ಮುದ್ದಾದ ಚೆಲುವೆ ಈ ಯುವಕನಿಗೆ ಎಲ್ಲವೂ ಕೊಟ್ಟು ಕೊನೆಗೆ ವಿ.ಷ ಹಾಕಿದ್ದು ಯಾಕೆ ಗೊತ್ತಾ

 | 
ಹೀಗಗಾ

ಜ್ಯೋತಿಷಿ ಹೇಳಿದ ಮಾತು ಕೇಳಿ ಹುಡುಗಿಯೊಬ್ಬಳು ತನ್ನ ಪ್ರಿಯಕನಿಗೆ ವಿಷಪ್ರಾಶನ ಮಾಡಿ ಸಾಯಿಸಿರುವ ಘಟನೆ ಕೇರಳದ ತಿರುವನಂತಪುರಂ ನಲ್ಲಿ ನಡೆದಿತ್ತು. ರೇಡಿಯಾಲಜಿ ವಿದ್ಯಾರ್ಥಿ ಶರೋನ್ ರಾಜ್ ಎಂದು ಗುರುತಿಸಲಾಗಿದ್ದು, ಅಕ್ಟೋಬರ್ 25ರಂದು ಈತ ಮೃತಪಟ್ಟಿದ್ದ.

ಗ್ರೀಷ್ಮಾ ಮತ್ತು ಶರೋನ್ ಒಂದು ವರ್ಷದಿಂದ ರಿಲೇಶನ್ ಶಿಪ್‍ನಲ್ಲಿದ್ದರು. ಅಲ್ಲದೇ ಮನೆಯವರು ಗ್ರೀಷ್ಮಾಗೆ ಬೇರೆಯವರೊಂದಿಗೆ ಮದುವೆ ನಿಶ್ಚಯ ಮಾಡಿದ್ದರು. ಫೆಬ್ರವರಿಯಿಂದ ಗ್ರೀಷ್ಮಾ ಹಾಗೂ ಶರೋನ್ ನಡುವೆ ಕೆಲವು ಮನಸ್ತಾಪಗಳು ಪ್ರಾರಂಭವಾಯಿತು. ಹೀಗಿದ್ದರೂ ಇಬ್ಬರೂ ರಿಲೇಶನ್ ಶಿಪ್ ಮಂದುವರೆಸಿದರು. 

ಆದರೆ ಇತ್ತೀಚೆಗೆ ಇವರಿಬ್ಬರ ನಡುವೆ ಮನಸ್ತಾಪ ಹೆಚ್ಚಾಗಿದ್ದರಿಂದ ಶರೋನ್ ಅನ್ನು ಬಿಡುವ ಸಲುವಾಗಿ, ವಿಷ ನೀಡಿ ಕೊಲ್ಲಲು ನಿರ್ಧರಿಸಿದಳು. ಮೊದಲಿಗೆ ಸಮಾಧಾನದಿಂದ ಮೃದು ಸ್ವಭಾವದಿಂದ ಬ್ರೇಕ್ ಅಪ್ ಮಾಡಿಕೊಳ್ಳೋಣ ಎಂದು ತಿಳಿಸಿದಳು. ಆದರೆ ಇದಕ್ಕೆ ಶರೋನ್ ರಾಜ್ ನಿರಾಕರಿಸಿದ್ದಾನೆ. ಆತನನ್ನು ಕೊಲೆ ಮಾಡಲು ಮೊದಲೇ ಪ್ರೀ ಪ್ಲಾನ್ ಮಾಡಿದ್ದ ಗ್ರೀಷ್ಮಾ ಅಕ್ಟೋಬರ್ 14 ರಂದು ಶರೋನ್ ರಾಜ್ ಅನ್ನು ಮನೆಗೆ ಕರೆಸಿಕೊಂಡಿದ್ದಳು. 

ಈ ವೇಳೆ ಕಷಾಯದೊಂದಿಗೆ ಕೀಟನಾಶಕವನ್ನು ಬೆರೆಸಿ ಕುಡಿಸಿದ್ದಾಳೆ. ಇದಾದ ಬಳಿಕ ಪ್ರಿಯಕರ ವಾಂತಿ ಮಾಡಿಕೊಳ್ಳಲು ಆರಂಭಿಸಿ, ಬಳಿಕ ಸ್ನೇಹಿತನೊಂದಿಗೆ ತೆರಳಿದನು. ಅಕ್ಟೋಬರ್ 25 ರಂದು ಶರೋನ್ ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟನು. ಆತನ ಸಾವಿಗೆ ಪ್ರೇಯಸಿಯೇ ಕಾರಣ ಎಂದು ಶರೋನ್ ಕುಟುಂಬಸ್ಥರು ಆರೋಪಿಸಿದ್ದರು.

ಒಟ್ಟಿನಲ್ಲಿ ಕೇರಳದಲ್ಲಿ ಭಾರೀ ಕೋಲಾಹಲ ಎಬ್ಬಿಸಿದ್ದ ಶರೋನ್ ರಾಜ್​ ಕೊಲೆ ಪ್ರಕರಣದ ಪ್ರಮುಖ ಆರೋಪಿ ಗ್ರೀಷ್ಮಾಳಿಗೆ ಜಾಮೀನು ಸಿಕ್ಕಿದ್ದು, ಬರೋಬ್ಬರಿ 111 ದಿನಗಳ ಬಳಿಕ ಮಂಗಳವಾರ ರಾತ್ರಿ ಜೈಲಿನಿಂದ ಹೊರಬಂದಿದ್ದಾಳೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.