ಮೆಟ್ರೋದಲ್ಲಿ ಪ್ರಯಾಣಿಸಿದ ನಟ, ಫ್ಯಾನ್ಸ್ ಗೂ ಗುರುತಿಸಲಾಗದ ಈ ಸ್ಟಾರ್ ನಟ ಯಾರು ಗೊತ್ತಾ

 | 
ವ

ಸದ್ಯಕ್ಕೆ ನಮ್ಮ ಬೆಂಗಳೂರಿನಲ್ಲಿರುವ ಟ್ರಾಫಿಕ್‌ಗೆ ಎಂತಹವರೂ ಸಹ ಸುಸ್ತಾಗುತ್ತಾರೆ. ಅದರಲ್ಲೂ ಪ್ರತಿ ದಿನ ಕೆಲಸಕ್ಕೆ ಹೋಗುವ ಮತ್ತು ಮುಗಿಸಿ ಬರುವ ಸಮಯಗಳಲ್ಲಂತೂ ಗಂಟೆ ಗಟ್ಟಲೆ ಟ್ರಾಫಿಕ್‌ನಲ್ಲಿ ಸುಸ್ತಾಗಿ ನಿಂತಿರಬೇಕಾಗುತ್ತದೆ. ನಮ್ಮ ದೇಶದಲ್ಲಿನ ಬಹುತೇಕ ಮಹಾನಗರಗಳ ಕಥೆಯಂತೂ ಇದಕ್ಕಿಂತ ಹೊರತಲ್ಲ ಎಂದರೆ ಅದು ಅತಿಶಯೋಕ್ತಿಯಾಗಲಾರದು.

ಹೌದು, ಬೆಂಗಳೂರು ಮಾತ್ರವಲ್ಲ ದೇಶದ ಬಹಳಷ್ಟು ನಗರಗಳ ಪರಿಸ್ಥಿತಿ ಇದೇ ಆಗಿದೆ. ಭಾರತದ ಮಹಾ ನಗರಗಳಲ್ಲಿ ಒಂದಾದ ಮುಂಬೈ ಸಹ ಇದಕ್ಕೆ ಹೊರತಾಗಿಲ್ಲ. ಮುಂಬೈನ ಟ್ರಾಫಿಕ್‌ಗೆ ಬಳಲಿ ಬೆಂಡಾದ ಪ್ರಸಿದ್ದ ನಾಯಕ ನಟನೊಬ್ಬ ತನ್ನ ಐಷಾರಾಮಿ ಕಾರುಗಳನ್ನು ತೊರೆದು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾದ ಮೆಟ್ರೋದಲ್ಲಿ ಚಲಿಸಿರುವ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗುತ್ತಿದೆ.

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ತನ್ನ ಐಷಾರಾಮಿ ಕಾರುಗಳನ್ನು ತೊರೆದು ಮುಂಬೈ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಸದ್ಯಕ್ಕೆ ಬಾಲಿವುಡ್‌ನಲ್ಲಿ ಸಾಕಷ್ಟು ಹೆಸರು ಮಾಡಿರುವ ಅಕ್ಷಯ್‌ ಕುಮಾರ್‌ ಬಳಿ ದುಬಾರಿ ಕಾರು ಮತ್ತು ಬೈಕ್‌ ಕಲೆಕ್ಷನ್‌ಗಳಿವೆ. ಆದರೆ ನಾನಾ, ನೀನಾ ಎಂದು ಸವಾಲು ಹಾಕಿದಂತಿರುವ ಮುಂಬೈ ಟ್ರಾಫಿಕ್‌ ಇಂತಹ ಪ್ರಸಿದ್ದ ನಟ ತನ್ನ ಸಂಚಾರಕ್ಕಾಗಿ ಮೆಟ್ರೋವನ್ನು ಅವಲಂಬಿಸುವಂತೆ ಮಾಡಿದೆ ಎಂದರೆ ನಂಬಲೇ ಬೇಕು.

ಮೆಟ್ರೋದಲ್ಲಿ ಅಕ್ಷಯ್‌ ಕುಮಾರ್‌ ಪ್ರಯಾಣ ಮಾಡುವಾಗ ಅಲ್ಲಿದ್ದ ಇತರ ಪ್ರಯಾಣಿಕರು ಈತನ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಪೋಸ್ಟ್‌ಗೆ ಭಾರೀ ಪ್ರಮಾಣದಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ನೆಟ್ಟಿಗರು ಮುಂಬೈ ಟ್ರಾಫಿಕ್‌ನ ಪರಿಸ್ಥಿತಿಯನ್ನು ಕಾಮೆಂಟ್‌ ಮೂಲಕ ವಿವರಿಸಿದ್ದಾರೆ. ಮಾಸ್ಕ್‌ ಮತ್ತು ಟೋಪಿ ಧರಿಸಿ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ಅಕ್ಷಯ್‌ ಕುಮಾರ್‌ ಎಂದು ಗುರುತಿಸುವಲ್ಲಿ ಸಾರ್ವಜನಿಕರು ಸಫಲರಾಗಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.