ಕನ್ನಡದ ಖ್ಯಾತ ಸೀರಿಯಲ್ ನಟಿಯರ ಗಂಡಂದಿರು ಯಾರು ಗೊತ್ತಾ, ನಿಜಕ್ಕೂ ನಂಬಲ್ಲ ನೀವು

 | 
ಕ್

ಕಿರುತೆರೆಯಲ್ಲಿ ಅಭಿನಯಿಸುವ ಹಲವು ಜೋಡಿಗಳು ಜನಮನ ಗೆದ್ದಿವೆ. ಆ ಜೋಡಿಗಳನ್ನು ಒಟ್ಟಿಗೆ ನೋಡುವುದೇ ಚೆಂದ. ಇನ್ನು ಕೆಲವು ಜೋಡಿಗಳು ಒಟ್ಟಿಗೆ ನಟಿಸಿದರೆ ಚೆಂದ. ಆದರೆ ಹೀಗೆ ತೆರೆಮೇಲೆ ಕಾಣಿಸಿಕೊಳ್ಳುವ ಜೋಡಿಗಳು ನಿಜ ಜೀವನದಲ್ಲೂ ಒಟ್ಟಿಗೆ ಬದುಕು ಕಟ್ಟಿಕೊಂಡಿದ್ದಾರೆ.ಹಾಗಿರುವಾಗ ಸೀರಿಯಲ್‌ಗಳಲ್ಲಿ ಒಟ್ಟಿಗೆ ಗಂಡ ಹೆಂಡತಿ ಪಾತ್ರದಲ್ಲಿ ನಟಿಸಿ ನಿಜ ಜೀವನದಲ್ಲೂ ಮದುವೆಯಾದ ನಟ-ನಟಿಯರು ನಮ್ಮ ನಿಮ್ಮ ನಡುವೆ ಇದ್ದಾರೆ. ಸುಖವಾಗಿ ಜೇವನ ನಡೆಸುತ್ತಿರುವ ಅಂತಹ ಕೆಲ ಜೋಡಿಗಳನ್ನು ನಾವಿಂದು ಪರಿಚಯಿಸುತ್ತಿದ್ದೀವಿ.

ನಂದಗೋಕುಲ ಧಾರಾವಾಹಿ ಮೂಲಕ ಯಶ್ ಹಾಗೂ ರಾಧಿಕಾ ಪಂಡಿತ್‌ ಕಿರುತೆರೆ ಜರ್ನಿಯನ್ನು ಒಟ್ಟಿಗೆ ಶುರು ಮಾಡಿದರು. ಬಳಿಕ ಇಬ್ಬರೂ ಕೂಡ ಮೊಗ್ಗಿನ ಮನಸು ಚಿತ್ರದ ಮೂಲಕವೇ ಒಟ್ಟಿಗೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡರು. ಸಿನಿಮಾದಲ್ಲಿ ಪ್ರೀತಿಸಿ ಒಂದಾದಂತೆಯೇ ನಿಜ ಜೀವನದಲ್ಲೂ ಈ ಜೋಡಿ ಪ್ರೀತಿಸಿ ಮದುವೆಯಾದರು. ಸದ್ಯ ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ.

ನಟ ಪ್ರಶಾಂತ್ ಹಾಗೂ ನಟಿ ರೂಪಾ ಇಬ್ಬರೂ ಸಿಲ್ಲಿ-ಲಲ್ಲಿ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದವರು. ಹಲವು ವರ್ಷಗಳ ಕಾಲ ಮೂಡಿ ಬಂದ ಈ ಧಾರಾವಾಹಿಯಲ್ಲಿ ರೂಪಾ ಡಾಕ್ಟರ್‌ ತಂಗಿ ಪಾತ್ರದಲ್ಲಿಯೂ ಪ್ರಶಾಂತ್ ತಮ್ಮನ ಪಾತ್ರದಲ್ಲಿ ನಟಿಸಿದ್ದರು. ನಂತರ ಇಬ್ಬರೂ ಪ್ರೀತಿಸಿ ಮದುವೆಯಾದರು. ಕಳೆದ ವರ್ಷವಷ್ಟೇ ಈ ಜೋಡಿ ರಿಯಾಲಿಟಿ ಶೋ ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.

