ದರ್ಶನ್ ಪೊಲೀಸ್ ಮೆಟ್ಟಿಲೇರಿದ ತಕ್ಷಣ ಸುದೀಪ್ ಮಾಡಿದ್ದೇನು ಗೊತ್ತಾ, ದರ್ಶನ್ ಗೆ ರಿಲೀಫ್ ಕೊಟ್ಟ ಕಿಚ್ಚ

 | 
ಪ

ಡಿಬಾಸ್‌ ಅವರನ್ನು ಟಾರ್ಗೆಟ್‌ ಮಾಡಲಾಗುತ್ತಿದೆ ಎಂಬ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಅವರ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಬೆನ್ನಲ್ಲೆ, ದಾಸನ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಅಲ್ಲದೆ, ಇನ್ನು ಮುಂದೆ ದರ್ಶನ್‌ ಅವರನ್ನು ಯಾವುದೇ ಠಾಣೆಗಾದರು ಕರೆಯಿಸಿಕೊಂಡರೆ ಕರ್ನಾಟಕವೇ ಅಲ್ಲಿ ಇರುತ್ತ ಅಂತ ಅವರ ಫ್ಯಾನ್ಸ್‌  ಹೇಳುತ್ತಿದ್ದಾರೆ.

ಹೌದು.. ಕಾಟೇರ ಸಿನಿಮಾದ ಸಕ್ಸಸ್‌ ಸಹಿಸಿಕೊಳ್ಳಲಾಗದೆ, ಅವರಿಗೆ ತೊಂದರೆ ನೀಡಲಾಗುತ್ತಿದೆ ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿನ್ನೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಸಹ ಶುರುವಾಗಿದೆ, ಡಿಬಾಸ್‌ ಅವರನ್ನು ಟಾರ್ಗೆಟ್‌ ಮಾಡಿದ್ದು ಯಾರು ಅಂತ ಪ್ರಶ್ನೆ ಮಾಡುತ್ತಿದ್ದಾರೆ.

ನಟ ದರ್ಶನ್ ನಟನೆಯ ಕಾಟೇರ ಸಿನಿಮಾ ಉತ್ತಮ ಪ್ರದರ್ಶನ ಕಂಡಿದೆ. ಇತ್ತೀಚಿಗೆ ಚಿತ್ರತಂಡ ಸಕ್ಸಸ್ ಪಾರ್ಟಿ ಆಯೋಜನೆ ಮಾಡಿತ್ತು. ಬೆಳಗಿನಜಾವದವರೆಗೂ ಪಾರ್ಟಿ ಮಾಡಿದ್ರು ಅಂತಾ ನಟ ದರ್ಶನ್ ಸೇರಿ 8 ಮಂದಿ ನಟರಿಗೆ ನೊಟೀಸ್ ನೀಡಿದ್ದರಿಂದ ಪೊಲೀಸರ ಮುಂದೆ ಹಾಜರಾಗಿದ್ದರು. ನಿನ್ನೆ ಠಾಣೆಗೆ ಬಂದು ವಿಚಾರಣೆ ಎದುರಿಸಿದ್ದರು.

ಜನವರಿ 3ನೇ ರಂದು ರಾತ್ರಿ ಜೆಟ್ಲಾಗ್ ಪಬ್‌ನಲ್ಲಿ ಕಾಟೇರ ಚಿತ್ರತಂಡ ಸಕ್ಸಸ್ ಪಾರ್ಟಿ ಆಯೋಜನೆ ಮಾಡಿತ್ತು. ಈ ಪಾರ್ಟಿಯಲ್ಲಿ ಸಾಕಷ್ಟು ಜನ ನಟ-ನಟಿಯರು ಭಾಗವಹಿಸಿದ್ದರು. ಅಲ್ಲದೆ, ಮುಂಜಾನೆ 3-4ಗಂಟೆವರೆಗೂ ಪಬ್ ನಲ್ಲಿದ್ರು ಅನ್ನೋ ವಿಷ್ಯ ಹೊರಬರುತ್ತಿದ್ದಂತೆ ಸುಬ್ರಮಣ್ಯ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಟ ದರ್ಶನ್ ಸೇರಿ 8 ಜನ ನಟರಿಗೆ ನೊಟೀಸ್ ನೀಡಿದ್ದರು.

ಇನ್ನು  ಈ ಕುರಿತು ವೀಡಿಯೊ ಮಾಡಿ ಪೋಸ್ಟ್ ಮಾಡಿರುವ ಸುದೀಪ್ ನನಗೆ ಸಲೆಬ್ರಿಟಿ ಷೋ ಗೆ ಕರೆಯಲಾಗಿತ್ತು ಆದರೆ ನಾನು ಸಿನೆಮಾ ಶೂಟ್ ಅಲ್ಲಿ ಇದ್ದ ಕಾರಣ ಬರಲಾಗಲಿಲ್ಲ. ಆದಷ್ಟು ಬೇಗನೆ ಕಟೇರಾ ಸಿನೆಮಾ ನೋಡ್ತೇನೆ ಎಂದು ದರ್ಶನ್ ಗೆ ಹಾಗೂ ಅವರ ಸಿನಿಮಾಕ್ಕೆ ಬೆಂಬಲ ಸೂಚಿಸಿದ್ದಾರೆ. ಇದರಿಂದ ಸಂತೋಷಗೊಂಡ ಅಭಿಮಾನಿಗಳು ಇನ್ನೇನು ಕೆಲವೇ ದಿನಗಳಲ್ಲಿ ದಚ್ಚು ಕಿಚ್ಚ ಒಂದಾಗೋದ್ರಲ್ಲಿ ಎರಡು ಮಾತಿಲ್ಲ ಅಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.