ವಿಪರೀತ ಬೆನ್ನುನೋವು ಹಿನ್ನೆಲೆ ದಾಸನಿಗೆ ಇನ್ನುಮುಂದೆ ಆ ಕೆಲಸ ಅಸಾಧ್ಯ ಎಂದ ಡಾಕ್ಟರ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ಯಾನ್ಸ್ ಇಂಥದ್ದೊಂದು ಸೀನ್ಗೆ ಕಾದು ಕುಳಿತಿದ್ರು. ರೇಣುಕಾಸ್ವಾಮಿ ಕೇಸ್ನಲ್ಲಿ ದರ್ಶನ್ ಜೈಲು ಸೇರಿದ್ರು. 131 ದಿನಗಳೇ ಉರುಳಿದ್ರೂ ಬೇಲ್ ಅನ್ನೋ ರಿಲೀಫ್ ಸಿಕ್ಕಿರ್ಲಿಲ್ಲ. ದರ್ಶನ್ ಫ್ಯಾನ್ಸ್ ಅಂತೂ ಬಾಸ್ಗೆ ಯಾವಾಗ ಬೇಲ್ ಸಿಗುತ್ತೆ? ಅದ್ಯಾವಾಗ ರಿಲೀಸ್ ಆಗ್ತಾರೆ ಅಂತ ಬಕಪಕ್ಷಿಗಳಂತೆ ಕಾದಿದ್ರು. ಡಿ ಫ್ಯಾನ್ಸ್ ನಿರೀಕ್ಷೆ, ದರ್ಶನ್ ಪತ್ನಿ ಹರಕೆ ಕೊನೆಗೂ ಫಲಿಸಿದೆ.
ಬೆನ್ನು ನೋವಿನ ಸಮಸ್ಯೆ ಹೇಳಿಕೊಂಡು ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದು, ಕೋರ್ಟ್ 131 ದಿನಗಳ ಜೈಲುವಾಸದ ಬಳಿಕ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.ಹೈಕೋರ್ಟ್ ನೀಡಿದ ತೀರ್ಪಿನ ಬಳಿಕವೂ ಒಂದಷ್ಟು ಪ್ರಕ್ರಿಯೆ ಪಾಲಿಸಬೇಕಿತ್ತು. ಹೈಕೋರ್ಟ್ ನೀಡಿದ ಬೇಲ್ ಮಂಜೂರಾತಿ ಪ್ರತಿಯನ್ನು 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಅಲ್ಲಿಂದ ಮತ್ತೆ ರಿಲೀಸ್ ಆರ್ಡರ್ ಪಡೆಯಬೇಕು.
ಆ ಆರ್ಡರ್ ಕಾಪಿಯನ್ನು ಬಳ್ಳಾರಿ ಜೈಲಿಗೆ ಸಲ್ಲಿಸಬೇಕು. ಆ ಬಳಿಕವೇ ದರ್ಶನ್ ರಿಲೀಸ್ ಪ್ರಕ್ರಿಯೆ ಮುಗಿಯುತ್ತದೆ. ಹಾಗಾಗಿಯೇ ದರ್ಶನ್ ಸೋದರ ದಿನಕರ್ ಬೆಂಗಳೂರಿನಲ್ಲಿದ್ರೆ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಬಳ್ಳಾರಿಯಲ್ಲಿದ್ದರು.ಹೈಕೋರ್ಟ್ ಜಾಮೀನು ಮಂಜೂರಾತಿಗೆ ಇಬ್ಬರ ಶ್ಯೂರಿಟಿ ಕೇಳಿತ್ತು. ಹಾಗಾಗಿಯೇ ನಟ ಧನ್ವೀರ್ ಹಾಗೂ ಸೋದರ ದಿನಕರ್ ಶ್ಯೂರಿಟಿ ನೀಡಿದ್ದಾರೆ.
ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್ ಆಗಿ ಇಂದಿಗೆ 63 ದಿನ. ಆಗಸ್ಟ್ 29ರಂದು ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದರು. ವಿಜಯಲಕ್ಷ್ಮಿ 10 ಬಾರಿ ಬಳ್ಳಾರಿ ಜೈಲಿಗೆ ಆಗಮಿಸಿ ದರ್ಶನ್ರನ್ನು ಭೇಟಿ ಮಾಡಿದ್ದರು. ಇದೀಗ ಅಮ್ಮನ ಮಡಿಲು ಸೇರುವ ತವಕದಲ್ಲಿದ್ದಾರೆ. ಅಲ್ಲೇ ದೀಪಾವಳಿ ಆಚರಿಸುವ ಸಾಧ್ಯತೆ ಇದೆ.ಹೈಕೋರ್ಟ್ ವಿಧಿಸಿರೋ ಒಂದೊಂದು ಕಂಡೀಷನ್ ನೋಡಿದ್ರೂ, ಕಾಟೇರ ಕೆಮ್ಮಂಗೂ ಇಲ್ಲ. ಬೇಕಾದ ಜಾಗಕ್ಕೆ ಹೋಗುವಂತೆಯೂ ಇಲ್ಲ. ಎಲ್ಲಕ್ಕಿಂತಲೂ ಮೊದಲು ಡಿ ಫ್ಯಾನ್ಸ್ ದರ್ಶನ್ಗಾಗಿ ಆದ್ರೂ ಸೈಲೆಂಟಾಗಿ ಇರೋದು ತುಂಬಾ ಒಳ್ಳೆಯದು ಅನ್ನಬಹುದು.
ಈ ರೀತಿಯ ಪ್ರಕರಣದಲ್ಲಿ ಹೊರ ಬಂದ ಬಳಿಕ ಆರೋಪಿಗಳು ವಿದೇಶಕ್ಕೆ ಹಾರುವ ಸಾಧ್ಯತೆ ಇರುತ್ತದೆ. ಹಾಗಾದಲ್ಲಿ ಅವರನ್ನು ಮರಳಿ ತರೋದು ಕಷ್ಟ. ಹೀಗಾಗಿ ಪಾಸ್ಪೋರ್ಟ್ನ ಕೋರ್ಟ್ಗೆ ಸರೆಂಡರ್ ಮಾಡಬೇಕು ಎಂದು ಕೋರ್ಟ್ ದರ್ಶನ್ಗೆ ಸೂಚನೆ ನೀಡಿದೆ. ಫ್ಲೈಟ್ ರಿಸ್ಕ್ ಇದೆಯಾ ಎಂದು ಜಡ್ಜ್ ಪ್ರಶ್ನೆ ಮಾಡಿದ್ದರು. ಪಾಸ್ಪೋರ್ಟ್ ವಶಕ್ಕೆ ಪಡೆಯುವ ಷರತ್ತು ವಿಧಿಸಲು ಸರ್ಕಾರಿ ಪರ ವಕೀಲರು ಮನವಿ ಮಾಡಿದ್ದರು.
ಈ ಮನವಿ ಹಿನ್ನೆಲೆಯಲ್ಲಿ ಪಾಸ್ಪೋರ್ಟ್ ಸರೆಂಡರ್ ಮಾಡಲು ಆದೇಶ ನೀಡಲಾಗಿದೆ. ಮಾಧ್ಯಮಕ್ಕೂ ಕಾಣಿಸಿ ಕೊಳ್ಳುವ ಹಾಗಿಲ್ಲ. ತಿರುಗಿ ಮಾತನಾಡುವ ಹಾಗಿಲ್ಲ.ಬೆಂಗಳೂರಿನಲ್ಲಿ ತಮ್ಮ ಇಚ್ಛೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಆದೇಶ ಹೊರಡಿಸಲಾಗಿದೆ. ಹಾಗಾಗಿಯೇ ದರ್ಶನ್ ಬೆನ್ನು ನೋವಿಗೆ ಬೆಂಗಳೂರಿನಲ್ಲಷ್ಟೇ ಚಿಕಿತ್ಸೆ ಪಡೆಯೋದಕ್ಕೆ ಅವಕಾಶವಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.