ಶಾಲೆಯಲ್ಲಿ ಮಕ್ಕಳಿಗೆ ಬುದ್ಧಿ ಪಾಠ ಹೇಳಿ ಕೊಡಬೇಕಾದ ಶಿಕ್ಷಕ ಮಾಡಿದ ಕೆಲಸ ಏನು ಗೊತ್ತಾ
ಆಗೊಂದು ಈಗೊಂದು ಅತ್ಯಾಚಾರ ಪ್ರಕರಣ ಕೇಳಿದ ಬಳಿಕ ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದರೆ, ಇತ್ತ ಉಡುಪಿಯ ಹೆಬ್ರಿ ಸಮೀಪದ ಶಾಲೆಯಲ್ಲಿ ಮುಖ್ಯ ಶಿಕ್ಷಕನೊಬ್ಬ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ನೀಡಿದ್ದಾನೆ. ಅದರಿಂದ ಬೇಸರಗೊಂಡ ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸದೆ ಛೀಮಾರಿ ಹಾಕಿದ್ದಾರೆ.
ಕಳೆದ ಆರು ತಿಂಗಳಿನಿಂದ ಸ್ಪೆಶಲ್ ಕ್ಲಾಸ್ ಮಾಡುವ ನೆಪದಲ್ಲಿ ನಾಲ್ವರು ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ನೀಡುತ್ತಿದ್ದ ಎಂದು ಹೇಳಲಾಗಿದೆ. ಶಿಕ್ಷಕನ ಕಿರುಕುಳದ ಬಗ್ಗೆ ವಿದ್ಯಾರ್ಥಿನಿಯರು ಪೋಷಕರಿಗೆ ತಿಳಿಸಿದ್ದು, ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಶಿಕ್ಷಕನಾಗಿದ್ದರೂ ದೇವಾಲಯದಲ್ಲಿ ಅರ್ಚಕನೂ ಹೌದು.
ಈ ಹಿಂದೆ ಕುಂದಾಪುರ ಸರ್ಕಾರಿ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಈತ ಅಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ, ಬಳಿಕ ಹೆಬ್ರಿಯ ಶಿವಪುರ ಪ್ರೌಢಶಾಲೆಗೆ 2013ರಲ್ಲಿ ವರ್ಗಾವಣೆಯಾಗಿದ್ದ. ವರ್ಗಾವಣೆಯಾಗಿದ್ದರೂ ಶಿಕ್ಷಕ ತನ್ನ ಹಳೇ ಚಾಲಿಯನ್ನು ಮುಂದುವರೆಸಿದ್ದ. ಹೆಬ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ಮುಂದುವರೆಸಿದ್ದಾರೆ.
ಇನ್ನು ಈ ಬಾರಿ ವಿಷಯ ತಿಳಿದ ಶಾಲಾ ಸಮೀತಿ ಹಾಗೂ ಪಾಲಕರು ವಿಚಾರ ತಿಳಿಯದಂತೆ ಹಲವಾರು ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಿ ಪ್ರಾಂಶುಪಾಲರಿಗೆ ಈ ಬಗ್ಗೆ ಇರಬೇಕು. ನಂತರ ಕಾಮುಕ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ಮುಂದೆ ಶಿಕ್ಷಕರ ಮೇಲೂ ಒಂದು ನಿಗಾ ಇಡುತ್ತೇವೆ ಎಂದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.