ಹಿಂದಿನಿಂದ ಮಾಡಬೇಡಿ ಎಂದರು ಬಿಡಲಿಲ್ಲ; ಬಾಲಿವುಡ್ ನ ಟಿ ಗರಂ

 | 
Ch

ಮನೆಯ ಬೆಡ್ ರೂಮ್ ವೊಂದನ್ನ ಹೊರತು ಪಡಿಸಿದರೆ, ಬಾಲಿವುಡ್ ಸ್ಟಾರ್‌ಗಳ ದಿನ ನಿತ್ಯದ ಚಲನ-ವಲನ, ಹಾವ-ಭಾವಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುವ ಪಾಪರಾಜಿಗಳಿಂದ ಹಿಂದಿ ಚಿತ್ರರಂಗದ ತಾರೆಯರ ನೆಮ್ಮದಿಯೇ ಭಂಗವಾಗಿದೆ. ಎಲ್ಲಿ ಹೋದರು ನೆರಳಿನಂತೆ ಹಿಂಬಾಲಿಸುವ ಇವರು, ಬೇಡ ಬೇಡವೆಂದರೂ ಕೆಲವೊಮ್ಮೆ ಫೋಟೋಗಳನ್ನು ಕ್ಲಿಕಿಸುತ್ತಾರೆ. 

ಮಾನಸಿಕ ಕಿರಿಕಿರಿಯನ್ನುಂಟು ಮಾಡುವುದಲ್ಲದೇ ಮುಜುಗರಕ್ಕೀಡು ಮಾಡುತ್ತಾರೆ. ಇದಕ್ಕೆ ಶನಾಯಾ ಕಪೂರ್ ಸದ್ಯದ ತಾಜಾ ಉದಾಹರಣೆ. ಹೌದು, ಅನಿಲ್ ಕಪೂರ್ ಸಹೋದರ ಸಂಜಯ್ ಕಪೂರ್ ಅವರ ಪತ್ನಿ ಮಹೀಪ್ ಕಪೂರ್ ಅವರ ಮುದ್ದಿನ ಮಗಳು ಶನಾಯಾ, ಕಪ್ಪು ಬಣ್ಣದ ಅಥ್ಲೀಶರ್ ನಲ್ಲಿ ಜಿಮ್‌ಗೆ ತೆರಳುತ್ತಿದ್ದರು. ಈ ಸಮಯದಲ್ಲಿ ಶನಾಯಾ ಅವರನ್ನು ಸುತ್ತುವರೆದ ಕ್ಯಾಮರಾ ಗುಂಪು.

ಶನಾಯಾ ಅವರ ಫೋಟೋಗಳನ್ನು ಕ್ಲಿಕಿಸಲು ಮುಂದಾಯಿತು. ಆದರೆ ಇದಕ್ಕೆ ಅಭ್ಯಂತರ ವ್ಯಕ್ತಪಡಿಸಿದ ಶನಾಯಾ ಕೇವಲ ಎದುರುಗಡೆಯಿಂದ ಮಾತ್ರ ತಮ್ಮ ಫೋಟೋಗಳನ್ನು ತೆಗೆಯುವಂತೆ ಕೇಳಿಕೊಂಡರು. ಪ್ಲೀಸ್ ಹಿಂಬದಿಯೆಲ್ಲ ಕ್ಯಾಮರಾ ಹಿಡಿಯಬೇಡಿ ಎಂಬ ಮನವಿಯನ್ನೂ ಮಾಡಿದರು.

ಆದರೆ.. ಆರಂಭದಲ್ಲಿ ಶನಾಯಾ ಮಾಡಿಕೊಂಡ ಈ ಮನವಿಗೆ ಮಣೆ ಹಾಕಿದಂತೆ ವರ್ತಿಸಿದ ಪಾಪರಾಜಿಗಳು, ಶನಾಯಾ ಜಿಮ್‌ಗೆ ತೆರಳುವಾಗ ಹಿಂದಿನಿಂದ ಅವರ ಭಾವ ಚಿತ್ರ ತೆಗೆದಿದ್ದಾರೆ. ವಿಡಿಯೋಗಳನ್ನೂ ಮಾಡಿದ್ದಾರೆ. ಇದನ್ನ ಅರಿತ ಶನಾಯಾ ಕೈಗಳನ್ನು ಹಿಂಭಾಗಕ್ಕೆ ಅಡ್ಡ ಹಿಡಿದುಕೊಂಡೇ ಮೆಟ್ಟಿಲು ಹತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.