ಭಯ ಪಡಬೇಡ ನಾನಿದ್ದೇನೆ, ತಮಿಳು ‌ನಟ ವಿಶಾಲ್‌ಗೆ ಧೈರ್ಯ ‌ತುಂಬಿದ ತುಳುನಾಡಿನ ದೈವ

 | 
Hd
ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದ ತಮಿಳು ನಟ ವಿಶಾಲ್‌ ಅವರು ಕರ್ನಾಟಕಕ್ಕೆ ಆಗಮಿಸಿದ್ದಾರೆ. ಇತ್ತೀಚೆಗೆ ಅವರು ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾಗಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದರು. ಸದ್ಯ ಅವರ ಆರೋಗ್ಯ ಚೇತರಿಸಿಕೊಂಡಿದ್ದರೂ ವಿಶಾಲ್‌ ದೇವಸ್ಥಾನಗಳಿಗೆ ಭೇಟಿ ನೀಡಿ ಆರೋಗ್ಯದ ಕಾಳಜಿ ವಹಿಸಿದ್ದಾರೆ. ತುಳುನಾಡಿನ ದೇವಸ್ಥಾನಗಳಿಗೆ ಭೇಟಿ ನೀಡುತ್ತಾ ವಿಶಾಲ್‌ ಟೆಂಪಲ್‌ ರನ್‌ ಮಾಡುತ್ತಿದ್ದಾರೆ.
ವಿಶಾಲ್‌ ಅವರು ಕರ್ನಾಟಕದ ಮಂಗಳೂರಿಗೆ ಭೇಟಿ ನೀಡಿದ್ದಾರೆ. ತುಳುನಾಡಿನ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿ ಅವರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಂಗಳೂರಿನ ಮುಲ್ಕಿ ತಾಲ್ಲೂಕಿನ ಹರಿಪಾದದಲ್ಲಿನ ಜಾರಂದಾಯ ದೇವಾಲಯಕ್ಕೆ ಭೇಟಿ ನೀಡಿದ ವಿಶಾಲ್, ತನ್ನ ಆರೋಗ್ಯ ಸಮಸ್ಯೆ ಪರಿಹರಿಸುವಂತೆ ದೈವಕ್ಕೆ ವಿಶೇಷ ಮಲ್ಲಿಗೆ ಹೂವು ಅರ್ಪಿಸಿ ಬೇಡಿಕೊಂಡಿದ್ದಾರೆ. 
ನನ್ನ ಆರೋಗ್ಯ ಸರಿ ಹೋದರೆ ಮುಂದಿನ ಸಲ ನೇಮೋತ್ಸವದ ವೇಳೆ ಕ್ಷೇತ್ರದಲ್ಲಿ ತುಲಾಭಾರ ಸೇವೆ ಮಾಡುತ್ತೇನೆ ಎಂದು ಹರಕೆಯೂ ಕಟ್ಟಿಕೊಂಡಿದ್ದಾರೆ.ಈ ವೇಳೆ ಕೈಸನ್ನೆ ಮೂಲಕ ಜಾರಂದಾಯ ದೈವವು ವಿಶಾಲ್‌ ಅವರಿಗೆ ಅಭಯ ನೀಡಿದೆ. ನಿನ್ನ ಆರೋಗ್ಯ ಸರಿಯಾಗಲಿದೆ, ನೀನು ತುಂಬಾ ಸಮಸ್ಯೆಯಲ್ಲಿದ್ದೀಯ, ಕಣ್ಣೀರು ಹಾಕಬೇಡ, ನಾನಿದ್ದೇನೆ ಎಂದು ಹೇಳಿದೆ. ಬಳಿಕ ಮೂರು ಗಂಟೆಗಳ ಕಾಲ ವಿಶಾಲ್‌ ದೈವ ಕೋಲದಲ್ಲಿ ಭಾಗಿಯಾಗಿ ಅಲ್ಲಿ ಪ್ರಸಾದ ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ.
ರಿಷಬ್‌ ಶೆಟ್ಟಿ ಅವರ ಕಾಂತಾರ ಸಿನಿಮಾದಲ್ಲಿ ದೈವ ಹಾಗೂ ತುಳುನಾಡಲ್ಲಿ ನಡೆಯುವ ನೇಮೋತ್ಸವದ ಬಗ್ಗೆ ನೋಡಿದ್ದೆ. ಈಗ ಮೊದಲ ಬಾರಿಗೆ ತುಳುನಾಡ ನೇಮೋತ್ಸವವನ್ನು ಕಣ್ಣಾರೆ ನೋಡಿದೆ. ಇದರಿಂದ ನನಗೆ ತುಂಬಾ ಖುಷಿಯಾಗಿದೆ. ನಿನ್ನೆ ನಾನು ಕೊಲ್ಲೂರು ಮುಕಾಂಬಿಕೆಯ ದರ್ಶನ ಕೂಡ ಪಡೆದೆ ಎಂದು ನಟ ವಿಶಾಲ್‌ ಇಲ್ಲಿನ ದೇವಸ್ಥಾನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.