ಭಾರತದಲ್ಲಿ ಹೆಚ್ಚು ಸಂತೋಷವಾಗಿರುವ ರಾಜ್ಯ ಯಾವುದು ಗೊತ್ತಾ, ಇಲ್ಲಿಯ ಜನರು ದಿನಲೂ ನೆಮ್ಮದಿಯಿಂದ ಬದುಕುತ್ತಾರೆ

 | 
H

ಭಾರತದ ಅತ್ಯಂತ ಸಂತೋಷದ ರಾಜ್ಯ ಯಾವುದು ಗೊತ್ತಾ? ದೆಹಲಿಯೂ ಅಲ್ಲ, ನಮ್ಮ ಕರ್ನಾಟಕವೂ ಅಲ್ಲ. ಇಲ್ಲಿಯ ಜನರು ಸಂತೋಷದಿಂದ ಜೀವನ ನಡೆಸಲು ಅನೇಕ ಕಾರಣಗಳೂ ಸಹ ಇವೆ.ಸಂತೋಷವು ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ. ಆರ್ಥಿಕ ಪರಿಹಾರ, ಕುಟುಂಬ ಸದಸ್ಯರೊಂದಿಗಿ ಹೊಂದಾಣಿಕೆ, ಉದ್ಯೋಗ ಭದ್ರತೆ, ಹೊಸ ಅವಕಾಶಗಳು ನಿಮ್ಮ ಸಂತೋಷವನ್ನು ನಿರ್ಧರಿಸುತ್ತವೆ. 

ಇದರ ಜೊತೆಗೆ ಒಳ್ಳೆಯ ಜೀವನಶೈಲಿ ಸೇರಿದಂತೆ ಅನೇಕ ಅಂಶಗಳು ಮನುಷ್ಯನ ಸಂತೋಷವನ್ನು ನಿರ್ಧರಿಸುತ್ತವೆ. ಕೆಲವೊಮ್ಮೆ ನೆರೆಹೊರೆ ಮತ್ತು ಸಹೋದ್ಯೋಗಿಗಳ ಜೊತೆಗಿನ ಆತ್ಮೀಯತೆಯ ಸಂಬಂಧವೂ ಸಂತೋಷಕ್ಕೆ ಕಾರಣವಾಗುತ್ತದೆ. ಕೆಲವೊಮ್ಮೆ ಹೇಗಿದೆ ಎಂಬುದರ ಮೇಲೆಯೂ ಸಂತೋಷದ ಕಾರಣಗಳು ನಿರ್ಧರಿಸಲಾಗುತ್ತದೆ. ಈ ಅಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಿರುತ್ತವೆ.

ಭಾರತದ ಅತ್ಯಂತ ಸಂತೋಷದ ರಾಜ್ಯ ಯಾವುದು ಗೊತ್ತಾ? ರಾಜಧಾನಿ ದೆಹಲಿಯಂತೂ ಅಲ್ಲ. ಉತ್ತರ ಪ್ರದೇಶ, ಗುಜರಾತ್ ಸಹ ಅಲ್ಲ. ಇನ್ನು ದಕ್ಷಿಣ ಭಾಗದ ಕೇರಳ-ಕರ್ನಾಟಕವೂ ಅಲ್ಲ. ಪೂರ್ವದ ಪಶ್ಚಿಮ ಬಂಗಾಳವೂ ಅಲ್ಲ. ಹಾಗಾದ್ರೆ ಯಾವ ರಾಜ್ಯದ ಜನರು ಸಂತೋಷವಾಗಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ. ಇವರ ಸಂತೋಷದ ಹಿಂದಿನ ರಹಸ್ಯವೇನು ಎಂಬುವುದು ಇತ್ತೀಚೆಗೆ ಸಮೀಕ್ಷೆಯೊಂದರಲ್ಲಿ ವರದಿಯಾಗಿದೆ.

ಭಾರತದ ಅತ್ಯಂತ ಸಂತೋಷದ ರಾಜ್ಯ ಈಶಾನ್ಯದಲ್ಲಿರುವ ಮಿಜೋರಾಂ. ಈ ಸಂತೋಷದ ಹಿಂದೆ ಹಲವಾರು ಕಾರಣಗಳಿವೆ. ಇಲ್ಲಿಯ ಶೇಕಡಾ 100 ರಷ್ಟು ಜನರು ಸಾಕ್ಷರರಾಗಿರುವ ಭಾರತದ ಎರಡನೇ ರಾಜ್ಯ ಮಿಜೋರಾಂ. ಇದೊಂದೇ ಅಲ್ಲ, ಮಿಜೋರಾಂ ಜನರ ಒಟ್ಟಾರೆ ಸಂತೋಷದ ಹಿಂದೆ ಒಂದು ಅಚ್ಚರಿಯ ಕಾರಣವಿದೆ. ಆ ಕಾರಣವೇನು ಗೊತ್ತಾದರೆ ಅಚ್ಚರಿ ಪಡೋದು ಗ್ಯಾರಂಟಿ.

ಇತ್ತೀಚೆಗೆ ಗುರುಗ್ರಾಮ್‌ನ ಮ್ಯಾನೇಜ್‌ಮೆಂಟ್ ಡೆವಲಪ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ ಉಪನ್ಯಾಸಕರು ರಾಜೇಶ್ ಕೆ ಪಿಲಾನಿಯಾ ಎಂಬವರು ಈ ಬಗ್ಗೆ ಸಮೀಕ್ಷೆಯನ್ನು ನಡೆಸಿದ್ದಾರೆ. ಮಿಜೋರಾಂನ ಸಂತೋಷದ ಸೂಚ್ಯಂಕವನ್ನು ಆರು ಅಂಶಗಳನ್ನು ಪರಿಶೀಲಿಸುವ ಮೂಲಕ ನಿರ್ಧರಿಸಲಾಗುತ್ತದೆ. ಕುಟುಂಬ ಸಂಬಂಧಗಳು, ಕೆಲಸದಲ್ಲಿ ಸಂತೋಷ, ಸಾಮಾಜಿಕ ಯೋಗಕ್ಷೇಮ, ಸಮಾಜ ಸೇವೆ, ಧರ್ಮ, ಕರೋನಾ ಮತ್ತು ಮಿಜೋರಾಂನ ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯ ಅಂಶಗಳನ್ನು ಪರಿಗಣಿಸಿ ಸಂತೋಷದ ಸೂಚಂಕ್ಯವನ್ನು ನಿರ್ಧರಿಸಲಾಗಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.