ಸನಾತನ ಧರ್ಮದ ವಿಚಾರಕ್ಕೆ ಬರಬೇಡ; ನಾನು ಸಮ್ಮನಿರಲ್ಲ ಎಂದು ವಾರ್ನಿಂಗ್ ಕೊಟ್ಟ ಕಲ್ಯಾಣ್ ಕುಮಾರ್

 | 
Hj
ತಿರುಪತಿ ಲಡ್ಡು ವಿಷಯ ಈಗ ರಾಜಕೀಯ ತಿರುವು ಪಡೆದಿದೆ. ಈ ವಿಚಾರದಲ್ಲಿ ಆಂಧ್ರದ ಉಪ ಮುಖ್ಯಮಂತ್ರಿ ಪವನ್​ ಕಲ್ಯಾಣ್ ಮತ್ತು ನಟ ಪ್ರಕಾಶ್ ನಡುವೆ ಮತ್ತೆ ಮಾತಿನ ಯುದ್ಧ ನಡೆದಿದೆ. ಪ್ರಕಾಶ್ ಹೇಳಿಕೆಗೆ ತಿರುಗೇಟು ನೀಡಿದ ಪವನ್, ಸನಾತನ ಧರ್ಮದ ಮೇಲಿನ ದಾಳಿಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ. 
ಇನ್ನು ಸನಾತನ ಧರ್ಮ ದ ಮೇಲಿನ ದಾಳಿಯ ಬಗ್ಗೆ ತಾನು ಸುಮ್ಮನಿರುವುದಿಲ್ಲ ಎಂದು ಸ್ಪಷ್ಟಪಡಿಸಿದ ನಟ ಪವನ್ ಕಲ್ಯಾಣ್ ಜಾತ್ಯತೀತತೆ ಏಕಮುಖ ಸಂಬಂಧವಲ್ಲ ಎಂದು ನಟ ಪ್ರಕಾಶ್ ರಾಜ್ ವಿರುದ್ಧ ವಾಗ್ದಾಳಿ ನಡೆಸಿದರು.ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬೆರಕೆಯಾಗಿದೆ ಎಂಬ ಆರೋಪದ ಬಳಿಕ  11 ದಿನಗಳ ಪ್ರಾಯಶ್ಚಿತ್ತ ದೀಕ್ಷಾ ಅಂಗವಾಗಿ ಇಲ್ಲಿನ ಕನಕ ದೃಗ ದೇವಸ್ಥಾನದಲ್ಲಿ ಶುದ್ಧೀಕರಣದ ನಂತರ ಜನಸೇನಾ ಮುಖ್ಯಸ್ಥ ಪವನ್ ಈ ಹೇಳಿಕೆ ನೀಡಿದ್ದಾರೆ.
ದೀಕ್ಷೆ ಕೈಂಗೊಂಡಿದ್ದಕ್ಕೆ ಟೀಕಿಸುವವರನ್ನು ಪ್ರಶ್ನಿಸಿದ ಪವನ್ , ನಾನೇಕೆ ಮಾತನಾಡಬಾರದು? ನನ್ನ ಮನೆ ಮೇಲೆ ದಾಳಿ ನಡೆದಾಗ ನಾನು ಮಾತನಾಡಬಾರದೇ? ತಾನು ಬಾಲ್ಯದಿಂದಲೂ ‘ಸನಾತನ ಧರ್ಮ’ದ ಕಟ್ಟಾ ಅನುಯಾಯಿ ಧರ್ಮದ ಮೇಲೆ ದಾಳಿ ನಡೆದರೆ ಸುಮ್ಮನಿರುವುದಿಲ್ಲ. ಪ್ರಕಾಶ್ ರಾಜ್ ಅವರೇ, ನಿಮ್ಮ ಪಾಠಗಳನ್ನು ನೀವು ಕಲಿಯಬೇಕು. ನಾನು ನಿನ್ನನ್ನು ಗೌರವಿಸುತ್ತೇನೆ ಎಂದರು.
ಮುಂದುವರೆದು ಇದು ಕೇವಲ ಪ್ರಕಾಶ್ ರಾಜ್ ಮಾತ್ರವಲ್ಲ, ಜಾತ್ಯತೀತತೆಯ ಹೆಸರಿನಲ್ಲಿ ಯೋಚಿಸುವ ಎಲ್ಲ ಜನರನ್ನು ನೀವು ಅಲೆಯಬಹುದು. ನಮಗೆ ತುಂಬಾ ನೋವಾಗಿದೆ. ನಮ್ಮ ಭಾವನೆಗಳನ್ನು ಅಪಹಾಸ್ಯ ಮಾಡಬೇಡಿ. ಸನಾತನ ಧರ್ಮದ ಬಗ್ಗೆ ಮಾತನಾಡುವ ಮೊದಲು 100 ಬಾರಿ ಯೋಚಿಸಿ. ಇದು ಸಾಕು ಎಂದರು.
ಇನ್ನು ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ನಟ ಪ್ರಕಾಶ್ ರಾಜ್, ಮಾನ್ಯ ಉಪ ಮುಖ್ಯಮಂತ್ರಿಗಳೇ.. ಈ ಘಟನೆ ನಿಮ್ಮ ಆಡಳಿತಾವಧಿಯಲ್ಲಿಯೇ ನಡೆದಿದೆ. ಈಗಾಗಲೇ ದೇಶದಲ್ಲಿ ಹಲವು ಸಮಸ್ಯೆಗಳಿರುವಾಗ ನೀವು ಹೊಸ ಸಮಸ್ಯೆಗಳನ್ನು ಇಲ್ಲಿಗೆ ತರುವುದು ಬೇಡ. ಮೊದಲು ಈ ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಕೆಲಸದಲ್ಲಿ ನಿಮ್ಮ ಗಮನವಿರಲಿ ಎಂದು ಟೀಕಿಸಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.