ಮೋಕ್ಷಿತಾ ಪೈ ಯಾರ ಸಂಬಂಧಿ ಗೊತ್ತಾ; ತಿಂಗಳಿಗೆ ಕೋಟಿಗಟ್ಟಲೆ ಆದಾಯ ಮಾಡುತ್ತಿರುವ ನಟಿ
Nov 20, 2024, 16:14 IST
|
ಮಿಡಲ್ ಕ್ಲಾಸ್ ಕುಟುಂಬದಿಂದ ಬಂದಿರುವ ಮೋಕ್ಷಿತಾ ಪೈ ಪಾರು ಧಾರವಾಹಿಯಿಂದ ಫೇಮಸ್ ಹೌದು ಇವರು ಮಾಡಿರೋದು ಒಂದು ಸೀರಿಯಲ್ ಆದ್ರೂ ಸಿಕ್ಕಾಪಟ್ಟೆ ಅಭಿಮಾನಿಗಳ ಹೊಂದಿದ್ದಾರೆ. ತಮ್ಮದೇ ಯು ಟ್ಯೂಬ್ ಚಾನಲ್ ಅಲ್ಲಿ ಆಗಾಗ ಬಟ್ಟೆ ಚಪ್ಪಲಿ ಬ್ಯಾಗ್ ಗಳ ಬಗ್ಗೆ ಮಾಹಿತಿ ನೀಡಿ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಬಿಗ್ ಬಾಸ್ ಮೋಕ್ಷಿತಾ ಪೈ ಮನ ಬಿಚ್ಚಿ ಮಾತನಾಡಿದ್ದಾರೆ. ಮನದಲ್ಲಿರೋ ನೋವು ಏನಿದೆ ಅದನ್ನು ಹೇಳಿಕೊಂಡಿದ್ದಾರೆ. ಮದುವೆ ಆಗುವಂತೆ ಮನೆ ಮಂದಿ ಕೂಡ ಒತ್ತಾಯಿಸುತ್ತಿದ್ದಾರೆ. ಆದರೆ, ಮನೆಯ ಮಂದಿಯ ಒತ್ತಡದ ಮಧ್ಯೆನೂ ಮೋಕ್ಷಿತಾ ಮದುವೆ ಆಗೋಕೆ ಮನಸು ಮಾಡ್ತಿಲ್ಲ. ಅದಕ್ಕೆ ಏನು ಕಾರಣ ಅನ್ನೋದನ್ನ ಕೂಡ ಮೋಕ್ಷಿತಾ ಪೈ ಹೇಳಿಕೊಂಡಿದ್ದಾರೆ.
ಆದರೂ ಮದುವೆ ಆಗುವಂತೆ ಒತ್ತಡ ಕಳೆದ ಒಂದು ವರ್ಷದಿಂದಲೂ ಜಾಸ್ತಿ ಆಗಿದೆ. ಈ ಬಗ್ಗೆ ಮೋಕ್ಷಿತಾ ಪೈ ಮುಕ್ತವಾಗಿಯೇ ಹೇಳಿಕೊಂಡಿದ್ದಾರೆ. ನನ್ನ ಮನೆಯಲ್ಲಿ ಸದ್ಯ ಮದುವೆ ಒತ್ತಡ ಇದೆ. ಮದುವೆ ಆಗುವ ಅಂತ ಕಳೆದ ಒಂದು ವರ್ಷದಿಂದ ಅಪ್ಪ ಮತ್ತು ಅಮ್ಮ ಹೇಳ್ತಾನೇ ಇದ್ದಾರೆ. ಆದರೆ, ಮದುವೆ ಆಗೋಕೆ ನನಗೆ ಭಯ ಇದೆ. ಆ ಭಯಕ್ಕೆ ಒಂದು ಕಾರಣ ಕೂಡ ಇದೆ ಅಂತ ಮೋಕ್ಷಿತಾ ಪೈ ಹೇಳಿಕೊಂಡಿದ್ದಾರೆ.
ನಾನು ಮದುವೆ ಆದ್ರೆ ನನ್ನ ಅಪ್ಪ ಅಮ್ಮನನ್ನ ನೋಡೋರು ಯಾರು? ನನ್ನ ತಮ್ಮ ವಿಶೇಷ ಚೇತನನೇ ಆಗಿದ್ದಾನೆ. ಹಾಗಾಗಿಯೇ ನಮ್ಮ ತಂದೆ-ತಾಯಿಗೆ ನಾನು ಮಗ ಮತ್ತು ಮಗಳು ಎರಡೂ ಆಗಿದ್ದೇನೆ. ಆದರೆ, ಮದುವೆ ಒತ್ತಡ ಜಾಸ್ತಿನೇ ಆಗಿದೆ ಅಂತಲೂ ಮೋಕ್ಷಿತಾ ಹೇಳಿಕೊಂಡಿದ್ದಾರೆ.
ಸಾಮಾನ್ಯವಾಗಿ ಸೀರೆಯಲ್ಲಿ ಕಾಣಿಸಿಕೊಳ್ಳೋ ಇವರಿಗೆ ವಿವಿಧ ಬಗೆಯ ಚಪ್ಪಲಿ ಕೊಳ್ಳೋದು ಅಂದ್ರೆ ಇಷ್ಟವಂತೆ. ಹಾಗಾಗಿ ಇವರು ಆಗಾಗ ಚಪ್ಪಲಿ ಖರೀದಿ ಮಾಡ್ತಾನೆ ಇರ್ತಾರಂತೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.