ನಮ್ರತಾ ಗೌಡ ಯಶಸ್ಸಿಗೆ ಕಾರಣ ಯಾರು ಗೊತ್ತಾ, ಇಲ್ಲಿ ನಡೆಯುತ್ತೆ ಪವಾಡ
Sep 17, 2024, 15:44 IST
|
ಕಳೆದ ಕೆಲ ದಿನಗಳ ಹಿಂದಷ್ಟೇ ನಟಿ, ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಪರ್ಧಿ ನಮ್ರತಾ ಗೌಡ ಅವರು ಗೌಡಗೆರೆಯ ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಎರಡನೇ ಬಾರಿಗೆ ಅವರು ಈ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ. ಈಗಾಗಲೇ ಅನೇಕ ಸೆಲೆಬ್ರಿಟಿಗಳು ಕೂಡ ಈ ಕ್ಷೇತ್ರಕ್ಕೆ ಬಂದು ಹೋಗಿದ್ದಾರೆ. ಅಷ್ಟಕ್ಕೂ ಈ ಕ್ಷೇತ್ರ ಪವಾಡ ಕ್ಷೇತ್ರ ಎಂದೇ ಕರೆಸಿಕೊಳ್ಳುತ್ತದೆ.
ನಮ್ರತಾ ಗೌಡ ಅವರಿಗೆ ದೇವರ ಮೇಲೆ ಭಕ್ತಿ ಇದ್ದು ಸಮಯ ಸಿಕ್ಕಾಗ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುತ್ತಾರೆ. ಇದೀಗ ಎರಡನೇ ಬಾರಿ ನಮ್ರತಾ ಗೌಡ ಅವರು ಗೌಡಗೆರೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ.ನಮ್ರತಾ ಗೌಡ ಅವರು ತಂದೆ-ತಾಯಿ ಜೊತೆಗೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ಕೊಟ್ಟು, ತಾಯಿಯ ದರ್ಶನವನ್ನು ಪಡೆದಿದ್ದಾರೆ.ಈ ತಾಯಿಯಿಂದ ಅನೇಕ ಕುಟುಂಬಗಳು ಅಭಿವೃದ್ಧಿ ಆಗಿವೆ ಎಂದು ಹೇಳಲಾಗಿದೆ.
ನನಗೆ ಚಾಮುಂಡಿ ದೇವರು ಎಂದರೆ ತುಂಬ ಇಷ್ಟ, ಹೀಗಾಗಿಯೇ ನಾನು ಮೈಸೂರಿಗೆ ಹೋಗುತ್ತಿರುತ್ತೇನೆ. ಇಲ್ಲಿ ಪಾಸಿಟಿವ್ ವೈಬ್ಸ್ ಸಿಗತ್ತೆ, ತೆಂಗಿನಕಾಯಿ ಕಟ್ಟಿದ್ದೇನೆ, ಇಲ್ಲಿಗೆ ಬಂದಮೇಲೆ ನನ್ನ ಬದುಕು ಬದಲಾಗಿದೆ. ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಅಂತ ಹಾರೈಸುವೆ. ಏನೇ ಒಳ್ಳೆಯ ಕೆಲಸ ಮಾಡುವ ಮುನ್ನ ದೇವರ ದರ್ಶನವನ್ನು ಪಡೆಯಲಾಗುತ್ತದೆ. ನೀವು ಬನ್ನಿ ಅಂತ ಹೇಳುವೆ. ಇಲ್ಲಿ ಅನ್ನದಾನ ಇರುತ್ತದೆ, ನಾನು ಇಲ್ಲಿಗೆ ಬಂದಾಗ ಅನ್ನದಾನಕ್ಕೆ ನನ್ನ ಬಳಿ ಎಷ್ಟಾಗುವುದೋ ಅಷ್ಟು ಹಣ ನೀಡಿದ್ದೇನೆ ಎಂದು ನಮ್ರತಾ ಗೌಡ ಹೇಳಿದ್ದಾರೆ.
ನಮ್ರತಾ ಗೌಡ ಅವರು ಬಿಗ್ ಬಾಸ್ ಕನ್ನಡ 10 ನಂತರದಲ್ಲಿ ಯಾವ ಪ್ರಾಜೆಕ್ಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿಲ್ಲ. ಈ ನಡುವೆ ಅವರು ಒಂದಷ್ಟು ಸ್ಥಳಗಳ ಕಡೆಗೆ ಪ್ರವಾಸ ಮಾಡುತ್ತ, ವಿವಿಧ ರೀತಿಯ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಡ್ಯಾನ್ಸ್ ವಿಡಿಯೋ ಕೂಡ ಮಾಡುತ್ತಿದ್ದಾರೆ.ನಮ್ರತಾ ಗೌಡ ಅವರನ್ನು ಮತ್ತೆ ತೆರೆ ಮೇಲೆ ನೋಡಲು ವೀಕ್ಷಕರು ಕಾಯುತ್ತಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.