ದರ್ಶನ್ ಹಾಗೂ ವಿಜಯಲಕ್ಷ್ಮಿ ನಡುವೆ ಬಿರುಕು ಕಾಣಲು ಕಾರಣ ಯಾರು ಗೊತ್ತಾ, ಯಾರೀಕೆ ಪವಿತ್ರ ಗೌಡ

 | 
Vhh

ಎಲ್ಲರಿಗೂ ಗೊತ್ತಿರುವ ಹಾಗೆ ಕೆಲವು ದಿನಗಳಿಂದ ದರ್ಶನ್ ಅವರ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆ ನಡೆಯುತ್ತಲೇ ಇದೆ. ಇದರ ನಡುವೆ ದರ್ಶನ್ ಅವರೊಂದಿಗೆ ಪವಿತ್ರ ಗೌಡ ಅವರ ಹೆಸರು ಕೂಡ ಕೇಳಿ ಬರುತ್ತಿದೆ. ಇಂದ್ರಜಿತ್ ಲಂಕೇಶ್ ಅವರು ದರ್ಶನ್ ಅವರ ಬಗ್ಗೆ ಆರೋಪ ಮಾಡುವಾಗ ದರ್ಶನ್ ಅವರು ಹೋಟೆಲ್ ನಲ್ಲಿ ಪಾರ್ಟಿ ಮಾಡುವಾಗ ಅವರ ಜೊತೆ ಪವಿತ್ರ ಗೌಡ ಅವರು ಇದ್ದರು ಎಂದು ಹೇಳುತ್ತಾರೆ.

 ಈ ಹಿಂದೆಯೂ ದರ್ಶನ್ ಅವರ ಹೆಸರಿನೊಂದಿಗೆ ಪವಿತ್ರ ಗೌಡ ಅವರ ಹೆಸರು ಕಾಂಟ್ರವರ್ಸಿಯಾಗಿತ್ತು. ಇದೀಗ ಮತ್ತೆ ಕಾಂಟ್ರವರ್ಸಿ ಆಗಿರುವುದರಿಂದ ಕೆಲವರು ಪವಿತ್ರ ಗೌಡ ಅವರ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಹಾಗಾದರೆ ಪವಿತ್ರ ಗೌಡ ಅವರು ಯಾರು, ಅವರಿಗೂ ದರ್ಶನ್ ಅವರಿಗೂ ಇರುವ ನಂಟೇನು ತಿಳಿದರೆ ನಿಜಕ್ಕೂ ಆಶ್ಚರ್ಯ ಪಡ್ತೀರಿ.

ಪವಿತ್ರ ಗೌಡ ಅವರು ಛತ್ರಿಗಳು ಸಾರ್ ಛತ್ರಿಗಳು ಎಂಬ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ನಂತರ ಸಾಗುವ ದಾರಿ ಎಂಬ ಸಿನಿಮಾದಲ್ಲಿ ನಟಿಸುತ್ತಾರೆ. ಇವರಿಗೆ ಕನ್ನಡ ಚಿತ್ರರಂಗದೊಂದಿಗೆ ತಮಿಳು ಚಿತ್ರರಂಗದಲ್ಲಿಯೂ ಕೂಡ ಅವಕಾಶ ಸಿಗುತ್ತದೆ. ಪವಿತ್ರ ಗೌಡ ಅವರಿಗೆ ನಂತರದ ದಿನಗಳಲ್ಲಿ ನಟ ದರ್ಶನ್ ಅವರ ಪರಿಚಯವಾಗುತ್ತದೆ, ದಿನಕಳೆದಂತೆ ಹೆಚ್ಚು ಆತ್ಮೀಯರಾಗುತ್ತಾರೆ.

 2017ರಲ್ಲಿ ಪವಿತ್ರ ಗೌಡ ಅವರು ಟ್ವಿಟರ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಅವರೊಂದಿಗಿನ ಸಲುಗೆಯಿಂದ ಇರುವ ಫೋಟೋಗಳನ್ನು ಶೇರ್ ಮಾಡುತ್ತಾರೆ. ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆಗೆ ಒಳಗಾಗುತ್ತದೆ. ಈ ಫೋಟೋಗಳನ್ನು ನೋಡಿದ ಕೆಲವು ಅಭಿಮಾನಿಗಳು ಪವಿತ್ರ ಗೌಡ ಅವರಿಗೆ ನೀವು ದರ್ಶನ್ ಅವರ ಹೆಸರನ್ನು ಹಾಳು ಮಾಡುತ್ತಿದ್ದೀರ ಫೋಟೋ ಡಿಲೀಟ್ ಮಾಡಿ ಎಂದು ಹೇಳುತ್ತಾರೆ. ಇನ್ನು ಕೆಲವು ಅಭಿಮಾನಿಗಳು ಜೋಡಿ ನೋಡಲು ಸುಂದರವಾಗಿದೆ ಎಂದು ಹೇಳುತ್ತಾರೆ.

