ಕೆ.ಶಿವರಾಂ ದೇಹ ಮುಚ್ಚಲು ವಿಶೇಷ ಗುಂಡಿ ಅಗೆಯಲು ಹೇಳಿದ ಡಾಕ್ಟರ್; ಶಿವರಾಮ್ ಅವರಿಗೆ ಬಂದಿದ್ದ ಖಾಯಿಲೆ ಏನು ಗೊ.ತ್ತಾ

 | 
ುಪಹ

ಮಾಜಿ ಐಎಎಸ್ ಅಧಿಕಾರಿ, ನಟ ಕೆ ಶಿವರಾಮ್ ಅವರ ಅಂತ್ಯಕ್ರಿಯೆ ಅವರ ಹುಟ್ಟೂರಾದ ಊರಗವಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಕುಟುಂಬಸ್ಥರು, ಛಲವಾದಿ ಮಹಾಸಭಾದ ಸದಸ್ಯರು, ಸ್ವಾಮೀಜಿಗಳು, ಕುಟುಂಬಸ್ಥರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಶಿವರಾಮ್ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯ್ತು. ಶಿವರಾಮ್ ಅವರಿಗೆ ಸರ್ಕಾರಿ ಗೌರವಗಳು ದೊರೆಯಲಿಲ್ಲವೆಂಬ ಬೇಸರದ ನಡುವೆಯೇ ಅಭಿಮಾನಿಗಳು, ಕುಟುಂಬಸ್ಥರು ಶಿವರಾಮ್ ಅವರಿಗೆ ಅಂತಿಮ ವಿದಾಯ ಹೇಳಿದರು.

ಶಿವರಾಮ್ ಅವರು ಫೆಬ್ರವರಿ 29ರಂದು ನಿಧನ ಹೊಂದಿದ್ದರು, ಮಾರ್ಚ್ 1 ರ ಮುಂಜಾನೆಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಿಎಂ ಸಿದ್ದರಾಮಯ್ಯ, ಉಪಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಸಚಿವರುಗಳು, ಶಾಸಕರು, ಬಿಜೆಪಿ ಮುಖಂಡರುಗಳು ಆಗಮಿಸಿ ಶಿವರಾಮ್ ಅವರ ಅಂತಿಮ ದರ್ಶನ ಪಡೆದರು. ಚಿತ್ರರಂಗದ ಹಲವು ಗಣ್ಯರು ಸಹ ಆಗಮಿಸಿ ಅಂತಿಮ ದರ್ಶನ ಪಡೆದರು.

ಶಿವರಾಮ್ ಅವರ ಅಂತ್ಯಸಂಸ್ಕಾರಕ್ಕೆ ಸರ್ಕಾರ ಜಾಗ ನೀಡುತ್ತದೆ, ಅವರಿಗೆ ಸರ್ಕಾರಿ ಗೌರವಗಳು ನೀಡಲಾಗುತ್ತದೆ ಎಂಬ ಭರವಸೆ ದೊರಕಿತ್ತು, ಕುಟುಂಬಸ್ಥರು, ಅಭಿಮಾನಿಗಳು ಸಹ ಸರ್ಕಾರದ ಮಾತನ್ನು ನಂಬಿ ಬೆಳಿಗಿನಿಂದ ಕಾದಿದ್ದೇ ಬಂತು ಆದರೆ ಸರ್ಕಾರದಿಂದ ಗೌರವ ಲಭಿಸಲಿಲ್ಲ. ಛಲವಾದಿ ಮಹಾಸಭಾದ ಜಾಗದಲ್ಲಿಯೇ ಅವರ ಅಂತ್ಯಸಂಸ್ಕಾರ ಮಾಡಲು ಸಹ ಸಂಘದ ಸದಸ್ಯರು ತೀರ್ಮಾನಿಸಿದರು. ಆದರೆ ಕೊನೆಯ ಕ್ಷಣದಲ್ಲಿ ಅದನ್ನೂ ಸಹ ಬದಲಾವಣೆ ಮಾಡಲಾಯ್ತು. ಅಂತಿಮವಾಗಿ ಶಿವರಾಮ್ ಅವರ ಹುಟ್ಟೂರಾದ ಊರಗವಳ್ಳಿಯಲ್ಲಿಯೇ ಶಿವರಾಮ್ ಅವರ ಅಂತ್ಯ ಸಂಸ್ಕಾರ ನೆರವೇರಿತು.

ಅಂತ್ಯಸಂಸ್ಕಾರದ ವೇಳೆ ಛಲವಾದಿ ಮಹಾಸಭಾ ಸದಸ್ಯರು ‘ಜೈ ಭೀಮ್’ ಘೋಷಣೆಗಳನ್ನು ಕೂಗಿದರು. ಶಿವರಾಮ್ ಅವರ ಅಳಿಯ, ನಟ ಪ್ರದೀಪ್ ಅವರು ಅಂತ್ಯಸಂಸ್ಕಾರದ ವಿಧಿ-ವಿಧಾನಗಳನ್ನು ನೆರವೇರಿಸಿದರು. ಬಡ ಕುಟುಂಬದಲ್ಲಿ ಜನಿಸಿ ಹೋರಾಟದ ಜೀವನ ನಡೆಸಿ ತಾನು ಕನಸು ಕಂಡಂತೆ ಐಎಎಸ್ ಅಧಿಕಾರಿಯಾಗಿ ಜೊತೆಗೆ ಸಿನಿಮಾ ನಾಯಕರೂ ಅದ ಶಿವರಾಮ್, ಹಲವರಿಗೆ ಸ್ಪೂರ್ತಿಯಾಗಿದ್ದರು. ಹಾಗಾಗಿ ಅಭಿಮಾನಿಗಳು ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.