ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರು ಗೊತ್ತಾ, ಬ್ರಹ್ಮಾಂಡ ಗುರೂಜಿಯಿಂದ ಮೆಚ್ಚುಗೆಯ ಭವಿಷ್ಯ

 | 
ಕ್

ಈ ಬಾರಿ ಕನ್ನಡ ಬಿಗ್ ಬಾಸ್ ಮನೆಗೆ ಬಂದವರು ತಾವು ದೊಡ್ಮನೆಯಲ್ಲಿ ಇದ್ದಷ್ಟು ದಿನ ಚೆನ್ನಾಗಿ ಇರಬೇಕು, ಒಂದಿಷ್ಟು ಅನುಭವ ಪಡೆದು ಎಕ್ಸ್ ಪ್ಲೋರ್ ಮಾಡಬೇಕು ಅಂತಲೇ ಬಂದವರಲ್ಲ, ಆಟ ಆಡಬೇಕು, ಟ್ರೋಫಿ ಗೆಲ್ಲಬೇಕು ಅಂತಲೇ ಪಣ ತೊಟ್ಟವರು. ಹೀಗಾಗಿ ನಿತ್ಯವೂ ಜಗಳ, ಸ್ಪರ್ಧೆ, ಕಿಚ್ಚು ಎಲ್ಲವೂ ಜೋರಾಗಿದೆ. ಇವೆಲ್ಲವುಗಳ ಮಧ್ಯೆ ಈ ಬಾರಿ ಯಾರು ಗೆಲ್ಲುತ್ತಾರೆ ಎಂಬ ಪ್ರಶ್ನೆಗೆ ಸರಿಯಾದ ಉತ್ತರವೇ ಸಿಗದಂತಾಗಿದೆ.

 ಒಬ್ಬರಿಗಿಂತ ಒಬ್ಬರು ಮೇಲುಗೈ ಸಾಧಿಸುವ ರೀತಿಯಲ್ಲಿ ಆಟ ಆಡ್ತಿದ್ದಾರೆ ಅಂದ್ರೆ ಯಾರು ಗೆಲ್ಲಬಹುದು? ಈ ಪ್ರಶ್ನೆಗೆ ಬ್ರಹ್ಮಾಂಡ ಗುರೂಜಿ ನರೇಂದ್ರ ಶರ್ಮಾ ಅವರು ಉತ್ತರ ಕೊಟ್ಟಿದ್ದಾರೆ. ಅವರ ಪ್ರಕಾರ ಯಾರು ಗೆಲ್ಲುತ್ತಾರೆ ಎಂದು ನೋಡುವುದಾದರೆ ನಿಜಕ್ಕೂ ಆಶ್ಚರ್ಯ ಮೂಡುವಂತಹ ಮಾತನ್ನು ಅವರು ಹೇಳಿದ್ದಾರೆ.

ಬಿಗ್ ಬಾಸ್ ಶೋನಲ್ಲಿ ಈ ಬಾರಿ ಯಾರು ಫಿನಾಲೆಗೆ ಹೋಗಬಹುದು ಎಂಬ ಪ್ರಶ್ನೆಗೆ ಬ್ರಹ್ಮಾಂಡ ಗುರೂಜಿ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಉತ್ತರ ನೀಡಿದ್ದಾರೆ. ಸದ್ಯ ಮೈಕಲ್ ಅಜಯ್, ಕಾರ್ತಿಕ್ ಮಹೇಶ್, ಸಂಗೀತಾ ಶೃಂಗೇರಿ, ವಿನಯ್ ಗೌಡ, ತುಕಾಲಿ ಸ್ಟಾರ್ ಸಂತು, ವರ್ತೂರು ಸಂತೋಷ್, ತನಿಷಾ ಕುಪ್ಪಂಡ, ಅವಿನಾಶ್ ಶೆಟ್ಟಿ, ಪವಿ ಪೂವಪ್ಪ, ಸಿರಿ, ನಮ್ರತಾ ಗೌಡ, ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಮನೆಯಲ್ಲಿದ್ದಾರೆ. 