ನಂತರ ಪವಿತ್ರ ಗೌಡ ಅವರು ನಿಮ್ಮ ಕಮೆಂಟ್ ಗಳನ್ನು ನಾನು ನೋಡಿದ್ದೇನೆ ನೀವು ನಕಾರಾತ್ಮಕವಾಗಿಯಾದರೂ ಕಮೆಂಟ್ ಮಾಡಿ ಸಕಾರಾತ್ಮಕವಾಗಿಯಾದರೂ ಕಮೆಂಟ್ ಮಾಡಿ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಪೋಸ್ಟ್ ಮಾಡುತ್ತಾರೆ. ಪವಿತ್ರ ಗೌಡ ಅವರು ದರ್ಶನ್ ಅವರೊಂದಿಗೆ ಮತ್ತು ದರ್ಶನ್ ಅವರ ಮಗನೊಂದಿಗೆ ಇರುವ ಫೋಟೋಸ್ ಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. 2018ರಲ್ಲಿ ಇದ್ದಕ್ಕಿದ್ದಹಾಗೆ ಫೋಟೋಸ್ ಗಳು ಡಿಲೀಟ್ ಆಗುತ್ತವೆ. 

ನಂತರ ಕುರುಕ್ಷೇತ್ರ ಸಿನಿಮಾದ ಶೂಟಿಂಗ್ ನಡೆಯುತ್ತಿರುತ್ತದೆ, ಈ ಸಿನಿಮಾದ ಶೂಟಿಂಗ್ ಅನ್ನು ಗೌಪ್ಯವಾಗಿ ಇಡಲಾಗುತ್ತದೆ. ಅಲ್ಲಿಯ ಫೋಟೋಸ್ ಗಳನ್ನು ಎಲ್ಲಿಯೂ ರಿವೀಲ್ ಮಾಡುವುದಿಲ್ಲ ಆದರೆ ಶೂಟಿಂಗ್ ಸೆಟ್ ಗೆ ಪವಿತ್ರ ಗೌಡ ಅವರು ದರ್ಶನ್ ಅವರನ್ನು ಭೇಟಿ ಮಾಡಲು ಬರುತ್ತಾರೆ ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತದೆ. ಇದರಿಂದ ಕುರುಕ್ಷೇತ್ರ ಸಿನಿಮಾದ ನಿರ್ಮಾಪಕರು ಗರಮ್ ಆಗುತ್ತಾರೆ. 

ನಂತರ ಪವಿತ್ರ ಗೌಡ ಅವರು ದರ್ಶನ್ ಅವರ ಮನೆಗೆ ಬಂದು ದರ್ಶನ್ ಅವರ ತಾಯಿ ಹಾಗೂ ಅಕ್ಕನವರೊಂದಿಗೆ ಆತ್ಮೀಯರಾಗಿ ಕಳೆದ ಫೋಟೋಸ್ ಗಳು ವೈರಲ್ ಆಗುತ್ತದೆ. ಈ ಎಲ್ಲಾ ಫೋಟೋಸ್ ಗಳಿಂದ ಹೆಚ್ಚು ಚರ್ಚೆ ಆಗುತ್ತಿರುತ್ತದೆ ಹಾಗೆ ಪವಿತ್ರ ಗೌಡ ಅವರು ದರ್ಶನ್ ಅವರನ್ನು ಮದುವೆಯಾದರು ಎಂಬ ಚರ್ಚೆಗಳು ಕೂಡ ಕಂಡುಬರುತ್ತದೆ. ಪವಿತ್ರ ಗೌಡ ಅವರು ದರ್ಶನ್ ಅವರ ಅಕ್ಕನ ಬರ್ತಡೆ ಸೆಲೆಬ್ರೇಶನ್ ನಲ್ಲಿ ಕಾಣಿಸಿಕೊಳ್ಳುತ್ತಾರೆ ಅದು ಕೂಡ ಇನ್ನಷ್ಟು ಚರ್ಚೆಯಾಗುತ್ತದೆ. ಈ ಬಗ್ಗೆ ದರ್ಶನ್ ಅವರು ಯಾವುದೇ ರೀತಿಯ ಸ್ಪಷ್ಟತೆಯನ್ನು ಕೊಟ್ಟಿಲ್ಲ ಆದರೆ ಪವಿತ್ರ ಗೌಡ ಅವರು ದರ್ಶನ್ ಅವರು ನನಗೆ ಬೆಸ್ಟ್ ಫ್ರೆಂಡ್ ಎಂದು ಹೇಳುತ್ತಾರೆ. 

ಪವಿತ್ರ ಗೌಡ ಅವರಿಗೆ ಮದುವೆಯಾಗಿದೆ ಆದರೆ ಅವರ ಪತಿ ಯಾರು ಅವರೊಂದಿಗೆ ಇದ್ದಾರಾ ಎನ್ನುವ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಆದರೆ ಪವಿತ್ರ ಗೌಡ ಅವರಿಗೆ ಒಬ್ಬಳು ಮಗಳಿದ್ದಾಳೆ. ಕೆಲ ದಿನಗಳ ಹಿಂದಷ್ಟೇ ಅವಳ ಜೊತೆ ನಟ ದರ್ಶನ್ ಹುಟ್ಟು ಹಬ್ಬ ಆಚರಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು.ಒಟ್ಟಿನಲ್ಲಿ ದರ್ಶನ್ ಅವರ ಬಗ್ಗೆ ಕಾಂಟ್ರವರ್ಸಿಯಾಗುತ್ತಲೇ ಇದೆ, ಇದು ಮತ್ತೆ ಯಾವ ರೂಪ ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.