ಕಿಚ್ಚನ ಮುಂದೆ ಕಳಚುತ್ತಾ ಅಸಲಿ ಮುಖವಾಡ, ಸುದೀಪ್ ಟಾಂಗ್ ಕೊಟ್ಟಿದ್ಯಾರಿಗೆ ಗೊತ್ತಾ

 | 
ರರ

 ಬಿಗ್‌ಬಾಸ್‌ ಮನೆಯೊಳಗೆ ಈ ವಾರ ಗಂಧದ ಗುಡಿ ತಂಡದ ಕ್ಯಾಪ್ಟನ್ ಆಗಿದ್ದ ಡ್ರೋನ್ ಪ್ರತಾಪ್, ತಂಡವನ್ನ ಒಗ್ಗೂಡಿಸಿದ ರೀತಿ, ನಾಮಿನೇಷನ್ ಅಸ್ತ್ರವನ್ನ ಬಳಸಿದ ರೀತಿ, ಉಸ್ತುವಾರಿ ವೇಳೆ ಡ್ರೋನ್ ಪ್ರತಾಪ್‌ ಫೇರ್‌ ಆಗಿ ಆಟವಾಡಿದ ರೀತಿ ಇತರೆ ಸ್ಪರ್ಧಿಗಳಿಗೆ ಇಷ್ಟವಾಗಿದೆ. ಹೀಗಾಗಿ ಡ್ರೋನ್ ಪ್ರತಾಪ್‌ಗೆ ಬೆಸ್ಟ್ ಪರ್ಫಾಮೆನ್ಸ್ ಮೆಡಲ್ ಲಭಿಸಿದೆ.

ಹೀಗಾಗಿ ಡ್ರೋನ್ ಪ್ರತಾಪ್‌ಗೆ ಸ್ನೇಹಿತ್, ಕಾರ್ತಿಕ್, ವರ್ತೂರು ಸಂತೋಷ್, ನೀತು, ಮೈಕಲ್ ವೋಟ್‌ ಹಾಕಿರುವುದರಿಂದ, ಅತಿ ಹೆಚ್ಚು ಮತಗಳನ್ನ ಪಡೆದ ಡ್ರೋನ್ ಪ್ರತಾಪ್ ‘ಉತ್ತಮ’ ಪಟ್ಟ ಪಡೆದರು. ಇನ್ನೊಂದು ಕಡೆ  ಸಿರಿ ಪಕ್ಷಪಾತ ಮಾಡಿದ್ದಾರೆ. ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಅಂತ ತಂಡದಲ್ಲಿ ಆದ ಮಾತುಕತೆಯನ್ನ ಸಿರಿ ಬಳಿ ನೀತು ಹೇಳಿದ್ದರಿಂದ, ಪಾಪರೆಡ್ಡಿಪಾಳ್ಯ ಗ್ಯಾಂಗ್ ನೀತು ಅವರನ್ನ ಟಾರ್ಗೆಟ್ ಮಾಡಿದರು. ನೀತುಗೆ ವಿನಯ್, ನಮ್ರತಾ, ಸ್ನೇಹಿತ್, ಇಶಾನಿ, ತುಕಾಲಿ ಸಂತು, ಸಿರಿ, ಮೈಕಲ್ ‘ಕಳಪೆ’ ಪಟ್ಟ ಕೊಟ್ಟರು. 

ಇನ್ನೊಂದೆಡೆ ಬಲೂನ್ ಟಾಸ್ಕ್‌ನಲ್ಲಿ ಪದೇ ಪದೇ ನಿರ್ಧಾರಗಳನ್ನ ಬದಲಿಸಿದ ಇಶಾನಿಗೆ ಸಂಗೀತಾ, ಕಾರ್ತಿಕ್, ವರ್ತೂರು ಸಂತೋಷ್, ನೀತು, ಡ್ರೋನ್ ಪ್ರತಾಪ್, ಭಾಗ್ಯಶ್ರೀ ಮತ್ತು ತನಿಷಾ ಕಳಪೆ ಪಟ್ಟ ನೀಡಿದರು. ತಲಾ ಏಳು ಮತಗಳನ್ನು ಪಡೆದ ನೀತು ಮತ್ತು ಇಶಾನಿ ಒಟ್ಟಿಗೆ ಜೈಲಿಗೆ ತೆರಳಿದ್ದಾರೆ. ಇದೇ ಮೊದಲ ಬಾರಿಗೆ ಬಿಗ್‌ಬಾಸ್ ಕನ್ನಡ ಇತಿಹಾಸದಲ್ಲಿ ಏಕಕಾಲಕ್ಕೆ ಇಬ್ಬರು ಕಳಪೆ ಪಟ್ಟ ಪಡೆದು ಜೈಲಿಗೆ ತೆರಳಿದ್ದಾರೆ.

ಡ್ರೋನ್‌ ಪ್ರತಾಪ್‌ಗೆ ಬೆಸ್ಟ್ ಪರ್ಫಾಮೆನ್ಸ್ ಮೆಡಲ್ ಲಭಿಸಿದನ್ನ, ಅಪ್ಪ, ಅಮ್ಮ, ತಂಗಿ, ತಾತನಿಗೆ ಡೆಡಿಕೇಟ್ ಮಾಡ್ತೀನಿ. ಸುದೀಪ್‌ ಸರ್‌ಗೆ ಬಿಗ್ ಥ್ಯಾಂಕ್ಸ್. ನನ್ನಲ್ಲಿ ಅವರು ಹೊಸ ಚೈತನ್ಯ ತಂದರು. ಮುಂದೆ ಚೆನ್ನಾಗಿ ಟಾಸ್ಕ್‌ನಲ್ಲಿ ಪರ್ಫಾಮ್‌ ಮಾಡ್ತೀನಿ ಎಂದರು ಹೇಳಿದ್ದಾರೆ ಪ್ರತಾಪ ನಮೃತಾ ಕಾರ್ತೀಕ್ ಸೇಫ್ ಆದರೆ ಉಳಿದವರು ಭಯದಲ್ಲಿದ್ದಾರೆ. ಇನ್ನು ಈ ವಾರ ಎಲ್ಲರ ಅಸಲಿ ಮುಖ ಕಳಚತ್ತ ನೋಡಬೇಕಿದೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.