ಟಾಸ್ಕ್ ಆಡುವಾಗ ಏನಾಯಿತು ಗೊತ್ತಾ, ಬಿಗ್ ಬಾಸ್ ತನಿಷಾ ಈಗ ಎ.ಲ್ಲಿದ್ದಾರೆ

 | 
Hd

ಬಿಗ್‌ಬಾಸ್ ಕನ್ನಡ ಸೀಸನ್ 10 ಕಾರ್ಯಕ್ರಮದಲ್ಲಿ ಹನಿ ಹನಿ ಕಹಾನಿ ಟಾಸ್ಕ್‌ ವೇಳೆ ತನಿಷಾ ಕುಪ್ಪಂಡ ಮನೆಯಿಂದ ಹೊರಗಡೆ ಬಂದಿದ್ದಾರೆ. ಹಾಗಾದ್ರೆ ಈಕೆಗೆ ಏನಾಯಿತು? ಮನೆಯಿಂದ ಹೊರಬಂದಿದಕ್ಕೆ ಅಸಲಿ ಕಾರಣ ಏನು? ತಿಳಿದರೆ ಖಂಡಿತ ಬೇಸರ ಪಡುತ್ತೀರಿ. ಬಿಗ್‌ಬಾಸ್‌ ಮನೆಯ ಆಟವೊಂದರಲ್ಲಿ ತನಿಷಾ ವರ್ತೂರು ಸಂತೋಷ್‌ರನ್ನು ತಡೆಯಲು ಪ್ರಯತ್ನಪಡುತ್ತಿದ್ದಾಗ, ಈಕೆ ಬಿದ್ದು ಪೆಟ್ಟಾಗಿ ನೋವಿನಿಂದ ಕಣ್ಣೀರು ಹಾಕಿದ್ದಾರೆ.

ಆಗ ಈಕೆಯನ್ನು ಹೆಚ್ಚಿನ ಚಿಕಿತ್ಸೆಗೆಂದು ಈಕೆಯನ್ನು ಮನೆಯಿಂದ ಹೊರಗಡೆ ಕಳಿಸಲಾಗಿದ್ದು, ಆದಷ್ಟು ಬೇಗ ಬಿಗ್‌ಬಾಸ್‌ ಮನೆಗೆ ಮರಳಲಿದ್ದಾರೆ.ಬಿಗ್ ಬಾಸ್ ಮನೆಯಲ್ಲಿ ಚೆನ್ನಾಗಿ ಆಡುತ್ತಿದ್ದ ತನಿಷಾ ಸದ್ಯ ಮನೆಯಲ್ಲಿ ಇಲ್ಲದಿರೋದು ವೀಕ್ಷಕರಿಗೆ ಬೇಸರ ತಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈಕೆ ಬಗ್ಗೆ ಸಾಕಷ್ಟು ಪೋಸ್ಟ್‌ಗಳು ಕಾಣುತ್ತಿದ್ದು, ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ.

ತನಿಷಾ ಮಣ್ಣಿನ ಮಕ್ಕಳು ಟೀಂನಿಂದ ಆಡುತ್ತಿದ್ದು, ಈ ಆಟದಲ್ಲಿ ಒಂದು ತಂಡದವರು ಸ್ವಿಮ್ಮಿಂಗ್‌ ಪೂಲ್‌ನಲ್ಲಿರುವ ನೀರನ್ನು ತಗೊಂಡು, ದೂರದಲ್ಲಿ ಇಟ್ಟಿರುವ ಕೊಳವೆಯೊಂದರಲ್ಲಿ ನೀರು ಹಾಕಬೇಕಿತ್ತು. ಕೊಳವೆಯೊಳಗೆ ಹೋದ ನೀರು ಗಾಜಿನ ಬಾಕ್ಸ್‌ನಲ್ಲಿ ಶೇಖರ ಆಗುತ್ತಿದ್ದು, ಯಾರು ಹೆಚ್ಚು ನೀರು ಹಾಕುತ್ತಾರೋ ಅವರು ವಿನ್ ಆಗುತ್ತಾರೆ. ಪ್ರತಿ ಬಾರಿ ಆಟದಲ್ಲಿ ಒಳ್ಳೆಯ ಪ್ರದರ್ಶನ ನೀಡುವ ತನಿಷಾ ಈ ಬಾರಿ ಕೂಡ ಚೆನ್ನಾಗಿ ಆಟ ಆಡುತ್ತಿರುವಾಗ ಈ ವೇಳೆ ಈ ತರ ಆಗಿದೆ.


