ಭಾರತೀಯ ಚಿತ್ರರಂಗದಲ್ಲಿ ಇವತ್ತಿಗೂ ಕೋಟಿಯ ಸರದಾರ ಯಾರು ಗೊತ್ತಾ
ಭಾರತೀಯ ಚಲನಚಿತ್ರೋದ್ಯಮವು ಹಲವಾರು ಪ್ರತಿಭಾವಂತ ನಟರನ್ನು ಹೊಂದಿದೆ, ಅವರು ರಾಷ್ಟ್ರದಾದ್ಯಂತ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಅಪ್ರತಿಮ ಪ್ರದರ್ಶನದಿಂದ ಅಪ್ರತಿಮ ವರ್ಚಸ್ಸಿನವರೆಗೆ, ಈ ತಾರೆಯರು ಸಿನಿಮಾ ಇತಿಹಾಸದಲ್ಲಿ ತಮ್ಮ ಹೆಸರನ್ನು ಕೆತ್ತಿದ್ದಾರೆ.
ಅವರು ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿದ್ದಾರೆ ಮಾತ್ರವಲ್ಲದೆ ಅಪಾರ ಸಂಪತ್ತನ್ನು ಕೂಡ ಗಳಿಸಿದ್ದಾರೆ.
ಇನ್ನು ಭಾರತದ ಶ್ರೀಮಂತ ನಟರ ಪೈಕಿ ಶಾರುಖ್ ಖಾನ್ಗೆ ಮೊದಲ ಸ್ಥಾನ ಇದೆ. ಪ್ರತಿ ಚಿತ್ರಕ್ಕೆ ಇವರು ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಐಪಿಎಲ್ನಲ್ಲಿ ತಮ್ಮದೇ ತಂಡ ಹೊಂದಿದ್ದಾರೆ.
ನಿರ್ಮಾಣ ಸಂಸ್ಥೆ ಇದೆ. ಹಲವು ಬ್ರ್ಯಾಂಡ್ಗಳಿಗೆ ಪ್ರಚಾರ ಮಾಡುತ್ತಾರೆ. ಇವರ ಒಟ್ಟೂ ಆಸ್ತಿ 6300 ಕೋಟಿ ರೂಪಾಯಿ. ಬಾಲಿವುಡ್ನ ಟ್ಯಾಲೆಂಟೆಡ್ ಹೀರೋಗಳ ಸಾಲಿನಲ್ಲಿ ಹೃತಿಕ್ ರೋಷನ್ ಇದ್ದಾರೆ. ಇವರು ಪ್ರತಿ ಸಿನಿಮಾಗೆ 50-60 ಕೋಟಿ ರೂಪಾಯಿ ಪಡೆದುಕೊಳ್ಳುತ್ತಾರೆ. ಇವರು ಬ್ರ್ಯಾಂಡ್ ಪ್ರಚಾರಕ್ಕೆ 10 ಕೋಟಿ ರೂಪಾಯಿ ಪಡೆಯುತ್ತಾರೆ.
ಇವರು ತಮ್ಮದೇ ಬಟ್ಟೆ-ಶ್ಯೂ ಬ್ರ್ಯಾಂಡ್ ಹೊಂದಿದ್ದಾರೆ. ಇವರ ಆಸ್ತಿ 3100 ಕೋಟಿ ರೂಪಾಯಿ. ಬಾಲಿವುಡ್ನ ಹಿರಿಯ ನಟ ಅಮಿತಾಭ್ ಬಚ್ಚನ್ ಚಿತ್ರರಂಗದಲ್ಲಿ ಹಲವು ದಶಕಗಳಿಂದ ಆ್ಯಕ್ಟೀವ್ ಆಗಿದ್ದಾರೆ. ಇವರ ಅನುಭವ ಅಪಾರ. ಸಿನಿಮಾ ಮಾತ್ರವಲ್ಲದೆ, ಕಿರುತೆರೆ ಶೋ ‘ಕೌನ್ ಬನೇಗಾ ಕರೋಡ್ಪತಿ’ ನಡೆಸಿಕೊಡುತ್ತಾರೆ. ಇವರು ಪ್ರತಿ ಚಿತ್ರಕ್ಕೆ 10 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇವರ ಆಸ್ತಿ 3000 ಕೋಟಿ ರೂಪಾಯಿ.
ಪ್ರಭಾಸ್ ಜೊತೆ ಇವರು ನಟಿಸುತ್ತಿರುವ ‘ಕಲ್ಕಿ 2898 ಎಡಿ’ ಮೊದಲ ಗ್ಲಿಂಪ್ಸ್ ಇತ್ತೀಚೆಗೆ ರಿಲೀಸ್ ಆಗಿ ಗಮನ ಸೆಳೆಯಿತು. ಬಾಲಿವುಡ್ನಲ್ಲಿ ಸಲ್ಮಾನ್ ಖಾನ್ ಅವರದ್ದು ದೊಡ್ಡ ಹೆಸರು. ಇವರು ತಮ್ಮದೇ ಬಟ್ಟೆ ಬ್ರ್ಯಾಂಡ್ ಹಾಗೂ ಚಾರಿಟಿ ಹೊಂದಿದ್ದಾರೆ. ವಯಸ್ಸು 57 ದಾಟಿದರೂ ಮದುವೆ ಆಗುವ ಆಲೋಚನೆ ಮಾಡಿಲ್ಲ. ಇವರ ಆಸ್ತಿ 2850 ಕೋಟಿ ರೂಪಾಯಿ ಎನ್ನಲಾಗಿದೆ.
