ವೀರ ಮರ.ಣ ಹೊಂದಿದ ಒಬ್ಬನೇ ಒಬ್ಬ ಮಗನ ಬಗ್ಗೆ ತಂದೆ ಹೇಳಿದ್ದೇನು ಗೊತ್ತಾ, ಫಿದಾ ಆದ ಕನ್ನಡಿಗರು

 | 
ಪಪಬ

ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಉಗ್ರರ ಜತೆಗಿನ ಕಾಳಗದ ವೇಳೆ ಜೀವ ಕಳೆದುಕೊಂಡ ಕ್ಯಾಪ್ಟನ್ ಪ್ರಾಂಜಲ್ ಅವರ ಮೃತದೇಹವು ಶುಕ್ರವಾರ ಜಿಗಣಿಯ ನಂದನವನ ಬಡಾವಣೆಯಲ್ಲಿರುವ ಅವರ ನಿವಾಸಕ್ಕೆ ತಲುಪುವ ನಿರೀಕ್ಷೆ ಇದೆ. ಪ್ರಾಂಜಲ್ ಅವರ ಮನೆಯಲ್ಲಿ ತೀವ್ರ ಶೋಕ ಮಡುಗಟ್ಟಿದೆ.

ನಾಲ್ಕೈದು ದಿನಗಳ ಹಿಂದೆಯಷ್ಟೆ ಮಗ ಕರೆ ಮಾಡಿದ್ದ. ಆತನ ಕರೆ ಬರುತ್ತದೆ ಎಂದು ಕಾಯುತ್ತಿದ್ದೆವು. ಈಗ ಆತನ ಮೃತದೇಹವನ್ನು ಸ್ವೀಕರಿಸುವಂತಾಗಿದೆ, ಎಂದು ಹುತಾತ್ಮ ಯೋಧ ಕ್ಯಾಪ್ಟನ್ ಪ್ರಾಂಜಲ್‌ ಅವರ ತಂದೆ ವೆಂಕಟೇಶ್‌ ಕಣ್ಣೀರಾದರು.

ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಉಗ್ರಗಾಮಿಗಳು ಹಾಗೂ ಭಾರತೀಯ ಸೇನೆಯ ನಡುವೆ ಬುಧವಾರ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಯೋಧ ಪ್ರಾಂಜಲ್‌ ಅವರ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ಜಿಗಣಿ ಬಳಿಯ ನಂದನವನ ಬಡಾವಣೆಯ ಪ್ರಾಂಜಲ್‌ ಅವರ ಮನೆಯ ಮುಂದೆ ಸೇನೆಯ ಶಿಷ್ಟಾಚಾರದ ಪ್ರಕಾರ ಅಂತಿಮ ಗೌರವ ಸಲ್ಲಿಸಲು ಸಿದ್ಧತೆ ನಡೆದಿದೆ. ಮೃತದೇಹ ಶುಕ್ರವಾರ ಬೆಂಗಳೂರು ತಲುಪುವ ನಿರೀಕ್ಷೆ ಇದೆ.

ಬಾಲ್ಯದಿಂದಲೇ ಪ್ರಾಂಜಲ್‌ ಸೇನೆ ಸೇರಬೇಕು ಎಂದು ಬಯಸಿದ್ದ. ಮೃದು ಸ್ವಭಾವದವನಾಗಿದ್ದ ಆತ ಬಂದೂಕು ಹಿಡಿದುಕೊಂಡು ತಿರುಗಾಡುತ್ತಾನೆ ಎಂಬುದನ್ನು ಊಹಿಸಲು ಕಷ್ಟವಾಗಿತ್ತು. ಸಿಇಟಿಯಲ್ಲಿ ಎಂಜಿನಿಯರಿಂಗ್‌ಗೆ ಆರ್‌ವಿ ಕಾಲೇಜಿನಲ್ಲಿ ಸೀಟು ದೊರೆತರೂ ಸೇನೆ ಸೇರುವ ನಿಟ್ಟಿನಲ್ಲಿ ಆತನ ಪ್ರಯತ್ನ ಮುಂದುವರಿಸಿದ್ದ. ನಾನಾ ಪರೀಕ್ಷೆಗಳನ್ನು ಎದುರಿಸಿ 2014ರಲ್ಲಿ ಸೇನೆ ಸೇರಿದ್ದ. ಬಳಿಕ ಗಯಾದಲ್ಲಿ ಆಫೀಸರ್‌ ಟ್ರೇನಿಂಗ್‌ ಅಕಾಡೆಮಿಗೆ ನಾವೇ ಬಿಟ್ಟು ಬಂದಿದ್ದೆವು,ಎಂದು ವೆಂಕಟೇಶ್‌ ಸ್ಮರಿಸಿದರು.

ಇದೇ ತಿಂಗಳಲ್ಲಿ ಮೈಸೂರಿನಲ್ಲಿ ನಡೆದ ಚಿಕ್ಕಪ್ಪನ ಮಗಳ ಮದುವೆಗೆ ಪ್ರಾಂಜಲ್‌ ಬಂದಿದ್ದ. ಮದುವೆಯಲ್ಲಿ ಭಾಗಿಯಾಗಿ ನಮ್ಮನ್ನೆಲ್ಲ ಅಲ್ಲಿಯೇ ಭೇಟಿ ಮಾಡಿ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದ್ದ. ಮನೆಗೂ ಬಂದಿರಲಿಲ್ಲ, ಎಂದು ಗದ್ಗದಿತರಾದರು.2021ರಲ್ಲಿ ಪ್ರಾಂಜಲ್‌ ಅವರು ಅದಿತಿಯನ್ನು ಮದುವೆಯಾಗಿದ್ದರು. ಅವರು ಪ್ರಸ್ತುತ ಚೆನ್ನೈನ ಐಐಟಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ. ಪ್ರಾಂಜಲ್‌ 63 ರಾಷ್ಟ್ರೀಯ ರೈಫಲ್ಸ್‌ ತಂಡವನ್ನು ಮುನ್ನಡೆಸುತ್ತಿದ್ದ,ಎಂದು ಹುತಾತ್ಮ ಯೋಧನ ತಂದೆ ಮಾಹಿತಿ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.