ಕಾರ್ತಿಕ್ ಅಮ್ಮನಿಗೆ ಯಾರ ಇಷ್ಟ ಗೊತ್ತಾ, ಸೊಸೆ ಬಗ್ಗೆ ಬಾಯಿಬಿಟ್ಟ ತಾಯಿ

 | 
ಕಕತ

ಬಿಗ್‌ಬಾಸ್‌ಕನ್ನಡ 10ನೇ ಸೀಸನ್‌ನಲ್ಲಿ ಕಾರ್ತಿಕ್ ಮಹೇಶ್‌ ಅವರು ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಮೊದಲಿನಿಂದಲೂ ಆತ್ಮವಿಶ್ವಾಸದಿಂದಲೇ ಇದ್ದ ಕಾರ್ತಿಕ್ ಅವರು ಕೊನೆಯ ಕ್ಷಣದಲ್ಲಿ ಟೆನ್ಷನ್‌ಗೆ ಒಳಗಾದಂತೆ ಕಾಣಿಸುತ್ತಿದ್ದರು. ಇಬ್ಬರ ಕೈಯಲ್ಲಿ ಕಿಚ್ಚ ಕಾರ್ತಿಕ್ ಅವರ ಕೈ ಎತ್ತಿ ಹಿಡಿದರು. ಅದು ಕಾರ್ತಿಕ್ ಬದುಕಿನಲ್ಲಿಯಷ್ಟೇ ಅಲ್ಲ, ಅವರ ಅಭಿಮಾನಿಗಳೆಲ್ಲರ ಮನಸಲ್ಲಿಯೂ ಅತ್ಯಂಗ ಮಹತ್ವದ ಅಮೂಲ್ಯವಾದ ಗಳಿಗೆ. 

ಅತ್ಯಂತ ಯಶಸ್ಸು ಕಂಡ ಹತ್ತನೇ ಐತಿಹಾಸಿಕ ಸೀಸನ್‌ನಲ್ಲಿ ಕಾರ್ತಿಕ್ ಮಹೇಶ್ ಅವರು ಗೆಲುವನ್ನು ಸಾಧಿಸಿದ್ದಾರೆ. ಐವತ್ತು ಲಕ್ಷ ರೂಪಾಯಿಗಳು, ಜೊತೆಗೆ ಒಂದು ಮಾರುತಿ ಬ್ರೀಜಾ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಕುರಿತಾಗಿ ಮಾತನಾಡಿದ ಕಾರ್ತಿಕ ಅಮ್ಮ ತಮ್ಮ ಮಗನ ಗೆಲುವನ್ನು ನೋಡಿ ಕಣ್ಣೀರು ಬಂತು ಅದೂ ಆನಂದಕ್ಕೆ ಅಂದಿದ್ದಾರೆ.

ಕಿರಿಕ್ ಕೀರ್ತಿ ಅವರು ತೆಗೆದುಕೊಂಡ ಸಂದರ್ಶನ ಒಂದರಲ್ಲಿ  ಕಾರ್ತಿಕ ಬದುಕಿನಲ್ಲಿ ಸಾಕಷ್ಟು ಕಷ್ಟ ಪಟ್ಟಿದ್ದಾನೆ. ಅಪ್ಪನನ್ನು ಕಳೆದುಕೊಂಡು ಮನೆಯ ಜವಾಬ್ದಾರಿ ಹೊತ್ತಿದ್ದಾರೆ. ಅವನಿಗೆ ಒಳ್ಳೆಯ ಹೆಸರು ಮಾಡಬೇಕು. ಒಂದಿಷ್ಟು ಸಿನೆಮಾ ನಟಿಸಬೇಕು ತನ್ನದೆ ಸ್ವಂತ ಮನೆಯನ್ನು ಖರಿಧಿಸಬೇಕು ಎಂಬ ಆಸೆ ಇದೆ. ಅದೆಲ್ಲ ಕೈಗೂಡುವ ಸಮಯ ಬಂದಿದೆ ಎಂದಿದ್ದಾರೆ.

ಇನ್ನು ಕೀರ್ತಿ ಅವರು ಸಂಗೀತಾ ಇಷ್ಟವೋ ನಮೃತಾ ಇಷ್ಟವೋ ಎಂದು ಕೇಳಿದ್ದಕ್ಕೆ ಸ್ನೇಹಿತೆಯರಾಗಿರಲು ಅವರಿಬ್ಬರೂ ಇಷ್ಟ ಅದರ ಹೊರತಾಗಿ ಇನ್ನೆನ್ನು ಇಲ್ಲ. ಬಿಗ್ಬಾಸ್ ಮನೆಯಲ್ಲಿ ಎಲ್ಲರೊಂದಿಗೆ ಚೆನ್ನಾಗಿ ಇರಬೇಕು. ಹಾಗಾಗಿ ಚೆನ್ನಾಗಿ ಇದ್ದ ಅಷ್ಟೇ. ಅದುಬಿಟ್ಟು ಮದುವೆಗೆಲ್ಲ ಯಾರು ಬೇಡ ಎಂದು ನಗುತ್ತಾ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.