ಇವರು ಸಾಕಷ್ಟು ಕಡೆಗಳಲ್ಲಿ ಪ್ರಾಪರ್ಟಿ ಹೊಂದಿದ್ದಾರೆ.
ಬಾಲಿವುಡ್ನಲ್ಲಿ ಅತಿ ವೇಗವಾಗಿ ಸಿನಿಮಾ ಕೆಲಸ ಮುಗಿಸುತ್ತಾರೆ ಅಕ್ಷಯ್ ಕುಮಾರ್. ಈ ಕಾರಣಕ್ಕೆ ವರ್ಷಕ್ಕೆ ಅವರ ನಟನೆಯ ಮೂರು-ನಾಲ್ಕು ಚಿತ್ರಗಳು ರಿಲೀಸ್ ಆಗುತ್ತವೆ. ಇವರ ಆಸ್ತಿ 2,660 ಕೋಟಿ ರೂಪಾಯಿ ಇದೆ ಎನ್ನಲಾಗಿದೆ. ಅತಿ ಹೆಚ್ಚು ಟ್ಯಾಕ್ಸ್ ಕಟ್ಟುವ ಭಾರತದ ಹೀರೋ ಎನ್ನುವ ಹೆಗ್ಗಳಿಕೆಗೆ ಇವರಿಗೆ ಇದೆ.
ನಟ ಆಮಿರ್ ಖಾನ್ ಅವರು ನಟನೆಯಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಹಾಗಂತ ಅವರಿಗೆ ಬೇಡಿಕೆ ಕಡಿಮೆ ಆಗಿಲ್ಲ. ಸಾಕಷ್ಟು ಉದ್ಯಮಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಇವರ ಆಸ್ತಿ 1862 ಕೋಟಿ ರೂಪಾಯಿ. ದಕ್ಷಿಣದ ಖ್ಯಾತ ನಟ ರಾಮ್ ಚರಣ್ ಅವರು ‘ಆರ್ಆರ್ಆರ್’ ಚಿತ್ರದ ಮೂಲಕ ಗೆದ್ದು ಬೀಗಿದ್ದಾರೆ. ಈ ಚಿತ್ರದ ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದಿದೆ. ಈ ಸ್ಟಾರ್ ನಟನಿಗೆ ಸಾಕಷ್ಟು ಬೇಡಿಕೆ ಇದೆ. ಇವರ ಆಸ್ತಿ 1370 ಕೋಟಿ ರೂಪಾಯಿ.
ಇವರು ಖಾಸಗಿ ಜೆಟ್ ಕೂಡ ಹೊಂದಿದ್ದಾರೆ.
ನಟ ಹಾಗೂ ನಿರೂಪಕ ಅಕ್ಕಿನೇನಿ ನಾಗಾರ್ಜುನ ಅವರಿಗೆ ಸಖತ್ ಬೇಡಿಕೆ ಇದೆ. ಸ್ವಂತ ಜೆಟ್ ಹೊಂದಿರುವ ಇವರ ಆಸ್ತಿ 950 ಕೋಟಿ ರೂಪಾಯಿ. ಇವರು ಪ್ರತಿ ಸಿನಿಮಾಗೆ 10 ಕೋಟಿ ರೂಪಾಯಿ ಪಡೆಯುತ್ತಾರೆ. ಬಿಗ್ ಬಾಸ್ ನಿರೂಪಣೆಗೆ 15 ಕೋಟಿ ರೂ ಪಡೆಯುತ್ತಾರೆ ಎನ್ನಲಾಗಿದೆ. ಕಾಲಿವುಡ್ ಸ್ಟಾರ್ ನಟ ರಜನಿಕಾಂತ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ಅವರ ನಟನೆಯ ‘ಜೈಲರ್’ ಸಿನಿಮಾ ಸೂಪರ್ ಹಿಟ್ ಆಗಿದೆ.
ಈ ಚಿತ್ರದಿಂದ ಅವರಿಗೆ ಗೆಲುವು ಸಿಕ್ಕಿದೆ. ಇವರ ಆಸ್ತಿ 450 ಕೋಟಿ ರೂಪಾಯಿಗೂ ಮೀರಿದೆ. ಅಲ್ಲು ಅರ್ಜುನ್ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಪಡೆದುಕೊಂಡಿದ್ದಾರೆ. ಇವರ ಆಸ್ತಿ 380 ಕೋಟಿ ರೂಪಾಯಿ ಇದೆ. ಇವರು ತಮ್ಮದೇ ಮಲ್ಟಿಪ್ಲೆಕ್ಸ್ ಹೊಂದಿದ್ದಾರೆ. ಸದ್ಯ ‘ಪುಷ್ಪ 2’ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.