ತನಿಷಾ ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ದನ್ನು ಇದ್ದ ಹಾಗೆ ಹೇಳುವ ಸ್ಪರ್ಧಿಯಾಗಿದ್ದು, ಇವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಆಟವೊಂದರಲ್ಲಿ 20 ಮೆಣಸಿನಕಾಯಿಯನ್ನು ತಿಂದಿದ್ದ ತನಿಷಾ ಅವರು ಎಲ್ಲರ ಮೆಚ್ಚುಗೆ ಪಡೆದಿದ್ದು, ಈಕೆಗೆ ಬೆಂಕಿ ಎಂದು ಹೆಸರಿಡಲಾಗಿದೆ. ಕಾರ್ತಿಕ್, ವರ್ತೂರು ಸಂತೋಷ್ ಜೊತೆ ತನಿಷಾ ಉತ್ತಮ ಸ್ನೇಹವನ್ನು ಕಾಪಾಡಿಕೊಂಡಿದ್ದಾರೆ. ತನಿಷಾ ಆಟದಲ್ಲಿ ಇಲ್ಲದಿರೋದು ನೋಡಿ ವೀಕ್ಷಕರು ಸಿಕ್ಕಾಪಟ್ಟೆ ಬೇಸರ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿವೆ.


ತನಿಷಾ ಈ ಬಾರಿ ನಾಮಿನೇಟ್ ಆಗಿದ್ದು, ಈಕೆಯನ್ನು ಸೇವ್ ಮಾಡಿ ಅಂತ ಕಾರ್ತಿಕ್ ತನಿಷಾ ಪರವಾಗಿ ಪವಿ ಪೂವಪ್ಪ, ಅವಿನಾಶ್ ಶೆಟ್ಟಿ ಬಳಿ ಮನವಿ ಮಾಡಿದ್ದರು. ಅಂದಹಾಗೆ ಅವಿನಾಶ್ ಶೆಟ್ಟಿಗೆ ತನಿಷಾ ಫೇವರಿಟ್ ಸ್ಪರ್ಧಿಯಂತೆ. ತನಿಷಾ ಹಾಗೂ ಸಂಗೀತಾ ಮಧ್ಯೆ ಕೂಡ ಮನಸ್ತಾಪ ಬಂದಿದ್ದಾಗ, ಕಾರ್ತಿಕ್, ಸಂಗೀತಾ ಜಗಳ ಆಡಿಕೊಂಡಾಗೆಲ್ಲ ತನಿಷಾ ನೀವಿಬ್ಬರೂ ಸರಿ ಹೋಗಿ ಎಂದು ಸಲಹೆ ನೀಡುತ್ತಲೇ ಬಂದಿದ್ದಾರೆ. 

ಇದು ಮೆಚ್ಚುವ ಗುಣ ಎನ್ನಬಹುದು. ಹಾಗಾಗಿ ಬಿಗ್ಬಾಸ್ ಮನೆಯ ಬೆಂಕಿ ತನಿಶಾ ಆದಷ್ಟು ಬೇಗನೆ ಗುಣಮುಖರಾಗಲಿ ಎನ್ನುವುದು ಎಲ್ಲರ ಪ್ರಾರ್ಥನೆ ಆಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.