ನಟ ಚಂದನ್ ಹಾಗೂ ನಟಿ ಕವಿತಾ ಜೋಡಿ ಕಿರುತೆರೆಯಲ್ಲಿ ಫೇಮಸ್. 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಇಬ್ಬರೂ ಸತಿ-ಪತಿಗಳ ಪಾತ್ರದಲ್ಲಿ ಮಿಂಚಿದವರು. ಸುಮಾರು ಆರು ವರ್ಷಗಳ ಕಾಲ ಮೂಡಿ ಬಂದ ಈ ಧಾರಾವಾಹಿಯಲ್ಲಿ ಚಂದು-ಚಿನ್ನು ಪಾತ್ರವನ್ನು ಇಬ್ಬರೂ ನಿಭಾಯಿಸಿದ್ದರು. ಬಳಿಕ ಇಬ್ಬರು ಪರಸ್ಪರ ಪ್ರೀತಿಸಿ ಕಳೆದ ವರ್ಷವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ಬಳಿಕ ಇಬ್ಬರೂ ಕುಕ್ಕು ವಿತ್ ಕಿರಿಕ್ಕು ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದರು.

ಇನ್ನು ಚಂದನ್ ಶೆಟ್ಟಿ ಹಾಗೂ ಬಾರ್ಬಿ ಡಾಲ್ ನಿವೇದಿತಾ ಇಬ್ಬರೂ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳಲಿಲ್ಲವಾದರೂ ಬಿಗ್‌ ಬಾಸ್‌ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ರಿಯಾಲಿಟಿ ಶೋಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡು ನಂತರ ಪ್ರೀತಿಸಿ ಮದುವೆಯಾದರು. ಮದುವೆ ಬಳಿಕವೂ ನಿವೇದಿತಾ ಹಲವು ಕಾರ್ಯಕ್ರಮಗಳಲ್ಲಿ ನಿರತರಾಗಿದ್ದಾರೆ.

ನಟಿ ಸುನೇತ್ರಾ ಹಾಗೂ ನಟ ರಮೇಶ್‌ ಪಂಡಿತ್‌ ಕಿರುತರೆಯ ಹಿರಿಯ ಜೋಡಿಗಳು. ಸುನೇತ್ರಾ ಸಿಲ್ಲಿ-ಲಲ್ಲಿ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ರಮೇಶ್‌ ಪಂಡಿತ್‌ ಕೂಡ ಅರುಂಧತಿ ಸೇರಿದಂತೆ ಹಲವು ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದು, ಇಬ್ಬರೂ ಕಿರುತೆರೆ ಮೂಲಕವೇ ಪರಿಚಯವಾಗಿ ಪ್ರೀತಿಸಿ ವಿವಾಹವಾಗಿದ್ದಾರೆ. ಮಿಸ್ಟರ್ ಆಂಡ್ ಮಿಸ್ಸೆಸ್ ಧಾರವಾಹಿ ಖ್ಯಾತಿಯ ರಘು ಮತ್ತು ಅಮೃತಾ , ಗಿಣಿರಾಮ ಧಾರವಾಹಿ ಖ್ಯಾತಿಯ ರಿತ್ವಿಕ್ - ಸುಮನಾ , ಕ್ರಿಕೆಟರ್ ಅಯ್ಯಪ್ಪ - ಅನು ಪೂವಮ್ಮ, ನಟಿ ಆಶಿಕಾ ಪಡುಕೋಣೆ - ಚೇತನ್ ಕೂಡ ಪ್ರೀತಿಸಿ ಮದುವೆಯಾದ ಜೋಡಿಗಳು.


ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.