು ಅವರನ್ನಾ ಕಾಪಾಲಿಕ , ಕಾಲಾಮುಖ , ನಾಗಸಾಧು ಎಂದೆಲ್ಲಾ ವರ್ಗಿಕರಿಸಲಾಗಿದೆ . ಹೆಚ್ಚಾಗಿ ಜನರ ನಡುವೆ ಕಾಣಿಸಿಕೊಳ್ಳೊಕೆ ಇಷ್ಟಪಡದ ಇವರು ಹಿಮಾಲಯ ತಪ್ಪಲಿನಲ್ಲೊ , ಅಥವಾ ಸ್ಮಶಾನದಲ್ಲೊ , ಗುಡ್ಡ –ಬೆಟ್ಟಗಳಲ್ಲೋ ಏಕಾಂತವಾಗಿ ವಾಸ ಮಾಡೋಕೆ ಇಚ್ಛೆ ಪಡ್ತಾರೆ .ಒಂದೇ ಸ್ಥಳದಲ್ಲಿ ನೆಲೆನಿಲ್ಲೊಕೆ ಇಷ್ಟಪಡದ ಇವರು ನೇರ , ಸರಳ , ದಿಟ್ಟ ಮನಸ್ಸಿನವರಾಗಿದ್ದು ದೇವರನ್ನಾ ತಮ್ಮ ಮನಸ್ಸಿಗೆ ಬಂದ ಹಾಗೆ ಪೂಜೆ ಮಾಡ್ತಾರೆ .
ಶಿವನನ್ನಾ ಒಲಿಸಿಕೊಳ್ಳೊಕೆ ನಾಗಾಸಾಧುಗಳು ಒಂದು ರೀತಿ ಆಚರಣೆ ಮಾಡಿದರೆ ಕಾಪಾಲಿಕ , ಕಾಲಾಮುಖ ಅಘೋರಿಗಳದ್ದು ಮತ್ತೊಂದು ರೀತಿ ಆಚರಣೆಯಾಗಿರುತ್ತೆ . ಈ ಎಲ್ಲಾ ಅಘೋರಗಳಲ್ಲಿ ನಾಗಾಸಾಧುಗಳು ಹೆಚ್ಚು ಪ್ರಖ್ಯಾತವಾಗಿದ್ದಾರೆ .
ಅಂದಹಾಗರ ಎಲ್ಲಾ ಅಘೋರಿಗಳ ತತ್ವಗಳು ಒಂದೇ ಆದರು ಅವರ ಆಚರಣೆಗಳು ಸ್ವಲ್ಪ ಸ್ವಲ್ಪ ಭಿನ್ನವಾಗಿವೆ . ಇವರಲ್ಲಿ ಗುರು ಶಿಷ್ಯ ಪರಂಪರೆಯಿದ್ದು ಅಘೋರಿಗಳಾಗಬೇಕು ಅಂದ್ರೆ ಅಘೋರಿಯಾಗಲು ಬಯಸಿದ ಮನುಷ್ಯ ಹಲವಾರು ಕಠಿಣ ಪರೀಕ್ಷೆಗಳನ್ನಾ ಎದುರಿಸಬೇಕಾಗುತ್ತೆ. ದಿನಗಟ್ಟಲೆ ಊಟವಿಲ್ಲದೆ ಕೇವಲ ಗಾಳಿ ಸೇವಿಸಿ ಬದುಕಬೇಕು , ಕಾಮವನ್ನಾ ನಿಗ್ರಹಿಸಬೇಕು , ಸ್ಮಶಾನದಲ್ಲಿ ನಿರ್ಭಯವಾಗಿ ರಾತ್ರಿಹೊತ್ತು ಹೆಣಗಳ ರಾಶಿ ಮಧ್ಯ ಇರಬೇಕು , ಸತ್ತ ಮನುಷ್ಯನ ಮಾಂಸವನ್ನಾ ತಿನ್ನಬೇಕು , ತಮ್ಮ ಗುಪ್ತಾಂಗಗಳಿಗೆ ಶಿಕ್ಷೆ ನೀಡಬೇಕು , ಹೀಗೆ ಏನೇನೊ ಕಟ್ಟುಪಾಡುಗಳು ಇವೆ . ಅನೇಕ ವರ್ಷಗಳ ಪರೀಕ್ಷೆಯಲ್ಲಿ ಆ ಮನುಷ್ಯ ಯಶಸ್ವಿ ಆದರೆ ಮಾತ್ರ ಗುರುಗಳು ಆ ವ್ಯಕ್ತಿಗೆ ಅಘೋರಿಯಾಗಲು ದೀಕ್ಷೆ ನೀಡುತ್ತಾರೆ . ಅಘೋರಿಯಾಗೋದು ಅಂದ್ರೆ ತಮಾಷೆ ವಿಷಯವಲ್ಲಾ ಗುರುಗಳು ಹೇಳಿದ ಕಠಿಣ ಪರಿಕ್ಷೆಗಳಲ್ಲಿ ಜಯಗಳಿಸ್ಬೇಕು ಅಂದ್ರೆ ದೇಹ ಮನಸ್ಸು ಎರಡನ್ನು ದಂಡನೆ ಮಾಡ್ಬೇಕಾಗುತ್ತೆ . ಅಲ್ಲದೆ ಇವೆಲ್ಲವನ್ನಾ ಮಾಡೋಕೆ ಐದರಿಂದ –ಹತ್ತು ವರ್ಷಗಳ ಕಾಲ ಏಕಾಗ್ರಚಿತ್ತರಾಗಿ ಮನಸ್ಸನ್ನಾ ಹತೋಟಿಗೆ ತೆಗೆದುಕೊಳ್ಳಬೇಕಾಗುತ್ತೆ.
ಇನ್ನೂ ಇವರ ನಂಬಿಕೆ ಪ್ರಕಾರ ಶಿವನ ಭೈರವ ಅವತಾರವು ಅತ್ಯಂತ ಶ್ರೇಷ್ಟವಾದುದ್ದಾಗಿದೆ . ಇಡೀ ವಿಶ್ವವೇ ಶಿವನ ಅಧೀನ , ಪ್ರತಿಯೊಬ್ಬರ ಆತ್ಮದಲ್ಲೂ ಶಿವನಿರ್ತಾನೆ ಎಂಬ ನಂಬಿಕೆ ಇವರದು . ಆಸೆ , ಕೋಪ , ಭಯ , ಲೋಭ , ದುರಾಸೆ , ದ್ವೇಷಗಳನ್ನಾ ನಿಗ್ರಹಿಸದವನು ಮಾತ್ರ ಪರಮಾತ್ಮನಲ್ಲಿ ಸೇರೊಕೆ ಸಾಧ್ಯ ಅನ್ನೋ ಭಾವ ಇವರದು . ಹೀಗಾಗಿಯೆ ಅತಿ ಭಯಂಕರ ಹಾಗು ವಿಚಿತ್ರವಾದ ಆಚರಣೆಗಳನ್ನಾ ಇವರು ಪಾಲನೆ ಮಾಡ್ತಾರೆ . ಇವರು ಯಾರೊಂದಿಗು ತಮ್ಮ ನಿಜವಾದ ಹೆಸರನ್ನಾ ಹೇಳೋದಿಲ್ಲ . ಯಾರು ಏನೇ ಕರೆದರು ಸರಿಯೆ , ತಮ್ಮ ಪೂರ್ವಾಶ್ರಮದ ಕುರಿತು ಮಾತನಾಡೋದಿಲ್ಲ . ಎಲ್ಲರನ್ನು ಸಮಸ್ಥಿತಿಯಲ್ಲಿ ನೋಡೊ ಇವರು ರೋಗಗಳನ್ನಾ ಗುಣಪಡಿಸುವ ಶಕ್ತಿಯನ್ನಾ ಹೊಂದಿರ್ತಾರೆ ಎಂದು ಹೇಳಲಾಗುತ್ತೆ . ಅಘೋರಿಗಳ ಆಚಾರ ವಿಚಾರಗಳು ಕೇವಲ ಶಿವನ ನಿಜಸ್ವರೂಪವನ್ನಾ ತಿಳಿದುಕೊಳ್ಳುವುದು ಹಾಗು ಮೋಕ್ಷವನ್ನಾ ಪಡೆದುಕೊಳ್ಳೊದು ಮಾತ್ರ ಆಗಿರುತ್ತೆ . ಕುಂಭಮೇಳದ ಸಮಯದಲ್ಲಿ ಕಾಣಿಸಿಕೊಳ್ಳೊ ಇವರು ಕುಂಭಮೇಳ ಮುಗಿದ ನಂತರ ಮತ್ತೆ ತಪಸ್ಸನ್ನಾ ಮಾಡೋಕೆ ಹೊರಟು ಹೋಗ್ತಾರೆ . ಶಿವನ ಆಲಯಗಳಾದ ಕಾಶಿ , ಶ್ರೀಶೈಲ , ಪಶುಪತಿನಾಥ , ಕೇದಾರನಾಥ ಸ್ಥಳಗಳಲ್ಲಿ ಕಾಣಿಸೊ ಇವರು 100ಕ್ಕೂ ಹೆಚ್ಚು ವರ್ಷಗಳ ಕಾಲ ಬದುಕುತ್ತಾರಂತೆ . ಕೈಯಲ್ಲಿ , ತ್ರಿಶೂಲ , ಡಮರು , ಗದೆಯನ್ನಾ ಹಿಡಿದಿರೊ ಇವರು ಸುಲಭವಾಗಿ ಯಾರಿಗೂ ದರ್ಶನ ನೀಡೋದಿಲ್ಲ .
ಇಂದಿಗೂ ಈ ಅಘೋರಿಗಳ ಜೀವನ ಶೈಲಿ ಪೂರ್ತಿಯಾಗಿ ಸಾಮಾನ್ಯರಿಗೆ ಅರ್ಥವಾಗಿಲ್ಲ . ಸ್ಮಶಾನವಾಸಿಯಾದ ಇವರ ಬದುಕು ತುಂಬಾನೇ ನಿಗೂಢವಾಗಿದೆ . ಅಘೋರಿಗಳೆಂದ್ರೆ ವಾಮಾಚಾರಿಗಳಲ್ಲಾ , ಅವರು ಅದ್ಭುತವಾದ ಮನೊನಿಗ್ರಹವುಳ್ಳ ಶಕ್ತಿ ಪುರುಷರಾಗಿದ್ದಾರೆ. ಬಹುಶಃ ಜೀವನದಲ್ಲಿ ವಿರಕ್ತಿ ಮೂಡಿದ ಪ್ರತಿಯೊಬ್ಬ ಮನುಷ್ಯನೊಳಗು ಸತ್ತು ಬೂದಿಯಾಗುವ ದೇಹಕ್ಕೆ ಯಾಕೆ ಇಷ್ಟೊಂದು ಪ್ರಾಧಾನ್ಯತೆ ಕೊಡಬೇಕು .? ಅನ್ನೋ ಪ್ರಶ್ನೆಗಳು ಹುಟ್ಟಬಹುದು ಅಲ್ವಾ ..!. ಅಘೋರಿಗಳ ಜೀವನ , ಅವರ ಸಾಧನೆಗಳ ಬಗ್ಗೆ ಬಗೆದಷ್ಟು ಹೊಸ ಹೊಸ ವಿಷಯಗಳು ನಮಗೆ ಅರಿವಾಗುತ್ತಲೇ ಹೋಗುತ್ತವೆ . ಪ್ರತಿಯೊಬ್ಬ ಮನುಷ್ಯನು ಅಹಂಕಾರವನ್ನು ಬಿಟ್ಟು ಎಲ್ಲರೊಟ್ಟಿಗೆ ಸಂತೋಷ , ಸಮಭಾವದಿಂದ ಬದುಕಿದರೆ ಈ ಜಗತ್ತನ್ನು ಸುಂದರವಾಗಿಸಬಹುದಾಗಿದೆ . ಇವಿಷ್ಟು ಅಘೋರಿಗಳ ಕುರಿತಾದ ಮಾಹಿತಿಯಾಗಿದ್ದು ಮುಂದಿನ ಸಂಚಿಕೆಯಲ್ಲಿ ಇನ್ನೊಂದು ಹೊಸ ವಿಷಯವನ್ನು ನಿಮಗೆ ಹೇಳೊಕೆ ಬರ್ತಿನಿ ಧನ್ಯವಾದಗಳು .