ಸೌಜನ್ಯ ಕೇಸ್ ದಾರಿ ತಪ್ಪಿಸಿದವನ ಮಗನ ಪರಿಸ್ಥಿತಿ ಏನಾಯಿತು ಗೊತ್ತಾ, ಮಹೇಶ್ ಶೆಟ್ಟಿ ಹೇಳಿದ್ದೇನು

 | 
Bv

ಪೇಟಧಾರಿಗಳು ಸಾಕಷ್ಟು ಅನ್ಯಾಯ ಅಕ್ರಮದ ಕೆಲಸ ಮಾಡಿದ್ದಾರೆ. ಇವರ ಮೇಲೆ ಇದುವರೆಗೂ ಪ್ರಕರಣ ದಾಖಲು ಮಾಡುವ ಕೆಲಸ ಮಾಡಿಲ್ಲ ಎಂದು ಸೌಜನ್ಯ ನ್ಯಾಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಕಿಡಿಕಾರಿದ್ದಾರೆ. ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ಎಸ್‌ಡಿಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದರು.

ವರ್ಷವಾದರೂ ಸೌಜನ್ಯ ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥರು ಯಾರು ಅನ್ನೋದು ಗೊತ್ತಾಗಿಲ್ಲ. ಧರ್ಮಸ್ಥಳದ ದೇವಸ್ಥಾನದ ಪೇಟದಾರಿಗಳು ಲಕ್ಷಾಂತರ ಕೋಟಿ ರೂಪಾಯಿ ಆಸ್ತಿ ಮಾಡಿದ್ದಾರೆ. ಧಾರ್ಮಿಕ ವಿಚಾರದಲ್ಲಿ ಪೇಟಾಧಾರಿಗಳು ಭಯೋತ್ಪಾದಕರು ಎಂದು ಆಕ್ರೋಶ ಹೊರ ಹಾಕಿದರು. ಧರ್ಮಸ್ಥಳದಲ್ಲಿ ಯಾವುದೇ ಪ್ರಕರಣ ನಡೆದರೂ ಅವರ ಮೇಲೆ ಕೇಸ್ ಆಗಲ್ಲ ಎಂದ ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯಾ ಪ್ರಕರಣದ ತನಿಖಾಧಿಕಾರಿ ಯೋಗಿಶ್‌ನನ್ನು ಮೊದಲಿಗೆ ಗಲ್ಲಿಗೆ ಹಾಕಬೇಕು. 

ಸೌಜನ್ಯ ಪ್ರಕರಣದ ಎಲ್ಲ ಸಾಕ್ಷ್ಯಗಳನ್ನು ನಾಶ ಮಾಡಿದ್ದಾನೆ. ಇನ್ನು ವಿದ್ಯಾರ್ಥಿನಿ ಸೌಜನ್ಯಾ ಮೇಲಿನ ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣದ ನ್ಯಾಯಾಂಗ ವ್ಯವಸ್ಥೆಯಡಿ ತನಿಖೆ ಕೈಗೊಂಡು, ನ್ಯಾಯ ಕೊಡಿಸಬೇಕು. ನ್ಯಾಯ ಸಿಗದಿದ್ದರೆ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ, ಶ್ರೀ ಅಣ್ಣಪ್ಪ ಸ್ವಾಮಿಯೇ ನ್ಯಾಯ ಕೊಡಿಸುತ್ತಾರೆ ಈಗಾಗಲೇ ತನಿಖಾಧಿಕಾರಿ ಮಾಡಿದ ತಪ್ಪಿಗೆ ಅವರ 5 ವರ್ಷದ ಮಗು ನೋವನ್ನು ಅನುಭವಿಸುತ್ತಿದೆ.ಹೌದು ತನಿಖಾಧಿಕಾರಿಯ ಮಗುವಿಗೆ ಮಾನಸಿಕ ಸಮಸ್ಯೆ ಉಂಟಾಗಿದೆ. 

ಮುಂದೆ ಉಳಿದವರ ಸರದಿ. ಅಪ್ಪಣ್ಣ ಸ್ವಾಮಿ ಯಾರನ್ನು ಕೂಡ ಬಿಡುವುದಿಲ್ಲ. ಸೌಜನ್ಯಾ ಕೇಸ್‌ನಲ್ಲಿ ಸದ್ಯ ಯಾವುದೇ ಸಾಕ್ಷ್ಯವನ್ನು ಬಿಟ್ಟಿಲ್ಲ. ಎಲ್ಲ ಸಾಕ್ಷ್ಯಗಳನ್ನು ಸಂಪೂರ್ಣವಾಗಿ ನಾಶ ಮಾಡಿದ್ದಾರೆ. ಇವರನ್ನು ಅಣ್ಣಪ್ಪ ಸ್ವಾಮಿ, ಮಂಜುನಾಥ ಸ್ವಾಮಿಯೇ ನೋಡಿಕೊಳ್ತಾನೆ ಎಂದು ಕಿಡಿಕಾರಿದರು. ಸೌಜನ್ಯಾ ಮೃತಪಟ್ಟಾಗ ಅವರ ಮನೆಗೆ ಸಿಎಂ ಡಿವಿ ಸದಾನಂದಗೌಡ, ಗೃಹ ಸಚಿವ ಆರ್ ಅಶೋಕ, ಬಿಎಸ್ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಆಗಮಿಸಿದ್ದರು. ಇವರು ಸೌಜನ್ಯಾ ಮನೆಗೆ ಅಂತ ಆಗಮಿಸಿ ಧರ್ಮಸ್ಥಳದಲ್ಲಿ ಪ್ರಸಾದ ಸ್ವೀಕರಿಸಿ ವಾಪಸ್ ತೆರಳುತ್ತಾರೆ. ಸೌಜನ್ಯಾ ಮನೆಗೆ ಯಾಕೆ ಬರಲಿಲ್ಲ ಅಂತ ಕೇಳಿದ್ರೆ ಭದ್ರತೆ ಇಲ್ಲ ಅಂತ ಹೇಳುತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.