ಲಕ್ಷ್ಮೀನಿವಾಸ ಸೀರಿಯಲ್ ಸೈಕೋ ಜಯಂತ್ ಯಾರ ಮಗ ಗೊತ್ತಾ, ಇವರ ಬ್ಯಾಗ್ರೌಂಡ್ ಕೇಳಿದ್ರೆ ಬೆಚ್ಚಿಬೀಳ್ತೀರಾ

 | 
Ue
 ಲಕ್ಷ್ಮೀ ನಿವಾಸ ಸೀರಿಯಲ್ ತನ್ನ ವಿಭಿನ್ನ ಕಥೆಯ ಮೂಲಕ ಜನಪ್ರಿಯತೆ ಗಳಿಸಿದೆ, ಅದರ ಜೊತೆಗೆ ಧಾರಾವಾಹಿಯಲ್ಲಿ ಸದ್ಯ ಜಾಹ್ನವಿಯನ್ನು ಮದುವೆಯಾಗಲು ಬಂದಿರುವ ಜಯಂತ್ ಪಾತ್ರ ಕೂಡ ಜನರನ್ನು ತುಂಬಾನೆ ಇಂಪ್ರೆಸ್ ಮಾಡಿದೆ.ಕಾಲೇಜಿನಲ್ಲಿ ಜಾಹ್ನವಿಯನ್ನು ನೋಡಿ ಇಂಪ್ರೆಸ್ ಆಗಿ, ಅದೇ ದಿನ ಆಕೆಯ ಮನೆಗೆ ಹೋಗಿ, ಹೆಣ್ಣು ಕೇಳಿ, ಎಂಗ್ನೇಜ್ ಮೆಂಟ್ ಕೂಡ ಮಾಡ್ಕೊಂಡು, ತುಂಬಾ ವಿನಯದಿಂದ ಎಲ್ಲರ ಜೊತೆ ಹೊಂದಿಕೊಳ್ಳುವ ಜಯಂತ್ ಬೇರೆ ಯಾರೂ ಅಲ್ಲ ಅವರು ದೀಪಕ್ ಸುಬ್ರಹ್ಮಣ್ಯ.
ತನ್ನ ಅತಿ ವಿನಯದ ನಡವಳಿಕೆಯಿಂದ ಮನೆಯವರನ್ನು ಇಂಪ್ರೆಸ್ ಮಾಡಿರುವ, ಜೊತೆಗೆ ಜಾಹ್ನವಿಯ ಆಸೆಗಳನ್ನೆಲ್ಲಾ ತಿಳಿದು ಅದನ್ನು ಈಡೆರಿಸುವ ಮೂಲಕ ಆಕೆಯ ಮನಸ್ಸನ್ನು ಗೆದ್ದಿರುವ, ಜೊತೆಗೆ ಈ ಅತಿ ವಿನಯವೇ ಮುಂದೊಂದು ದಿನ ಮುಳ್ಳಾಗುವುದೇ, ಇವನೇ ವಿಲನ್ ಆಗುವನೇ ಎನ್ನುವ ಸಣ್ಣ ಡೌಟ್ ವೀಕ್ಷಕರಲ್ಲಿ ಮೂಡಿಸಿದ ಪಾತ್ರ ಜಯಂತ್ ದಾಗಿತ್ತು. ಅದೀಗ ನಿಜವಾಗಿದೆ.
ಅನಾಥನಾಗಿ ಬೆಳೆದಿರುವ, ಊರಿನ ಅತಿ ದೊಡ್ಡ ಬ್ಯುಸಿನೆಸ್ ಮೆನ್, ಜೊತೆಗೆ ಸಣ್ಣ ವಯಸ್ಸಿನಲ್ಲಿ ಬಹಳ ಸಾಧನೆ ಮಾಡಿದರೂ ವಿನಯವಂತಿಕೆಯನ್ನು ಉಳಿಸಿಕೊಂಡಿರುವ ಹಾಗೂ ಮುದ್ದು ಪೆದ್ದು ಜಾಹ್ನವಿಗೆ ಜೋಡಿಯಾಗಿರುವ ಜಯಂತ್ ತಮ್ಮ ಪಾತ್ರದ ಮೂಲಕವೇ ಜನರ ಮನಸ್ಸನ್ನು ಗೆದ್ದಿದ್ದಾರೆ.  ಹೆಂಡತಿಯನ್ನು ಅತಿಯಾಗಿ ಪ್ರೀತಿಸುವ ಅನುಮಾನ ವ್ಯಕ್ತಪಡಿಸುವ ಗಂಡನ ಪಾತ್ರದಲ್ಲಿ ಜಯಂತ್ ಗೆದ್ದಿದ್ದಾರೆ.
ಜಯಂತ್ ಪಾತ್ರದಲ್ಲಿ ಅಭಿನಯಿಸಿರುವ ದೀಪಕ್ ಸುಬ್ರಹ್ಮಣ್ಯ ಈ ಹಿಂದೆ ದಾಸ ಪುರಂದರ ಧಾರಾವಾಹಿಯಲ್ಲಿ ಶ್ರೀನಿವಾಸ ನಾಯ್ಕ್ ಆಗಿ ಅದ್ಭುತವಾಗಿ ಅಭಿನಯಿಸಿದ್ದರು. ಅವರ ಪಾತ್ರವನ್ನು ಜನರು ಸಹ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಇಲ್ಲಿಗೆ ಲಕ್ಷ್ಮೀ ನಿವಾಸದ ಜಯಂತ್ ಆಗಿ ಮಿಂಚುತ್ತಿದ್ದಾರೆ ದೀಪಕ್. ಮೂಲತಃ ಸಾಫ್ಟ್ ವೇರ್ ಇಂಜಿನಿಯರ್ ಆಗಿ ದುಡಿಯುತ್ತಿದ್ದ ದೀಪಕ್ ಗೆ ಬಾಲ್ಯದಲ್ಲೇ ನಟನೆಯ ಮೇಲೆ ಎಲ್ಲಿಲ್ಲದ ಆಸಕ್ತಿ, ಹಾಗಾಗಿ ಕಳೆದ 20 ವರ್ಷಗಳಿಂದ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದಾರೆ ಈ ನಟ. ನೂರಾರು ನಾಟಕಗಳಲ್ಲೂ ನಟಿಸಿದ್ದಾರೆ. 
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.