'ದುರಾಂಕರಿ ವಿನಯ್ ಗೌಡ' ಬುಲೆಟ್ ರಕ್ಷಕ್ ಹೇಳಿದ್ದೇನು ಗೊತ್ತಾ

 | 
ಕ

ಕೆಲ ದಿನಗಳ ಕಾಲ ಬಿಗ್ಬಾಸ್ ಮನೆಯಲ್ಲಿದ್ದರು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಬುಲೆಟ್ ಪ್ರಕಾಶ್ ಮಗ ರಕ್ಷಕ್  ಅವರು ಗುರು ಶಿಷ್ಯರು ಸಿನಿಮಾದಲ್ಲಿ ನಟಿಸಿದ್ದರು. ತಮಗೆ ಸಾಕಷ್ಟು ಜನಪ್ರಿಯತೆ ಇದೆ, ದೊಡ್ಡ ಅಭಿಮಾನಿ ಬಳಗ ಇದೆ ಎಂದು ಯಾವಾಗಲೂ ಹೇಳುತ್ತಾ ಇರುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಒಂದು ಆರೋಪ ಮಾಡಿದ್ದರು. 

ವಿನಯ್ ಗುಂಪುಗಾರಿಕೆ ಮಾಡುತ್ತಿದ್ದಾರೆ ಹಾಗೂ ರಕ್ಷಕ್ ಈ ಗುಂಪಿನ ಸದಸ್ಯ ಆಗಿದ್ದರು ಎಂದು ಪರೋಕ್ಷವಾಗಿ ಹೇಳಿದ್ದರು. ಈ ಆರೋಪಕ್ಕೆ ಉತ್ತರ ನೀಡಿದ್ದಾರೆ ರಕ್ಷಕ್. ಅವರ ಇನ್​​ಸ್ಟಾಗ್ರಾಮ್ ಪೋಸ್ಟ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ಕಳೆದ ಶನಿವಾರ  ಎಪಿಸೋಡ್​ನಲ್ಲಿ ಪುಸ್ತಕಗಳನ್ನು ನೀಡುವ ಟಾಸ್ಕ್​ ನೀಡಲಾಗಿತ್ತು. ಒಬ್ಬರನ್ನು ತುಳಿದು ಮೇಲೆ ಬರೋದು ಹೇಗೆ ಎನ್ನುವ ಪುಸ್ತಕವನ್ನು ಡ್ರೋನ್ ಪ್ರತಾಪ್ ಅವರು ವಿನಯ್​ಗೆ ನೀಡಿದರು. ಅಲ್ಲದೆ, ಇದರ ಬಗ್ಗೆ ಅವರು ವಿವರಣೆ ನೀಡಿದರು. 

ವಿನಯ್ ಅವರು ಗುಂಪುಗಾರಿಕೆ ಮಾಡಿದ್ದಾರೆ. ಆದರೆ, ಜೊತೆಗೆ ಇದ್ದವರ ತಪ್ಪನ್ನು ಅವರು ಹೇಳಲೇ ಇಲ್ಲ. ಹೀಗಾಗಿ ಒಬ್ಬೊಬ್ಬರೇ ಮನೆಯಿಂದ ಹೋದರು. ಆ ಬೆಡ್​ಶೀಟ್ ವಿನಯ್ ಅವರ ಬೆಡ್ ಸೇರುತ್ತಿದೆ ಎಂದಿದ್ದರು ಪ್ರತಾಪ್. ಬಿಗ್ ಬಾಸ್​ನಿಂದ ಕೇವಲ ಒಂದೇ ತಿಂಗಳಿಗೆ ರಕ್ಷಕ್ ಔಟ್ ಆದರು. ಅವರು ವಿನಯ್ ಗ್ರೂಪ್​ ಸೇರಿದ್ದ ವಾರವೇ ಎಲಿಮಿನೇಟ್ ಆಗಿದ್ದರು. ಆದರೆ, ತಾವು ತಂಡ ಕಟ್ಟೋಕೆ ಹೋಗಿಲ್ಲ ಎಂದಿದ್ದಾರೆ ರಕ್ಷಕ್. 

ಎಲ್ಲರಿಗೂ ನಮಸ್ಕಾರ. ಯಾವುದೇ ಗುಂಪುಗಾರಿಕೆ ಮಾಡೋಕೆ ಅಥವಾ ತಂಡ ಕಟ್ಟೋಕೆ ಬಿಗ್ ಬಾಸ್ ಮನೆ ಒಳಗೆ ಹೋದವನು ನಾನಲ್ಲ. ಜನರ ಪ್ರೀತಿ ಮತ್ತು ಜನರ ವಿಶ್ವಾಸ ಗಳಿಸಲು ಹೋಗಿದ್ದೆ. ನನ್ನ ಬೆಡ್​ಶೀಟ್ ನನ್ನ ಹತ್ತಿರ ಜೋಪಾನವಾಗಿ ಇದೆ. ನಿಮ್ಮ ಬೆಡ್​ಶೀಟ್ ಜೋಪಾನ ಮಾಡಿಕೊಳ್ಳಿ ಎಚ್ಚರ ಎಂದು ರಕ್ಷಕ್ ಪೋಸ್ಟ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.