ಮೊನ್ನೆ ನಡೆದ ಅಪಘಾತಕ್ಕೆ ಕಾರಣ ಏನು ಗೊತ್ತಾ, ರೈಲು ಬರುವ ಮುನ್ನ ನಡೆದ ಘಟನೆ

 | 
Bd

ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 275 ಜನರು ಸಾವನ್ನಪ್ಪಿದ್ದು ಇಡೀ ವಿಶ್ವವನ್ನೇ ದಂಗು ಬಡಿಸಿದೆ. ಇತ್ತ ಜಾರ್ಖಂಡ್ ಅಲ್ಲಿ ರೈಲು ಹಳಿಗಳ ಮೇಲೆ ಟ್ರಾಲಿ ಒಂದನ್ನು ಇಟ್ಟಿರುವ ಶಾಕಿಂಗ್​ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಟೀಕೆಗೆ ಗುರಿಯಾಗಿದೆ.‌ ರೈಲು ಹಳಿಗಳ ಮೇಲೆ ಸುಮಾರು ದೂರ ಕಲ್ಲುಗಳನ್ನು ಇಡಲಾಗಿದೆ.  ನಂತರ ಸ್ವಲ್ಪ ದೂರದಲ್ಲಿ ಟ್ರಾಲಿ ಇಡಲಾಗಿದೆ.‌

ಹೀಗೆ ಕಲ್ಲು ಇಟ್ಟಿದ್ದು ಯಾರು ಎಂಬುದು ತಿಳಿಯದು ಎನ್ನುವುದೇ ಆಘಾತಕಾರಿ ಸಂಗತಿ. ಅಪಾಯಕಾರಿ ಕೃತ್ಯದಲ್ಲಿ ತೊಡಗಿದ್ದ ವೇಳೆಯ ವಿಡಿಯೋ ಚಿತ್ರೀಕರಣ ಆಗಿಲ್ಲ ಎನ್ನುವುದು ಬೇಸರದ ಸಂಗತಿ. ಹಾಗಾಗಿ ಇದನ್ನು ಯಾರು ಮಾಡಿದ್ದಾರೆ ಎನ್ನುವುದು ವಿಡಿಯೋದಲ್ಲಿ ದಾಖಲಾಗಿಲ್ಲ. ಅಲ್ಲದೇ, ಲೋಕೋಪೈಲೆಟ್ ಹಾಗೂ ಚಾಲಕನ ಸಮಯ ಪ್ರಜ್ಞೆಯಿಂದ ನಡೆಯಬಹುದಾಗಿದ್ದ ಮತ್ತೊಂದು ಅಪಘಾತವನ್ನು ತಪ್ಪಿದೆ. 

ಅಲ್ಲದೆ ನಿನ್ನೆಯ ದಿನ ಜಾರ್ಖಂಡ್‌ನ ಬೊಕಾರೊದಲ್ಲಿ ನವದೆಹಲಿ-ಭುವನೇಶ್ವರ ರಾಜಧಾನಿ ಎಕ್ಸ್‌ಪ್ರೆಸ್  ಸಂಚರಿಸುವಾಗ ಸಂತಾಲ್ದಿಹ್ ರೈಲ್ವೆ ಕ್ರಾಸಿಂಗ್ ಬಳಿ ರೈಲ್ವೆ ಗೇಟ್‌ಗೆ ಟ್ರಾಕ್ಟರ್‌ ಡಿಕ್ಕಿ ಹೊಡೆದ ಘಟನೆ ಮಂಗಳವಾರ ನಡೆದಿದೆ.‌ ಜಾರ್ಖಂಡ್ ರಾಜ್ಯದಲ್ಲಿ ಮತ್ತೊಂದು ದೊಡ್ಡ ರೈಲು ಅಪಘಾತವನ್ನು ತಪ್ಪಿಸಲಾಗಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಭೋಜುಡಿಹ್ ರೈಲು ನಿಲ್ದಾಣದ ಬಳಿಯ ಸಂತಾಲ್ಡಿಹ್ ರೈಲ್ವೆ ಕ್ರಾಸಿಂಗ್‌ನಲ್ಲಿ ಈ ಘಟನೆ ಸಂಭವಿಸಿದ್ದು, ಟ್ರ್ಯಾಕ್ಟರ್ ರೈಲ್ವೆ ಹಳಿ ಮತ್ತು ಗೇಟ್ ನಡುವೆ ಸಿಲುಕಿಕೊಂಡಿತು.ರೈಲ್ವೆ ಕ್ರಾಸಿಂಗ್‌ನಲ್ಲಿ ರೈಲ್ವೆ ಗೇಟ್ ಮುಚ್ಚುವಾಗ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ. ಆದರೆ, ರೈಲು ಚಾಲಕ ಬ್ರೇಕ್ ಹಾಕಿದ್ದರಿಂದ ದೊಡ್ಡ ರೈಲು ಅಪಘಾತ ತಪ್ಪಿತು ಎಂದು ಆಗ್ನೇಯ ರೈಲ್ವೆಯ ಆದ್ರಾ ವಿಭಾಗದ ಡಿಆರ್‌ಎಂ ಮನೀಶ್‌ ಕುಮಾರ್‌ ತಿಳಿಸಿದ್ದಾರೆ. 

ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ರೈಲು ಸುಮಾರು 45 ನಿಮಿಷ ತಡವಾಯಿತು ಎಂದು ಕುಮಾರ್ ಹೇಳಿದ್ದಾರೆ. ಟ್ರ್ಯಾಕ್ಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ . ಟ್ರ್ಯಾಕ್ಟರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಗೇಟ್ ಮ್ಯಾನ್ ಅನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.