ಅವರಲ್ಲಿ ಈ ವಾರ ಒಬ್ಬರು ಹೊರಗಡೆ ಹೋಗ್ತಾರೆ. ನಮ್ರತಾ, ಡ್ರೋನ್ ಪ್ರತಾಪ್, ವರ್ತೂರು ಸಂತೋಷ್, ಕಾರ್ತಿಕ್, ವಿನಯ್, ಸಂಗೀತಾ, ತನಿಷಾ ಅವರು ಫಿನಾಲೆ ಸ್ಪರ್ಧಿಗಳ ತರ ಕಾಣ್ತಿದ್ದಾರೆ. ಹಾಗಾದರೆ ಇವರಲ್ಲಿ ಫಿನಾಲೆ ತಲುಪುವವರು ಯಾರೆಂದು ನೋಡುವುದಾದರೆ.ಈ ಬಾರಿ ಎಲ್ಲರೂ ಗೆಲ್ಲೋಕೆ ಬಂದವರು. ಕಂಟೆಂಟ್ ಬೇಕು ಅಂತಲೇ ಎಲ್ಲರೂ ಜಗಳ ಆಡ್ತಿದ್ದಾರೆ. ಈ ಬಾರಿ ಮೂವರು ಫಿನಾಲೆಯಲ್ಲಿ ಇರೋರು ಪುರುಷರು. ಸಂಗೀತಾ ತುಂಬ ಚಂಚಲ ಮನಸ್ಥಿತಿಯುಳ್ಳವರು, ಅವಳು ಈ ಬಾರಿ ಫಿನಾಲೆಗೆ ಬರಲಿ ಅಂತ ಕೆಲವರು ಅಂದುಕೊಳ್ತಿದ್ದಾರೆ. 

ಡ್ರೋನ್ ಪ್ರತಾಪ್ ಗೆಲ್ಲಬೇಕು, ಗೆಲ್ತಾರೆ ಎನ್ನೋದು ಸುಳ್ಳು. ಅವನು ಬಿಗ್‌ ಬಾಸ್ ಮನೆಯಲ್ಲಿಯೂ ನಾಟಕ ಮಾಡ್ತಿದ್ದಾನೆ, ಎಲ್ಲ ಕಡೆಯೂ ನಟಿಸುತ್ತಿದ್ದಾನೆ ಎಂದಿದ್ದಾರೆ ಬ್ರಹ್ಮಾಂಡ ಗುರೂಜಿ.ವಿನಯ್ ಗೌಡ ಒಳ್ಳೆಯ ಮನುಷ್ಯ. ಕಾರ್ತಿಕ್ ಹಿತ್ತಾಳೆ ಕಿವಿ, ಅವನು ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ. ವರ್ತೂರು ಸಂತೋಷ್ ಪ್ರಾಣಿ ಪ್ರಿಯ. ಸಿರಿ, ತುಕಾಲಿ ಸ್ಟಾರ್ ಅವರು ತುಂಬ ಸಿಂಪಲ್ ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ.

ಬ್ರಹ್ಮಾಂಡ ಗುರೂಜಿ ಪ್ರಕಾರ ವಿನಯ್ ಗೌಡ, ಡ್ರೋನ್ ಪ್ರತಾಪ್, ಕಾರ್ತಿಕ್ ಅವರು ಫಿನಾಲೆಯಲ್ಲಿ ಇರಬಹುದಂತೆ. ಆದರೆ ಗುರೂಜಿ ಅವರು ನಿಖರವಾಗಿ ಯಾರು ಗೆಲ್ತಾರೆ ಅಂತ ಹೇಳಿಲ್ಲ. ಇವರು ಕೂಡ ಎರಡು ದಿನಗಳ ಕಾಲ ಈ ಸೀಸನ್‌ಗೆ ದೊಡ್ಮನೆಗೆ ಅತಿಥಿಯಾಗಿ ಹೋಗಿ ಬಂದಿದ್ದರು. ಆದರೆ ಅವರ ಮಾತುಗಳಲ್ಲಿ ವಿನಯ್ ಗೌಡ ಇಲ್ಲವೇ ಕಾರ್ತಿಕ್ ಅವರು ಗೆಲ್ಲುತ್ತಾರೆ ಎನ್ನುವಂತಿತ್ತು.